ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟವಾಗುವ ದಿನಾಂಕ ನಿಗದಿ: ರೋಹಿತ್ ಅನುಮಾನ!

India vs South Africa: Selectors to announce team india squad for ODI series after the centurion test

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಹೌದು, ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇತ್ತಂಡಗಳ ನಡುವೆ ಈಗಾಗಲೇ ಟೆಸ್ಟ್ ಸರಣಿ ಆರಂಭವಾಗಿದ್ದು ಚೊಚ್ಚಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಶುರುವಾಗಿದ್ದು ಸೆಂಚೂರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಹೀಗೆ ಮಾಡಿದರೆ ಸಾಕು ಕೊಹ್ಲಿಯೇ ವಿಕೆಟ್ ಒಪ್ಪಿಸಿ ಹೋಗ್ತಾರೆ: ಮತ್ತೆ ಮುಗ್ಗರಿಸಿದ ಕೊಹ್ಲಿ ಕಾಲೆಳೆದ ನೆಟ್ಟಿಗರುಹೀಗೆ ಮಾಡಿದರೆ ಸಾಕು ಕೊಹ್ಲಿಯೇ ವಿಕೆಟ್ ಒಪ್ಪಿಸಿ ಹೋಗ್ತಾರೆ: ಮತ್ತೆ ಮುಗ್ಗರಿಸಿದ ಕೊಹ್ಲಿ ಕಾಲೆಳೆದ ನೆಟ್ಟಿಗರು

ಹೀಗೆ ಸೆಂಚುರಿಯನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ 4 ದಿನಗಳ ಆಟ ಈಗಾಗಲೇ ಮುಗಿದಿದ್ದು ಐದನೇ ದಿನದಾಟದಂದು ದಕ್ಷಿಣ ಆಫ್ರಿಕಾ ತಂಡ ಚೊಚ್ಚಲ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕೆಂದರೆ 211 ರನ್‌ಗಳನ್ನು ಬಾರಿಸಬೇಕಿದೆ. ಹೌದು, ದ್ವಿತೀಯ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲ್ ಔಟ್ ಆಗಿರುವ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 305 ರನ್‌ಗಳ ಗುರಿಯನ್ನು ನೀಡಿದೆ. ಈ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಾಲ್ಕನೇ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದೆ. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧ ಈ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕೆಂದರೆ ಟೀಂ ಇಂಡಿಯಾ ಐದನೇ ದಿನದಾಟದಂದು ದಕ್ಷಿಣ ಆಫ್ರಿಕಾದ ಉಳಿದ 6 ವಿಕೆಟ್ ಪಡೆಯಬೇಕಿದೆ.

ಭಾರತ vs ದ.ಆಫ್ರಿಕಾ: ತನ್ನ ವಿಕೆಟ್ ಕುರಿತು ಚಿಂತಿಸುತ್ತಾ ನಿಂತ ವಿರಾಟ್ ಕೊಹ್ಲಿಭಾರತ vs ದ.ಆಫ್ರಿಕಾ: ತನ್ನ ವಿಕೆಟ್ ಕುರಿತು ಚಿಂತಿಸುತ್ತಾ ನಿಂತ ವಿರಾಟ್ ಕೊಹ್ಲಿ

ಹೀಗೆ ಐದನೇ ದಿನದಾಟದಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯದ ಫಲಿತಾಂಶ ಹೊರಬೀಳಲಿದ್ದು, ಈ ಪಂದ್ಯ ಮುಗಿದ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗುವುದು ಎಂಬ ಸುದ್ದಿ ಹೊರಬಿದ್ದಿದೆ. ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸದ್ಯ ನಡೆಯುತ್ತಿರುವ ಟೆಸ್ಟ್ ಪಂದ್ಯ ಮುಗಿದ ಬಳಿಕ ಇಂದು ( ಡಿಸೆಂಬರ್ 30 ) ಅಥವಾ ನಾಳೆ ( ಡಿಸೆಂಬರ್ 31 ) ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಲಿದೆ. ಹೀಗೆ ಪ್ರಕಟವಾಗಲಿರುವ ತಂಡದ ಕುರಿತು ಹರಿದಾಡುತ್ತಿರುವ ಕೆಲವೊಂದಷ್ಟು ವಿಷಯಗಳ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ರೋಹಿತ್ ಶರ್ಮಾ ಇನ್ನೂ ಫಿಟ್ ಆಗಬೇಕಿದೆ

