ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿ

India vs South Africa: Virat Kohli surpassed Sachin Tendulkar in Most away ODI runs record

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿಹೆಚ್ಚು ಚರ್ಚೆ ಹಾಗೂ ಟೀಕೆಗಳಿಗೆ ಕಾರಣವಾಗಿರುವ ಆಟಗಾರನೆಂದರೆ ಅದು ವಿರಾಟ್ ಕೊಹ್ಲಿ. ಕಳೆದ ವರ್ಷ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯವರೆಗೂ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ಈ ಮೂರೂ ಆವೃತ್ತಿಗಳ ತಂಡಗಳಿಗೂ ನಾಯಕನಾಗಿದ್ದ ವಿರಾಟ್ ಕೊಹ್ಲಿ ಸದ್ಯ ಕೇವಲ ಟೀಮ್ ಇಂಡಿಯಾದ ಓರ್ವ ಆಟಗಾರನಾಗಿ ಮಾತ್ರ ತಂಡದಲ್ಲಿ ಉಳಿದುಕೊಂಡಿದ್ದಾರೆ.

ಟೆಸ್ಟ್ ಸರಣಿ ರೀತಿಯೇ ಏಕದಿನ ಸರಣಿಯಲ್ಲಿಯೂ ಭಾರತ ನೆಲಕಚ್ಚಲಿದೆ ಎಂದು ಎಚ್ಚರಿಕೆ ನೀಡಿದ ಬವುಮಾಟೆಸ್ಟ್ ಸರಣಿ ರೀತಿಯೇ ಏಕದಿನ ಸರಣಿಯಲ್ಲಿಯೂ ಭಾರತ ನೆಲಕಚ್ಚಲಿದೆ ಎಂದು ಎಚ್ಚರಿಕೆ ನೀಡಿದ ಬವುಮಾ

ಹೌದು, ಕಳೆದ ವರ್ಷ ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಸ್ವಇಚ್ಛೆಯಿಂದ ಹಿಂದೆ ಸರಿದ ವಿರಾಟ್ ಕೊಹ್ಲಿಯನ್ನು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಪ್ರಕಟಿಸುವ ವೇಳೆ ಬಿಸಿಸಿಐ ಏಕದಿನ ನಾಯಕತ್ವದಿಂದಲೂ ಕೂಡ ವಜಾಗೊಳಿಸಿತು. ಹೀಗೆ ಕಳೆದ ವರ್ಷ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವವನ್ನೂ ಸಹ ತ್ಯಜಿಸಿದ್ದಾರೆ.

ಟೀಮ್ ಇಂಡಿಯಾಗೆ ಗೆಲ್ಲುವ ನಂಬಿಕೆ ಹೆಚ್ಚಿರುವುದು ಆ ಒಬ್ಬನಿಂದಲೇ ಎಂದ ನಾಯಕ ಕೆಎಲ್ ರಾಹುಲ್ಟೀಮ್ ಇಂಡಿಯಾಗೆ ಗೆಲ್ಲುವ ನಂಬಿಕೆ ಹೆಚ್ಚಿರುವುದು ಆ ಒಬ್ಬನಿಂದಲೇ ಎಂದ ನಾಯಕ ಕೆಎಲ್ ರಾಹುಲ್

ಹೀಗೆ ನಾಯಕನಾಗಿದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿರುವ ವಿರಾಟ್ ಕೊಹ್ಲಿ ಇದೀಗ ಓರ್ವ ಆಟಗಾರನಾಗಿ ಮಾತ್ರ ಭಾರತ ತಂಡದಲ್ಲಿದ್ದು, ಬ್ಯಾಟ್ಸ್‌ಮನ್‌ ಆಗಿ ಮುಂದುವರಿಯುತ್ತಾ ಮತ್ತಷ್ಟು ದಾಖಲೆಗಳ ನಿರ್ಮಿಸುವ ಹಾದಿಯಲ್ಲಿದ್ದಾರೆ. ಇನ್ನು ನಾಯಕತ್ವ ತ್ಯಜಿಸಿದ ನಂತರ ಮತ್ತೆ ವಿರಾಟ್ ಕೊಹ್ಲಿ ನೀಲಿ ಜೆರ್ಸಿಯಲ್ಲಿ ಓರ್ವ ಆಟಗಾರನಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸುವುದರ ಮೂಲಕ ಮಿಂಚಿದ್ದು ಇದೇ ವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ದಾಖಲೆಯ ವಿವರ ಈ ಕೆಳಕಂಡಂತಿದೆ..

