ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ 2nd ಟಿ20: ಪಂದ್ಯಕ್ಕೂ ಮುನ್ನ ತಿಳಿಯಲೇಬೇಕಾದ ಪ್ರಮುಖಾಂಶಗಳು

India Vs Sri Lanka 2nd T20I: India, Sri Lanka Look For Advantage At Indore

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಒಂದು ಎಸೆತವೂ ಕಾಣದೆ ರದ್ದಾಯಿತು. ಸರಣಿಯ ಎರಡನೇ ಪಂದ್ಯ ನಾಳೆ ನಡೆಯಲಿದೆ. ಎರಡನೇ ಪಂದ್ಯಕ್ಕೆ ಇಂದೋರ್ ಸಿದ್ಧವಾಗಿದ್ದು ನಾಳೆ ಸಂಜೆ ಏಳು ಗಂಟೆಗೆ ಪಂದ್ಯ ನಡೆಯಲಿದೆ.

ಗುವಾಹಟಿ ಪಂದ್ಯ ಮೈದಾನದ ಸಿಬ್ಬಂದಿಗಳು ಮತ್ತು ಪಿಚ್ ಕ್ಯುರೇಟರ್ ಯಡವಟ್ಟಿನ ಕಾರಣದಿಂದಾಗಿ ಮಳೆ ನಿಂತ ಬಳಿಕವೂ ಪಂದ್ಯ ನಡೆಯದಂತಾಯಿತು. ಹೀಗಾಗಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು ಅಸಮಾಧಾನಗೊಂದಿದ್ದಾರೆ. ಮಾತ್ರವಲ್ಲ ಪಿಚ್ ಒಣಗಿಸಲು ಹೇರ್‌ ಡ್ರೈಯರ್, ಐರನ್ ಬಾಕ್ಸ್, ವಾಕ್ಯೂಮ್ ಕ್ಲೀನರ್‌ಗಳನ್ನು ಬಳಸಿದ್ದು ಮತ್ತಷ್ಟು ನಗೆ ಪಾಟಲಿಗೆ ಕಾರಣವಾಯಿತು.

ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್‌ ಬೇಕು!ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್‌ ಬೇಕು!

ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಎರಡೂ ತಂಡಗಳ ಪ್ಲೇಯಿಂಗ್XIನಲ್ಲಿ ಬದಲಾವಣೆಯಾಗುವ ಸಾಧ್ಯತೆ ತೀರಾ ಕಡಿಮೆ. ಟೀಮ್ ಇಂಡಿಯಾದಲ್ಲಿ ಬಹಳ ಸಮಯದ ಬಳಿಕ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ವೇಗಿ ಜಸ್ಪ್ರೀತ್ ಬೂಮ್ರಾ ಕಣಕ್ಕಿಳಿಯಲಿದ್ದು ಇಬ್ಬರ ಫಾರ್ಮ್ ಬಗ್ಗೆ ಎಲ್ಲರಿಗೂ ಕುತೂಹಲವಿದೆ.

ಟೀಮ್ ಇಂಡಿಯಾ ನ್ಯೂಸ್

ಟೀಮ್ ಇಂಡಿಯಾ ನ್ಯೂಸ್

ಟೀಮ್ ನ್ಯೂಸ್-ಟೀಮ್ ಇಂಡಿಯಾ: ಇಂದು ಸಂಜೆ ಮೋಡ ಕವಿದ ವಾತಾವರಣದ ಜೊತೆಗೆ ಇಂದೋರ್‌ನಲ್ಲಿ ಗುಡುಗು ಮಿಂಚಿನ ನಿರೀಕ್ಷೆಯಿದೆ. ಇದು ಪಂದ್ಯದ ಋಣಾತ್ಮಕ ಸುದ್ಧಿ. ಆದರೆ ಮಳೆಯ ಸಾಧ್ಯತೆ ತೀರಾ ಕಡಿಮೆಯಿದೆ ಎನ್ನಲಾಗಿದೆ. ಟೀಮ್ ಇಂಡಿಯಾ ಕಳೆದ ಪಂದ್ಯದ ತಂಡವೇ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯಕ್ಕೂ ಕಣಕ್ಕಿಳಿಯಲಿದೆ.

