ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ. ಆಫ್ರಿಕಾ: ಉಮ್ರಾನ್ ಮಲಿಕ್ ಪದಾರ್ಪಣೆ ಬಗ್ಗೆ ಪ್ರಮುಖ ಸುಳಿವು ನೀಡಿದ ದ್ರಾವಿಡ್

India vs South Africa: Team India Coach Rahul Dravid statement on young pacer Umran Malik debut
ಕೊಹ್ಲಿ ಮಾಡಿರೋ ಕೆಟ್ಟ ದಾಖಲೆಯಲ್ಲಿ KL ರಾಹುಲ್ ಪಾಲು ಪಡೆಯುತ್ತಾರಾ?? | OneIndia Kanada

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಭಾರತ ತಮಡದ ಕೋಚ್ ರಾಹುಲ್ ದ್ರಾವಿಡ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು ಸರಣಿಯ ಬಗೆಗಿನ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ತಂಡದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಪಡೆದುಕೊಂಡಿರುವ ವೇಗಿ ಉಮ್ರಾನ್ ಮಲಿಕ್ ಪದಾರ್ಪಣೆ ಬಗ್ಗೆ ಮಾತನಾಡಿದ್ದು ಮಹತ್ವದ ಸುಳಿವೊಂದನ್ನು ನೀಡಿದ್ದಾರೆ.

ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಯುವ ಆಟಗಾರ ಉಮ್ರಾನ್ ಮಲಿಕ್ ಭಾರತ ತಂಡದಲ್ಲಿ ಆಡುವ ಅವಕಾಶವನ್ನು ಪಡೆಯಲು ಕೆಲ ಸಮಯ ಕಾಯಬೇಕಾಬಹುದು ಎಂದಿದ್ದಾರೆ. ಈ ಮೂಲಕ ಮೊದಲ ಪಂದ್ಯದಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿಲ್ಲ ಎಂಬ ಸುಳಿವು ನೀಡಿದ್ದಾರೆ. ಸಾಧ್ಯವಾದಷ್ಟು ಹೆಚ್ಚಿನ ಸಮಯಾವಕಾಶವನ್ನು ನೀಡಬೇಕು ಎಂಬ ಮಾತು ಹೇಳಿದ್ದಾರೆ ರಾಹುಲ್ ದ್ರಾವಿಡ್.

IND vs SA ಟಿ20 ಸರಣಿ: ಕೆಎಲ್ ರಾಹುಲ್ ನಾಯಕತ್ವದ ಕುರಿತು ಸುರೇಶ್ ರೈನಾ ಹೇಳಿದ್ದೇನು?IND vs SA ಟಿ20 ಸರಣಿ: ಕೆಎಲ್ ರಾಹುಲ್ ನಾಯಕತ್ವದ ಕುರಿತು ಸುರೇಶ್ ರೈನಾ ಹೇಳಿದ್ದೇನು?

"ನಾವು ಆತನಿಗೆ ಎಷ್ಟು ಪ್ರಮಾಣದಲ್ಲಿ ಆಡುವ ಸಮಯವನ್ನು ನೀಡಲು ಸಾಧ್ಯವಾಗುತ್ತದೆ ಎಂಬುದನ್ನು ಗಮನಿಸಬೇಕು. ನಾವು ದೊಡ್ಡ ತಂಡವನ್ನು ಹೊಂದಿದ್ದೇವೆ. ಹಾಗಾಗಿ ಎಲ್ಲರಿಗೂ ಆಡುವ ಬಳಗದಲ್ಲಿ ಸ್ಥಾನ ದೊರೆಯಲು ಸಾಧ್ಯವಿಲ್ಲ" ಎಂದಿದ್ದಾರೆ ಭಾರತೀಯ ತಂಡದ ಕೋಚ್ ರಾಹುಲ್ ದ್ರಾವಿಡ್.

"ನಾನು ಸ್ಥಿರತೆಯನ್ನು ನೋಡಲು ಇಷ್ಟಪಡುವ ವ್ಯಕ್ತಿ. ಆಟಗಾರರಿಗೆ ಸಾವರಿಸಿಕೊಳ್ಳಲು ಸಮಯವನ್ನು ನೀಡಬೇಕಾಗುತ್ತದೆ. ಅರ್ಶ್‌ದೀಪ್ ಕುಡ ಉತ್ತಮವಾಗಿ ಪ್ರದರ್ಶನ ನೀಡಿದ್ದು ಆತನ ಮೇಲೆ ಕೂಡ ಸಾಕಷ್ಟು ನಿರೀಕ್ಷೆಯಿದೆ. ಕಳೆದ ಸರಣಿಯಲ್ಲಿ ಆಡಿರುವ ಹರ್ಷಲ್ ಪಟೇಲ್, ಭುವನೇಶ್ವರ್, ಆವೇಶ್ ಖಾನ್ ಅವರಂತಾ ಅನುಭವಿಗಳನ್ನು ಕೂಡ ನಾವು ಹೊಂದಿದ್ದೇವೆ. ಯುವ ಆಟಗಾರನ್ನು ಕೂಡ ಹೊಂದಿರುವುದಕ್ಕೆ ಸಂತಸವಿದೆ. ಈ ಆಟಗಾರರಿಂದ ಯಾವ ರೀತೊಯ ಪ್ರದರ್ಶನ ಬರಲಿದೆ ಎಂಬುದು ಕಾದನೋಡಬೇಕಿದೆ" ಎಂದಿದ್ದಾರೆ ಕೋಚ್ ರಾಹುಲ್ ದ್ರಾವಿಡ್.

ಹಾರ್ದಿಕ್ ಪಾಂಡ್ಯನನ್ನ ಟಿ20ಯಲ್ಲಿ ಮಾತ್ರ ಆಡಿಸಿ: BCCIಗೆ ರವಿಶಾಸ್ತ್ರಿ ಎಚ್ಚರಿಕೆಹಾರ್ದಿಕ್ ಪಾಂಡ್ಯನನ್ನ ಟಿ20ಯಲ್ಲಿ ಮಾತ್ರ ಆಡಿಸಿ: BCCIಗೆ ರವಿಶಾಸ್ತ್ರಿ ಎಚ್ಚರಿಕೆ

ಟಿ20 ಸರಣಿಗೆ ಭಾರತ ಸ್ಕ್ವಾಡ್: ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ) (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಕುಲ್‌ದೀಪ್ ಯಾದವ್, ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

ದಕ್ಷಿಣ ಆಫ್ರಿಕಾ ಟಿ20 ಬಳಗ ಹೀಗಿದೆ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನಾರ್ಕಿಯಾ, ವಾಯ್ನೆ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಸ್ಟೀಸ್ಟನ್ ಸ್ಟಬ್ಸ್, ಟಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್

Story first published: Wednesday, June 8, 2022, 14:44 [IST]
Other articles published on Jun 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X