ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧದ ಅಂತಿಮ ಟಿ20ಐಗೆ ಕಣಕ್ಕಿಳಿಯಲಿರುವ ಭಾರತ XI

IND vs SL 3rd t20 : Preview , Will rain play a spoil sport ? | INDIA | SRILANKA | T20 | RAIN
India vs Sri Lanka, 2nd T20I: Team India Predicted XI

ಪುಣೆ, ಜನವರಿ 9: ಟಿ20 ವಿಶ್ವಕಪ್‌ನತ್ತ ಮುಂದಡಿಯಿಡುತ್ತಿರುವ ಟೀಮ್ ಇಂಡಿಯಾ ಶುಕ್ರವಾರ (ಜನವರಿ 9) ಪ್ರವಾಸಿ ಶ್ರೀಲಂಕಾ ವಿರುದ್ಧ ಮೂರನೇ ಮತ್ತು ಅಂತಿಮ ಟಿ20ಐ ಪಂದ್ಯವನ್ನಾಡಲಿದೆ. ಈಗಾಗಲೇ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ 1-0ಯ ಮುನ್ನಡೆ ಸಾಧಿಸಿದೆ. 3ನೇ ಟಿ20 ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ 7 pmಗೆ ಆರಂಭಗೊಳ್ಳಲಿದೆ.

T20 ವಿಶ್ವಕಪ್: ಭಾರತದ ''ಅಚ್ಚರಿಯT20 ವಿಶ್ವಕಪ್: ಭಾರತದ ''ಅಚ್ಚರಿಯ" ಬೌಲರ್ ಹೆಸರಿಸಿದ ಕೊಹ್ಲಿ

ಭಾರತಕ್ಕೆ ಪ್ರವಾಸ ಕೈಗೊಂಡಿರುವ ಲಸಿತ್ ಮಾಲಿಂಗ ಪಡೆ ಆತಿಥೇಯ ಭಾರತದ ವಿರುದ್ಧ 3 ಪಂದ್ಯಗಳ ಟಿ20ಐ ಸರಣಿ ಆಡುವುದರಲ್ಲಿತ್ತು. ಇದರಲ್ಲಿ ಆರಂಭಿಕ ಪಂದ್ಯ ಮಳೆಯಿಂದಾಗಿ ರದ್ದಾದರೆ, ದ್ವಿತೀಯ ಪಂದ್ಯದಲ್ಲಿ ಭಾರತ 7 ವಿಕೆಟ್ ಸುಲಭ ಜಯ ಸಾಧಿಸಿತ್ತು.

ಭಾರತ vs ಶ್ರೀಲಂಕಾ, 3ನೇ ಟಿ20ಐ, Live ಸ್ಕೋರ್‌ಕಾರ್ಡ್

1
46129

ಹೀಗಾಗಿ ಪುಣೆ ಪಂದ್ಯದ ಗೆಲುವು ಶ್ರೀಲಂಕಾಕ್ಕೆ ಪ್ರತಿಷ್ಠೆಯದ್ದಾಗಿದ್ದರೆ, ಭಾರತ ಸರಣಿ ಗೆಲುವಿನತ್ತ ಕಣ್ಣಿಟ್ಟಿದೆ. 3ನೇ ಟಿ20ಗೆ ಮೈದಾನಕ್ಕಿಳಿಯಲಿರುವ ಭಾರತ ಸಂಭಾವ್ಯ ಪ್ಲೇಯಿಂಗ್ XI ಇಂತಿರಲಿದೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳು

ಆರಂಭಿಕ ಬ್ಯಾಟ್ಸ್‌ಮನ್‌ಗಳು

ಟೀಮ್ ಇಂಡಿಯಾದ ಎಂದಿನ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಈ ಟಿ20ಐ ಸರಣಿಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಪುಣೆ ಪಂದ್ಯದಲ್ಲಿ ಆರಂಭಿಕರಾಗಿ ಕನ್ನಡಿಗ ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಮೈದಾನಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂದಲ್ಲಿ ನಾಯಕ ವಿರಾಟ್ ಕೊಹ್ಲಿ ಬರಲಿದ್ದಾರೆ (1. ಕೆಎಲ್ ರಾಹುಲ್, 2. ಶಿಖರ್ ಧವನ್, 3. ವಿರಾಟ್ ಕೊಹ್ಲಿ).

