ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ 2ನೇ ಟೆಸ್ಟ್, 2ನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಮುಂದೆ ಕಠಿಣ ಸವಾಲು, ಹೈಲೈಟ್ಸ್

India vs Sri lanka 2nd test, day 2, India in strong position, Highlights, Bengaluru

ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್‌ನ ಎರಡನೇ ದಿನದಾಟ ಅಂತ್ಯವಾಗಿದ್ದು ಶ್ರೀಲಂಕಾ ಕಠಿಣ ಸ್ಥಿತಿಯನ್ನು ಎದುರಿಸುತ್ತಿದೆ. ಇನ್ನೂ ಮೂರು ದಿನಗಳ ಆಟ ಬಾಕಿಯಿದ್ದು ಶ್ರೀಲಂಕಾ ಗೆಲ್ಲಲು 447 ರನ್‌ಗಳ ಬೃಹತ್ ಗುರಿಯನ್ನು ಪಡೆದುಕೊಂಡಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡ 28 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದು ಸಂಕಷ್ಟದಲ್ಲಿದೆ.

ಮೊದಲ ದಿನದಾಟದಲ್ಲಿ ಭಾರತ 252 ರನ್‌ಗಳಿಗೆ ಆಲೌಟ್ ಆದ ಬಳಿಕ ಬ್ಯಾಟಿಂಗ್ ಆರಂಭಿಸಿದ್ದ ಶ್ರೀಲಂಕಾ ಮೊದಲ ದಿನದಂತ್ಯದಲ್ಲಿ 86 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಇಂದು ಎರಡನೇ ದಿನದಾಟ ಆರಂಭಿಸಿದ ಶ್ರೀಲಂಕಾ ತನ್ನ ಉಳಿದ ನಾಲ್ಕು ವಿಕೆಟ್‌ಗಳನ್ನು ಶೀಘ್ರವಾಗಿ ಕಳೆದುಕೊಂಡಿತು. 2ನೇ ದಿನದಾಟದ 5.5 ಓವರ್‌ಗಳಲ್ಲಿ ಉಳಿದ ಎಲ್ಲಾ ವಿಕೆಟ್‌ಗಳನ್ನು ಭಾರತೀಯ ಬೌಲಿಂಗ್ ಪಡೆ ಕಬಳಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತ್ತು.

ಐಪಿಎಲ್ 2022: ನೂತನ ನಾಯಕನನ್ನು ಘೋಷಿಸಿದ ಆರ್‌ಸಿಬಿ; ಎಲ್ಲಾ 10 ತಂಡಗಳ ನಾಯಕರ ಪಟ್ಟಿ ಇಲ್ಲಿದೆಐಪಿಎಲ್ 2022: ನೂತನ ನಾಯಕನನ್ನು ಘೋಷಿಸಿದ ಆರ್‌ಸಿಬಿ; ಎಲ್ಲಾ 10 ತಂಡಗಳ ನಾಯಕರ ಪಟ್ಟಿ ಇಲ್ಲಿದೆ

ಭಾರತದ 2ನೇ ಇನ್ನಿಂಗ್ಸ್ ಆರಂಭ: ನಂತರ ಭಾರತ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿತು. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 22 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ರೋಹಿತ್ ಶರ್ಮಾ 48ನ್‌ಗಳಿಸಿ ಅರ್ಧ ಶತಕದ ಅಂಚಿನಲ್ಲಿ ಎಡವಿದರು. ಇನ್ನು ಉತ್ತಮವಾಗಿ ಆಡುತ್ತಿದ್ದ ಹನುಮ ವಿಹಾರಿ ಕೂಡ 35 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿಯೂ ನಿರಾಸೆ ಅನುಭವಿಸಿದ್ದು 13 ರನ್‌ಗಳಿಗೆ ಔಟ್ ಆದರು.

ಪಂತ್ ಆರ್ಭಟ, ಅಯ್ಯರ್ ಬ್ಯಾಟ್‌ನಿಮದ ಮತ್ತೊಂದು ಅರ್ಧ ಶತಕ: ಇನ್ನು ರಿಷಭ್ ಪಂತ್ ಶ್ರೀಲಂಕಾ ವಿರುದ್ಧಧ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಭಾರತದ ಪರವಾಗಿ ವೇಗದ ಅರ್ಧ ಶತಕದಾಖಲಿಸಿದ ಸಾಧನೆ ಮಾಡಿದ್ದಾರೆ ಪಂತ್. 28 ಎಸೆತಗಳಲ್ಲಿ 50 ರನ್‌ಗಳಿಸಿದ ರಿಷಭ್ ಕಪಿಲ್‌ದೇವ್ 1982ರಲ್ಲಿ ಪಾಕಿಸ್ತಾನದ ವಿರುದ್ಧ ಮಾಡಿದ್ದ ದಾಖಲೆಯನ್ನು ಮುರಿದು ಭಾರತದ ಪರವಾಗಿ ಟೆಸ್ಟ್‌ನಲ್ಲಿ ಅತೀ ವೇಗವಾಗಿ ಅರ್ಧ ಶತಕದ ದಾಖಲಿಸಿದ ಸಾಧನೆ ಮಾಡಿದ್ದಾರೆ. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ 92 ರನ್‌ಗಳಿಸಿದ್ದ ಶ್ರೇಯಸ್ ಐಯ್ಯರ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮಿಂಚಿದ್ದು 67 ರನ್‌ಗಳ ಕೊಡುಗೆ ನೀಡುವ ಮೂಲಕ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ಅಂತಿಮವಾಗಿ ಭಾರತ 9 ವಿಕೆಟ್‌ಗೆ 303 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಹೀಗಾಗಿ ಶ್ರೀಲಂಕಾ ತಂಡ 447 ರನ್‌ಗಳ ಬೃಹತ್ ಗುರಿಯನ್ನು ಪಡೆದಿದ್ದು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದೆ. ಆದರೆ ಎರಡನೇ ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿಯೇ ಆರಂಭಿಕ ಆಟಗಾರ ಲಹಿರು ತಿರಿಮನ್ನೆ ಅವರನ್ನು ಬೂಮ್ರಾ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ನಂತರ ನಾಯಕ ದಿಮುತ್ ಕರುಣರತ್ನೆ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್ ಮುಂದುವರಿಸಿದ್ದು ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಟೀಮ್ ಇಂಡಿಯಾ ಆಡುವ ಬಳಗ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ (ನಾಯಕ), ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಬೆಂಚ್: ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಉಮೇಶ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೀಕರ್ ಭರತ್, ಸೌರಭ್ ಕುಮಾರ್, ಜಯಂತ್ ಯಾದವ್

ಅಳೆದೂ ತೂಗಿ ಫಾಫ್ ಡು ಪ್ಲೆಸಿಸ್ ಗೆ ಕ್ಯಾಪ್ಟನ್ ಪಟ್ಟ! | Oneindia Kannada

ಶ್ರೀಲಂಕಾ ಆಡುವ ಬಳಗ: ದಿಮುತ್ ಕರುಣಾರತ್ನೆ (ಸಿ), ಲಹಿರು ತಿರಿಮನ್ನೆ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ (ವಿಕೆ), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ
ಬೆಂಚ್: ದಿನೇಶ್ ಚಾಂಡಿಮಲ್, ಚಮಿಕಾ ಕರುಣರತ್ನೆ, ಜೆಫ್ರಿ ವಾಂಡರ್ಸೆ, ಲಹಿರು ಕುಮಾರ

Story first published: Monday, March 14, 2022, 10:19 [IST]
Other articles published on Mar 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X