ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್‌ಮ್ಯಾನ್ ರೋಹಿತ್!

India vs South Africa: Rohit Sharma scripts history, beats all Indian openers

ವಿಶಾಖಪಟ್ಟಣ, ಅಕ್ಟೋಬರ್ 3: ಆಂಧ್ರ ಪ್ರದೇಶದ ವಿಶಾಖಪಟ್ನಂನಲ್ಲಿರುವ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್‌ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿದ್ದಾರೆ.

ಭಾರತ ವಿರುದ್ಧವೇ ಪಾದಾರ್ಪಣೆ ಮಾಡಿದ ಭಾರತ ಮೂಲದ ಸೇನುರಾನ್!ಭಾರತ ವಿರುದ್ಧವೇ ಪಾದಾರ್ಪಣೆ ಮಾಡಿದ ಭಾರತ ಮೂಲದ ಸೇನುರಾನ್!

ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಮೊದಲ ಪಂದ್ಯವನ್ನಾಡಿದ್ದ ರೋಹಿತ್ ಶರ್ಮಾ, ಚೊಚ್ಚಲ ಪಂದ್ಯದಲ್ಲೇ ಶತಕ (176 ರನ್) ಬಾರಿಸಿದ್ದಾರೆ. ರೋಹಿತ್‌ ಜೊತೆ ಆರಂಭಿರಾಗಿ ಬಂದಿದ್ದ ಮಯಾಂಕ್ ಅಗರ್ವಾಲ್ ಕೂಡ ಶತಕ ಬಾರಿಸಿದ್ದು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ರನ್ ಕಲೆ ಹಾಕುವುದರಲ್ಲಿದೆ.

ಭಾರತ vs ದಕ್ಷಿಣ ಆಫ್ರಿಕಾ, 1ನೇ ಟೆಸ್ಟ್, 2ನೇ ದಿನ, Live ಸ್ಕೋರ್‌ಕಾರ್ಡ್

1
46113

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಹಿಟ್‌ಮ್ಯಾನ್ ರೋಹಿತ್ ಹಲವಾರು ಅಪರೂಪದ ದಾಖಲೆಗಳಿಗೆ ಕಾರಣರಾಗಿದ್ದಾರೆ.

ಭಾರತದ ಏಕಮಾತ್ರ ಆಟಗಾರ

ಭಾರತದ ಏಕಮಾತ್ರ ಆಟಗಾರ

ವಿಶಾಖಪಟ್ಟಣ ಟೆಸ್ಟ್ ಶತಕ ಮೂಲಕ ರೋಹಿತ್ ತನ್ನ 4ನೇ ಟೆಸ್ಟ್ ಶತಕ ಪೂರೈಸಿಕೊಂಡಂತಾಗಿದೆ. ಅಲ್ಲದೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಏಕಮಾತ್ರ ಭಾರತೀಯ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ವಿಶ್ವದ 8ನೇ ಬ್ಯಾಟ್ಸ್‌ಮನ್

ವಿಶ್ವದ 8ನೇ ಬ್ಯಾಟ್ಸ್‌ಮನ್

ಆರಂಭಿಕರಾಗಿ ಬ್ಯಾಟಿಂಗ್‌ಗೆ ತೆರಳಿ ಟೆಸ್ಟ್‌, ಟಿ20ಐ ಮತ್ತು ಏಕದಿನ ಪಂದ್ಯಗಳಲ್ಲಿ ಶತಕ ಬಾರಿಸಿದ ವಿಶ್ವದ 8ನೇ ಬ್ಯಾಟ್ಸ್‌ಮನ್‌ ಆಗಿ ರೋಹಿತ್ ದಾಖಲೆ ಪಟ್ಟಿ ಸೇರಿಸಿದ್ದಾರೆ. ಈ ಸಾಧನೆಯಲ್ಲಿ ಮೊದಲ 7 ಸ್ಥಾನಗಳಲ್ಲಿ ಕ್ರಿಸ್‌ಗೇಲ್ (ವೆಸ್ಟ್ ಇಂಡೀಸ್), ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್), ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್), ತಿಲಕರತ್ನೆ ದಿಲ್ಶನ್ (ಶ್ರೀಲಂಕಾ), ಅಹ್ಮದ್ ಶಹಝಾದ್ (ಪಾಕಿಸ್ತಾನ), ಶೇನ್ ವ್ಯಾಟ್ಸನ್ (ಅಸ್ಟ್ರೇಲಿಯಾ), ತಮೀಮ್ ಇಕ್ಬಾಲ್ (ಬಾಂಗ್ಲಾದೇಶ) ಇದ್ದಾರೆ.

ಆರಂಭಿಕರಾಗಿ ಬ್ಯಾಟಿಂಗ್‌

ಆರಂಭಿಕರಾಗಿ ಬ್ಯಾಟಿಂಗ್‌

ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಜೋಡಿಯಾಗಿ ಹಿಟ್‌ಮ್ಯಾನ್ ರೋಹಿತ್-ಮಯಾಂಕ್ ಗುರುತಿಸಿಕೊಳ್ಳುವ ಮೂಲಕ 1972ರಲ್ಲಿ ನಿರ್ಮಾಣವಾಗಿದ್ದ 47 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ. ಈ ದಾಖಲೆ ಮಾಜಿ ಆಟಗಾರರಾದ ಸುನಿಲ್ ಗವಾಸ್ಕರ್ ಮತ್ತು ರಾಮ್‌ನಾಥ್ ಪಾರ್ಕರ್ ಹೆಸರಿನಲ್ಲಿತ್ತು.

ದಾಖಲೆಯ ಆರಂಭಿಕ ಆಟ

ದಾಖಲೆಯ ಆರಂಭಿಕ ಆಟ

ರೋಹಿತ್ ಶರ್ಮಾ-ಮಯಾಂಕ್ ಅಗರ್ವಾಲ್ ಜೋಡಿ 317 ರನ್ ಆರಂಭಿಕ ಜೊತೆಯಾಟ ನೀಡಿದೆ. ಇದು ಭಾರತದ ಟೆಸ್ಟ್ ಆರಂಭಿಕ ಜೋಡಿ ನೀಡಿದ 3ನೇ ಅತ್ಯುತ್ತಮ ಜೊತೆಯಾಟ ದಾಖಲೆಗೆ ಕಾರಣವಾಗಿದೆ. ವಿನೋದ್ ಮಂಕದ್-ಪಂಕಜ್ ರಾಯ್ (413 ರನ್), ರಾಹುಲ್ ದ್ರಾವಿಡ್-ವೀರೇಂದ್ರ ಸೆಹ್ವಾಗ್ (410 ರನ್) ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

Story first published: Thursday, October 3, 2019, 12:03 [IST]
Other articles published on Oct 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X