ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ 1st ಟಿ20: ಯುವ ತಂಡದ ಮೇಲಿದೆ ಈ ನಿರೀಕ್ಷೆಗಳು!

India vs Sri lanka 1st t20: huge expectation on young team

ಕೊಲಂಬೋ, ಜುಲೈ 25: ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಇಂದು (ಭಾನುವಾರ) ನಡೆಯಲಿದೆ. ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಹೀಗಾಗಿ ಚುಟುಕು ಕ್ರಿಕೆಟ್ ಮಾದರಿಯ ಪ್ರದರ್ಶನ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ. ಏಕದಿನ ಸರಣಿಯಲ್ಲಿ ಭಾರತದ ಕೆಲ ಯುವ ಆಟಗಾರರು ಅಬ್ಬರಿಸಿದ ರೀತಿ ಟಿ20 ಮಾದರಿಗೆ ಹೆಚ್ಚು ಸೂಕ್ತವಾಗುವ ಕಾರಣ ಚುಟುಕು ಕ್ರಿಕೆಟ್‌ನಲ್ಲಿ ದೊರೆಯುವ ಅವಕಾಶವನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಮುಖ್ಯವಾಗುತ್ತದೆ.

ಏಕದಿನ ಸರಣಿಯಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಶಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ಸಂಜು ಸ್ಯಾಮ್ಸನ್ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆಟಗಾರರ ಶೈಲಿ ಟಿ20 ಕ್ರಿಕೆಟ್‌ಗೆ ಮತ್ತಷ್ಟು ಹೊಂದಾಣಿಕೆಯಾಗುವ ಕಾರಣ ಈ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆಗಳು ಇದೆ. ಆದರೆ ಇವರಲ್ಲಿ ಯಾರೆಲ್ಲಾ ಪ್ರಥಮ ಪಂದ್ಯದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳಲಿದ್ದಾರೆ ಎಂಬುದು ಕೂಡ ಪ್ರಶ್ನೆಯಾಗಿದೆ.

ಟೋಕಿಯೋ ಒಲಿಂಪಿಕ್ಸ್‌: ರೋಯಿಂಗ್‍ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಅರ್ಜುನ್ ಮತ್ತು ಅರವಿಂದ್ಟೋಕಿಯೋ ಒಲಿಂಪಿಕ್ಸ್‌: ರೋಯಿಂಗ್‍ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಅರ್ಜುನ್ ಮತ್ತು ಅರವಿಂದ್

ವಿಶ್ವಕಪ್‌ನಲ್ಲಿ ಸ್ಥಾನಗಳಿಸಲು ಪೈಪೋಟಿ

ವಿಶ್ವಕಪ್‌ನಲ್ಲಿ ಸ್ಥಾನಗಳಿಸಲು ಪೈಪೋಟಿ

ಟಿ20 ವಿಶ್ವಕಪ್‌ ಕೂಡ ಸನಿಹದಲ್ಲಿರುವ ಕಾರಣ ಭಾರತ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳಲು ಈ ಸರಣಿ ಯುವ ಆಟಗಾರರ ಪಾಲಿಗೆ ಅತ್ಯುತ್ತಮ ಅವಕಾಶವಾಗಿದೆ. ಶ್ರೀಲಂಕಾಗೆ ತೆರಳಿರುವ ತಂಡದ ಕನಿಷ್ಠ ನಾಲ್ವರು ಬ್ಯಾಟ್ಸ್‌ಮನ್‌ಗಳು ಟಿ20 ವಿಶ್ವಕಪ್‌ಗೆ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.

ಅನುಭವಿಗಳಿಗೂ ಸವಾಲು

ಅನುಭವಿಗಳಿಗೂ ಸವಾಲು

ಲಂಕಾಗೆ ತೆರಳಿರುವ ತಂಡದಲ್ಲಿರುವ ಹಾರ್ದಿಕ್ ಪಾಂಡ್ಯ ಹಾಗೂ ಶಿಖರ್ ಧವನ್ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವುದು ಖಚಿತ. ಆದರೆ ಆಡುವ ಬಳಗದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವುದು ಈ ಅನುಭವಿಗಳಿಗೂ ಸವಾಲಿನ ಕೆಲಸವಾಗಿರಲಿದೆ. ಒಂದು ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಇರುವ ಕಾರಣ ತಮ್ಮ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಸಾಬೀತುಪಡಿಸಿ ಅವಕಾಶವನ್ನು ಗಿಟ್ಟಿಸಿಕೊಳ್ಳಲು ಸರಿಯಾದ ಸಮಯವಾಗಿದೆ.

ಟಿ20 ವಿಶ್ವಕಪ್‌ಗೆ ಮತ್ತಷ್ಟು ಆಯ್ಕೆಗಳು

ಟಿ20 ವಿಶ್ವಕಪ್‌ಗೆ ಮತ್ತಷ್ಟು ಆಯ್ಕೆಗಳು

ಬೌಲಿಂಗ್ ವಿಭಾಗದಲ್ಲಿ ಕೂಡ ಕೆಲ ಆಯ್ಕೆಗಳು ಈ ಸರಣಿಯಲ್ಲಿ ನಿರೀಕ್ಷಿಸಬಹುದಾಗಿದೆ. ಸ್ಪಿನ್ನರ್‌ಗಳಾಗಿ ಯುಜುವೇಂದ್ರ ಚಾಹಲ್ ಜೊತೆಗೆ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ ಮಿಸ್ಟ್ರಿ ಬೌಲರ್ ಖ್ಯಾತಿಯ ವರುಣ್ ಚಕ್ರವರ್ತಿ, ರಾಹುಲ್ ಚಹರ್ ಮೊದಲ ಅವಕಾಶದಲ್ಲಿ ಮಿಂಚಲು ಕಾಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಂಕಾದಂತೆ ಕಂಡುಬರುತ್ತಿರುವ ಚಾಹಲ್ ಕೂಡ ತಮ್ಮ ಮೇಲಿನ ಭರವಸೆಯನ್ನು ಉಳಿಸಿಕೊಳ್ಳಬೇಕು. ವೇಗದ ಬೌಲರ್‌ಗಳಾದ ದೀಪಕ್ ಚಹರ್ ಹಾಗೂ ಭುವನೇಶ್ವರ್ ಕುಮಾರ್ ಮೂರನೇ ವೇಗಿಗಳಾಗಿ ಅವಕಾಶ ಪಡೆಯಲು ಪೈಪೋಟಿ ನಡೆಸಲಿದ್ದಾರೆ

Story first published: Sunday, July 25, 2021, 14:18 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X