ಮಧ್ಯಮ ಕ್ರಮಾಂಕದ

ಮಧ್ಯಮ ಕ್ರಮಾಂಕದ

ಭಾರತದ 4ನೇ ಕ್ರಮಾಂಕಕ್ಕೆ ಶ್ರೇಯಸ್ ಐಯ್ಯರ್ ಬಹುತೇಕ ಸೆಟ್‌ ಆಗಿದ್ದಾರೆ. ಆದರೆ ಹಿಂದಿನ ಪಂದ್ಯದಲ್ಲಿ ಶ್ರೇಯಸ್ 3 ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದರು. ಇನ್ನು ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ 5ನೇ ಕ್ರಮಾಂಕದಲ್ಲಿ ಬರಲಿದ್ದಾರೆ (4. ಶ್ರೇಯಸ್ ಐಯ್ಯರ್, 5. ರಿಷಬ್ ಪಂತ್).

ಆಲ್ ರೌಂಡರ್‌ಗಳು

ಆಲ್ ರೌಂಡರ್‌ಗಳು

ಭಾರತ-ಶ್ರೀಲಂಕಾ ದ್ವಿತೀಯ ಟಿ20ಯಲ್ಲಿ ಲಂಕಾ ಇನ್ನಿಂಗ್ಸ್‌ನಲ್ಲಿ ಮೊದಲ ವಿಕೆಟ್ ಉರುಳಿಸಿದ್ದು ಆಲ್ ರೌಂಡರ್ ವಾಷಿಂಗ್ಟನ್ ಸುಂದರ್. ಸುಂದರ್ ಈ ಬಾರಿ 6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೈದಾನಕ್ಕಿಳಿಯಲಿದ್ದಾರೆ. 7ನೇ ಕ್ರಮಾಂಕದಲ್ಲಿ ಮತ್ತೊಬ್ಬ ಆಲ್ ರೌಂಡರ್ ರವೀಂದ್ರ ಜಡೇಜಾ ಬರುವ ಸಾಧ್ಯತೆಯಿದೆ (6. ವಾಷಿಂಗ್ಟನ್ ಸುಂದರ್, 7. ರವೀಂದ್ರ ಜಡೇಜಾ).

ಬೌಲರ್‌ಗಳ ಬಣ

ಬೌಲರ್‌ಗಳ ಬಣ

ಚೈನಾಮನ್ ಕುಲದೀಪ್ ಯಾದವ್ 8 ಬ್ಯಾಟಿಂಗ್ ಕ್ರಮಾಂಕದಲ್ಲಿ ಇರಲಿದ್ದಾರೆ. ಇನ್ನು ಶಾರ್ದೂಲ್ ಠಾಕೂರ್ 9ರಲ್ಲಿ, ವೇಗಿ ನವದೀಪ್ ಸೈನಿ 10ರಲ್ಲಿ, ಮತ್ತೊಬ್ಬ ವೇಗಿ ಜಸ್‌ಪ್ರೀತ್‌ ಬೂಮ್ರಾ 11ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಅಂತಿಮ ಪಂದ್ಯದಲ್ಲೂ ಆಡುವ ನಿರೀಕ್ಷೆಯಿದೆ (8. ಕುಲದೀಪ್ ಯಾದವ್, 9. ಶಾರ್ದೂಲ್ ಠಾಕೂರ್, 10. ನವದೀಪ್ ಸೈನಿ, 11. ಜಸ್‌ಪ್ರೀತ್‌ ಬೂಮ್ರಾ).

Story first published: Friday, January 10, 2020, 18:08 [IST]
Other articles published on Jan 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X