ರೋಹಿತ್ ಶರ್ಮಾ ಇನ್ನೂ ಫಿಟ್ ಆಗಬೇಕಿದೆ

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸುವುದರ ಕುರಿತಾಗಿ ಮಾತನಾಡಿರುವ ಬಿಸಿಸಿಐನ ಅಧಿಕಾರಿಯೋರ್ವರು ರೋಹಿತ್ ಶರ್ಮಾ ಫಿಟ್‌ನೆಸ್ ಪರೀಕ್ಷೆಯನ್ನು ಸಂಪೂರ್ಣವಾಗಿ ಮುಗಿಸಿದರೆ ಮಾತ್ರ ಭಾರತ ತಂಡದಲ್ಲಿ ಅವಕಾಶ ಸಿಗಲಿದೆ ಎಂದಿದ್ದಾರೆ. ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೆವರು ಹರಿಸುತ್ತಿರುವ ರೋಹಿತ್ ಶರ್ಮಾಗೆ ಇನ್ನೂ 3 ವಾರಗಳ ಕಾಲಾವಕಾಶವಿದ್ದು ಅಷ್ಟರೊಳಗೆ ಫಿಟ್ ಆಗಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಬೇಕಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟವಾದ ನಂತರ ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ರೋಹಿತ್ ಶರ್ಮಾ ಗಾಯದ ಸಮಸ್ಯೆಗೊಳಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು. ಹೀಗೆ ಗಾಯದ ಸಮಸ್ಯೆಯಿಂದ ಹೊರ ಬಿದ್ದಿರುವ ರೋಹಿತ್ ಶರ್ಮಾ ಮತ್ತೆ ತಂಡವನ್ನು ಸೇರಬೇಕೆಂದರೆ ಇದೀಗ ಈ ಫಿಟ್‌ನೆಸ್ ಪರೀಕ್ಷೆಯಲ್ಲಿ ಸಂಪೂರ್ಣವಾಗಿ ಉತ್ತೀರ್ಣರಾಗಲೇಬೇಕು.

ರೋಹಿತ್ ಶರ್ಮಾ ಫಿಟ್ ಆಗದಿದ್ದರೆ ನಾಯಕತ್ವ ಕೆಎಲ್ ರಾಹುಲ್ ಪಾಲು

ರೋಹಿತ್ ಶರ್ಮಾ ಫಿಟ್ ಆಗದಿದ್ದರೆ ನಾಯಕತ್ವ ಕೆಎಲ್ ರಾಹುಲ್ ಪಾಲು

ಈ ಹಿಂದೆಯೇ ಬಿಸಿಸಿಐನ ಅಧಿಕಾರಿಯೋರ್ವರು ಹೇಳಿಕೆ ನೀಡಿದಂತೆ ರೋಹಿತ್ ಶರ್ಮಾ ಮುಂಬರಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯೊಳಗೆ ಫಿಟ್ ಆಗಿ ಪಂದ್ಯವನ್ನಾಡಲು ತಯಾರಾಗದೇ ಇದ್ದರೆ ಭಾರತ ಏಕದಿನ ತಂಡದ ನಾಯಕತ್ವವನ್ನು ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೆ ಎಲ್ ರಾಹುಲ್ ನಿಭಾಯಿಸಲಿದ್ದಾರೆ. ಈ ವಿಷಯದ ಕುರಿತಾಗಿ ಈಗಾಗಲೇ ಬಿಸಿಸಿಐನ ಅಧಿಕಾರಿಯೋರ್ವರು ಮಾಹಿತಿಯನ್ನು ನೀಡಿದ್ದರು.

ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆಲ್ಲೋಕೆ ಕಾರಣ KL ರಾಹುಲ್ | Oneindia Kannada
ಭಾರತ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ವೇಳಾಪಟ್ಟಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ವೇಳಾಪಟ್ಟಿ

ಸದ್ಯ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಮುಗಿದ ಬಳಿಕ ಜನವರಿ 19ರಿಂದ 3 ಪಂದ್ಯಗಳ ಏಕದಿನ ಸರಣಿ ಶುರುವಾಗಲಿದ್ದು ಅದರ ವೇಳಾ ಪಟ್ಟಿ ಈ ಕೆಳಕಂಡಂತಿದೆ. .

ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM

ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM

ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್‌ ಟೌನ್, ಸಮಯ - 2.00 PM

Story first published: Thursday, December 30, 2021, 15:02 [IST]
Other articles published on Dec 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X