ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

10 ಎಸೆತಗಳಲ್ಲಿ 5 ಸಿಕ್ಸ್‌ ಚಚ್ಚಿದ ವೇಗಿ ಉಮೇಶ್ ಯಾದವ್: ವೈರಲ್ ವೀಡಿಯೋ

Umesh Yadav Hit Five Sixes in 10 Balls | Oneindia Kannada
India vs South Africa: Umesh Yadav hit 5 sixes in 10 balls

ರಾಂಚಿ, ಅಕ್ಟೋಬರ್ 21: ದಕ್ಷಿಣ ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್‌ನಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿ ಅನೇಕ ದಾಖಲೆಗಳನ್ನು ಬರೆದರು. ಆದರೆ ವೇಗದ ಬೌಲರ್ ಉಮೇಶ್ ಯಾದವ್ ಕೂಡ ಸ್ಫೋಟಕ ಬ್ಯಾಟಿಂಗ್‌ಗಾಗಿ ಇದೇ ಮೈದಾನದಲ್ಲಿ ಬೆರಗು ಮೂಡಿಸಿದ್ದಾರೆ.

ಡಾನ್ ಬ್ರಾಡ್ಮನ್, ಸಚಿನ್ ದಾಖಲೆ ಧೂಳಿಪಟ ಮಾಡಿದ ರೋಹಿತ್ ಶರ್ಮಾಡಾನ್ ಬ್ರಾಡ್ಮನ್, ಸಚಿನ್ ದಾಖಲೆ ಧೂಳಿಪಟ ಮಾಡಿದ ರೋಹಿತ್ ಶರ್ಮಾ

ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ, ರಾಂಚಿಯಲ್ಲಿ 3ನೇ ಮತ್ತು ಕೊನೆಯ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಭಾನುವಾರ (ಅಕ್ಟೋಬರ್ 20) ಭಾರತದ ಇನ್ನಿಂಗ್ಸ್‌ನ 2ನೇ ದಿನದಾಟದಲ್ಲಿ ಕೇವಲ 10 ಎಸೆಗಳಿಗೆ 5 ಸಿಕ್ಸ್‌ನೊಂದಿಗೆ 31 ರನ್ ಬಾರಿಸಿ ಉಮೇಶ್ ಗಮನ ಸೆಳೆದಿದ್ದಾರೆ. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದ 30+ ರನ್‌ ಆಗಿಯೂ ಗುರುತಿಸಿಕೊಂಡಿದೆ.

ಭಾರತ vs ದಕ್ಷಿಣ ಆಫ್ರಿಕಾ, 3ನೇ ಟೆಸ್ಟ್, Live ಸ್ಕೋರ್‌ಕಾರ್ಡ್

1
46115

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ಪರ ಮಯಾಂಕ್ ಅಗರ್ವಾಲ್ 10, ರೋಹಿತ್ ಶರ್ಮಾ 212, ವಿರಾಟ್ ಕೊಹ್ಲಿ 12, ಅಜಿಂಕ್ಯ ರಹಾನೆ 115, ರವೀಂದ್ರ ಜಡೇಜಾ 51, ವೃದ್ಧಿಮಾನ್ ಸಹಾ 24, ರವಿಚಂದ್ರನ್ ಅಶ್ವಿನ್ 14 ರನ್ ಸೇರಿಸಿದ್ದರು. ಇದರ ಜೊತೆ ಕೆಳ ಕ್ರಮಾಂಕದಲ್ಲಿ ಬಂದಿದ್ದ ಬೌಲರ್ ಉಮೇಶ್ ಯಾದವ್ ಬಿರುಸಿನ ಬ್ಯಾಟಿಂಗ್‌ ಎಲ್ಲರನ್ನು ಅಚ್ಚರಿಗೀಡುಮಾಡಿತು.

9ನೇ ಕ್ರಮಾಂಕದಲ್ಲಿ ಬ್ಯಾಟ್‌ ಕೈಗೆತ್ತಿಕೊಂಡಿದ್ದ ಉಮೇಶ್ ಯಾದವ್ ಕೇವಲ 10 ಎಸೆತಗಳಿಗೆ 5 ಸಿಕ್ಸರ್ ಸೇರಿ 31 ರನ್ ಬಾರಿಸಿ ಪ್ರೇಕ್ಷಕರ ಚಿತ್ತ ತನ್ನತ್ತ ಹರಿಸಿಕೊಂಡರು. ಅನಂತರ 113.6ನೇ ಓವರ್‌ನಲ್ಲಿ ಯಾದವ್, ಜಾರ್ಜ್ ಲಿಂಡ್ಲೆ ಎಸೆತಕ್ಕೆ ಹೆನ್ರಿಕ್ ಕ್ಲಾಸೆನ್‌ಗೆ ಕ್ಯಾಚಿತ್ತರು. ಭಾರತ 116.3ನೇ ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 497 ರನ್ ಕಲೆ ಹಾಕಿ ಡಿಕ್ಲೇರ್ ಘೋಷಿಸಿದೆ.

Story first published: Monday, October 21, 2019, 12:00 [IST]
Other articles published on Oct 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X