ವಿದೇಶಿ ನೆಲದಲ್ಲಿ ಅತಿಹೆಚ್ಚು ಏಕದಿನ ರನ್ ಗಳಿಸಿದ ಕೊಹ್ಲಿ

ವಿದೇಶಿ ನೆಲದಲ್ಲಿ ಅತಿಹೆಚ್ಚು ಏಕದಿನ ರನ್ ಗಳಿಸಿದ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 51 ರನ್ ಗಳಿಸಿದ್ದಾರೆ. 63 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 3 ಬೌಂಡರಿ ಸಹಿತ 51 ರನ್ ಗಳಿಸುವ ಮೂಲಕ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ಈ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಹೊಂದಿದ್ದರು. ಆದರೆ ಇದೀಗ ಈ ದಾಖಲೆಯಲ್ಲಿ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ವಿದೇಶಿ ನೆಲದಲ್ಲಿ ಅತಿಹೆಚ್ಚು ಏಕದಿನ ರನ್ ಗಳಿಸಿದ ಭಾರತೀಯ ಆಟಗಾರರು

ವಿದೇಶಿ ನೆಲದಲ್ಲಿ ಅತಿಹೆಚ್ಚು ಏಕದಿನ ರನ್ ಗಳಿಸಿದ ಭಾರತೀಯ ಆಟಗಾರರು

ವಿದೇಶಿ ನೆಲದಲ್ಲಿ ಅತಿಹೆಚ್ಚು ಏಕದಿನ ರನ್ ಗಳಿಸಿದ ಟಾಪ್ 5 ಭಾರತೀಯ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

1. ವಿರಾಟ್ ಕೊಹ್ಲಿ - 5068* ರನ್
2. ಸಚಿನ್ ತೆಂಡೂಲ್ಕರ್ - 5065 ರನ್
3. ಎಂ ಎಸ್ ಧೋನಿ - 4520 ರನ್
4. ರಾಹುಲ್‌ ದ್ರಾವಿಡ್ - 3998 ರನ್
5. ಸೌರವ್ ಗಂಗೂಲಿ - 3468 ರನ್

KL Rahul ಬಗ್ಗೆ ಅವರ ತಾಯಿ ಏನ್ ಹೇಳಿದ್ರು ಗೊತ್ತಾ! | Oneindia Kannada
ಪಂದ್ಯ ಸೋತ ಟೀಮ್ ಇಂಡಿಯಾ

ಪಂದ್ಯ ಸೋತ ಟೀಮ್ ಇಂಡಿಯಾ

ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾಗೆ ಗೆಲ್ಲಲು 297 ರನ್‌ಗಳ ಗುರಿಯನ್ನು ನೀಡಿತ್ತು. ಟೀಮ್ ಇಂಡಿಯಾ ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಅರ್ಧಶತಕದಾಟದ ನಡುವೆಯೂ ಸೋಲನುಭವಿಸಿದೆ. 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿದ ಟೀಮ್ ಇಂಡಿಯಾ 31 ರನ್‌ಗಳ ಸೋಲನ್ನು ಕಂಡು 3 ಪಂದ್ಯಗಳ ಏಕದಿನ ಸರಣಿಯಲ್ಲಿ 0-1 ಅಂತರದ ಹಿನ್ನಡೆ ಅನುಭವಿಸಿದೆ.

Story first published: Thursday, January 20, 2022, 10:01 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X