ಟೀಮ್ ನ್ಯೂಸ್-ಶ್ರೀಲಂಕಾ

ಟೀಮ್ ನ್ಯೂಸ್-ಶ್ರೀಲಂಕಾ

ಟೀಮ್ ಇಂಡಿಯಾ ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಿಂದ ಹೊರಬಿದ್ದ ಬಳಿಕ ಮತ್ತಷ್ಟು ಅದ್ಭುತವಾಗಿ ಆಟವನ್ನಾಡುತ್ತಿದೆ. ಆದರೆ ಶ್ರೀಲಂಕಾ ತಂಡದ ಪರಿಸ್ಥಿತಿ ವಿಭಿನ್ನವಾಗಿದೆ. ಕಳೆದ ಹಲವು ತಿಂಗಳಿನಿಂದ ಶ್ರೀಲಂಕಾ ತಂಡ ಗೆಲುವಿಗಾಗಿ ಪರಿತಪಿಸುವಂತಾಗಿದ್ದು ಭಾರತದ ವಿರುದ್ಧದ ಸರಣಿಯನ್ನು ಡ್ರಾ ಮಾಡಿಕೊಂಡರೂ ಲಂಕಾಗೆ ಬಹುದೊಡ್ಡ ಪ್ರೇರಣೆಯಾಗಲಿದೆ. ಹೀಗಾಗಿ ನಾಳಿನ ಪಂದ್ಯವೇ ಲಂಕಾಗೆ ಮಹತ್ವದ್ದಾಗಿದೆ.

ಭಾರತ vs ಶ್ರೀಲಂಕಾ ಟಿ20: ಮಳೆಗೆ ಅಹುತಿಯಾದ ಮೊದಲ ಪಂದ್ಯ

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ಇಂದೋರ್ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಸಹಕಾರಿಯಾಗುವಂತೆ ವರ್ತಿಸುತ್ತದೆ. ಹೀಗಾಗಿ ದೊಡ್ಡ ಮೊತ್ತದ ಪಂದ್ಯವನ್ನು ಇಲ್ಲಿ ನಿರೀಕ್ಷೆ ಮಾಡಬಹುದಾಗಿದೆ. ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ದುಕೊಂಡು ದೊಡ್ಡ ಮೊತ್ತ ಪೇರಿಸಿ ಎದುರಾಳಿಗೆ ಒತ್ತಡ ಹೇರುವ ತಂತ್ರವನ್ನು ಮಾಡುವುದು ಬಹುತೇಕ ನಿಶ್ಚಿತ. ಪಿಚ್‌ನ ವರ್ತನೆಯ ಕಾರಣದಿಂದಾಗಿಯೇ ಈ ಪಂದ್ಯದಲ್ಲೂ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ತೀರಾ ಕಡಿಮೆಯಿದೆ.

ಸಂಭಾವ್ಯ ತಂಡಗಳು

ಸಂಭಾವ್ಯ ತಂಡಗಳು

ಟೀಮ್ ಇಂಡಿಯಾ: ಶಿಖರ್ ಧವನ್, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ನವದೀಪ್ ಸೈನಿ

ಶ್ರೀಲಂಕಾ: ದನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಕುಸಲ್ ಪೆರೆರಾ (ವಿಕೆಟ್ ಕೀಪರ್), ಓಷಾದಾ ಫರ್ನಾಂಡೊ, ಭಾನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ದಾಸುನ್ ಶನಕಾ, ಇಸುರು ಉದಾನ, ವನಿಂದು ಹಸರಂಗ, ಲಹೀರು ಕುಮಾರ, ಲಸಿತ್ ಮಾಲಿಂಗ

Story first published: Monday, January 6, 2020, 17:10 [IST]
Other articles published on Jan 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X