ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ: ಧೋನಿ ದಾಖಲೆ ಸರಿದೂಗಿಸಿದ ರೋಹಿತ್ ಶರ್ಮಾ

ಧೋನಿ ಅನುಪಸ್ಥಿತಿಯಲ್ಲಿ ರೋಹಿತ್ ಮಾಡಿದ ದಾಖಲೆ ಯಾವುದು ಗೊತ್ತಾ..? | Rohit Sharma
India vs South Africa: Rohit Sharma joins MS Dhoni in illustrious T20I list

ಬೆಂಗಳೂರು, ಸೆಪ್ಟೆಂಬರ್ 23: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ. ಭಾರತ ಪರ ಅತೀ ಹೆಚ್ಚು ಟಿ20ಐ ಪಂದ್ಯಗಳನ್ನಾಡಿದ ಆಟಗಾರನಾಗಿ ರೋಹಿತ್, ಎಂಎಸ್ ಧೋನಿ ಜೊತೆ ಗುರುತಿಸಿಕೊಂಡಿದ್ದಾರೆ.

ಸಿಕ್ಸರ್‌ ಕಿಂಗ್ ಯುವಿ ಜೆರ್ಸಿಗೆ ವಿಶೇಷ ಗೌರವವೀಯಲು ಗಂಭೀರ ಮನವಿ!ಸಿಕ್ಸರ್‌ ಕಿಂಗ್ ಯುವಿ ಜೆರ್ಸಿಗೆ ವಿಶೇಷ ಗೌರವವೀಯಲು ಗಂಭೀರ ಮನವಿ!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ (ಸೆಪ್ಟೆಂಬರ್ 22) ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್‌ ಭರ್ಜರಿ ಗೆಲುವನ್ನಾಚರಿಸಿತು. ಆರಂಭಿಕ ಬ್ಯಾಟ್‌ಮನ್‌ ರೋಹಿತ್ ಮತ್ತು ನಾಯಕ ವಿರಾಟ್ ಕೊಹ್ಲಿ ಕೇವಲ 9 ರನ್‌ಗೆ ವಿಕೆಟ್‌ ಒಪ್ಪಿಸಿದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

ಸ್ಮಿತ್ ಗಿಂತ ಕೊಹ್ಲಿ ಗ್ರೇಟ್: ಅದಕ್ಕೆ ಜಾಂಟಿ ರೋಡ್ಸ್ ಕೊಟ್ಟ ಕಾರಣವೇನು?ಸ್ಮಿತ್ ಗಿಂತ ಕೊಹ್ಲಿ ಗ್ರೇಟ್: ಅದಕ್ಕೆ ಜಾಂಟಿ ರೋಡ್ಸ್ ಕೊಟ್ಟ ಕಾರಣವೇನು?

3ನೇ ಪಂದ್ಯದ ಮುಕ್ತಾಯದ ಬಳಿಕ 3 ಪಂದ್ಯಗಳ ಟಿ20 ಸರಣಿಯಲ್ಲಿ (1 ಪಂದ್ಯ ರದ್ದು) ಭಾರತ-ದಕ್ಷಿಣ ಆಫ್ರಿಕಾ ತಂಡಗಳು 1-1ರ ಸಮಬಲ ಸಾಧಿಸಿವೆ.

ಬ್ಯಾಟಿಂಗ್ ವೈಫಲ್ಯ

ಬ್ಯಾಟಿಂಗ್ ವೈಫಲ್ಯ

ಅಂತಿಮ ಟಿ20ಐ ಪಂದ್ಯದಲ್ಲಿ ಭಾರತದ ಸೋಲಿಗೆ ಬ್ಯಾಟಿಂಗ್ ವೈಫಲ್ಯ ಮತ್ತು ಎದುರಾಳಿ ತಂಡದ ಮಾರಕ ಬೌಲಿಂಗ್ ಎರಡೂ ನೆಪವಾಯಿತು. ಭಾರತ ಪರ ಶಿಖರ್ ಧವನ್ 36, ರಿಷಬ್ ಪಂತ್ 19, ಹಾರ್ದಿಕ್ ಪಾಂಡ್ಯ 14, ರವೀಂದ್ರ ಜಡೇಜಾ 19 ರನ್‌ ಸೇರಿಸಿದ್ದೇ ಹೆಚ್ಚು. ಇನ್ಯಾರೂ 10ಕ್ಕೂ ಅಧಿಕ ರನ್ ಗಳಿಸಲಿಲ್ಲ.

ದಾಖಲೆ ಸರಿಸಮ

ದಾಖಲೆ ಸರಿಸಮ

ಬೆಂಗಳೂರು ಪಂದ್ಯದ ಮೂಲಕ ಹಿಟ್‌ಮ್ಯಾನ್ ರೋಹಿತ್, ಅತೀ ಹೆಚ್ಚು ಟಿ20ಐ ಪಂದ್ಯಗಳನ್ನಾಡಿದ ಭಾರತೀಯನಾಗಿ ಧೋನಿ ಜೊತೆ ಗುರುತಿಸಿಕೊಂಡರು. ಧೋನಿ ಮತ್ತು ರೋಹಿತ್ ಇಬ್ಬರೂ ಸದ್ಯ 98 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದಾರೆ.

ಸುರೇಶ್ ರೈನಾ ತೃತೀಯ

ಸುರೇಶ್ ರೈನಾ ತೃತೀಯ

ಧೋನಿ, ರೋಹಿತ್ ಬಳಿಕ ಅತ್ಯಧಿಕ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಭಾರತೀಯರಲ್ಲಿ ಸುರೇಶ್ ರೈನಾ 3ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ರೈನಾ 78 ಪಂದ್ಯಗಳನ್ನು ಆಡಿದ್ದಾರೆ. ಈ ಯಾದಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕಿಂಗ್ ಕೊಹ್ಲಿ 72 ಟಿ20ಐ ಪಂದ್ಯಗಳ ದಾಖಲೆ ಹೊಂದಿದ್ದಾರೆ.

ಅಗ್ರಸ್ಥಾನದಲ್ಲಿ ಪಾಕಿಸ್ತಾನ

ಅಗ್ರಸ್ಥಾನದಲ್ಲಿ ಪಾಕಿಸ್ತಾನ

ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಪಂದ್ಯದ ಸೋಲಿನೊಂದಿಗೆ ಭಾರತ ಸದ್ಯ ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. 5ನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ 3ನೇ ಸ್ಥಾನಕ್ಕೆ ಜಿಗಿದಿದೆ. ಅಗ್ರಸ್ಥಾನದಲ್ಲಿ ಪಾಕಿಸ್ತಾನ ತಂಡವಿದೆ.

Story first published: Monday, September 23, 2019, 0:05 [IST]
Other articles published on Sep 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X