ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಾಖಲೆ ನಿರ್ಮಿಸಲು ಜಸ್‌ಪ್ರೀತ್‌ ಬೂಮ್ರಾಗೆ ಬರೀ 1 ವಿಕೆಟ್‌ ಬೇಕು!

IND vs SL 3rd t20 : Bumrah need just 1 more wicket to create the mammoth record | ONEINDIA KANNADA
India vs Sri Lanka 3rd T20I: Jasprit Bumrah 1 wicket away for record

ಪುಣೆ, ಜನವರಿ 9: ಒಂದಿಷ್ಟು ಸಮಯದ ಬಳಿಕ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್‌ ಬೂಮ್ರಾ ಮತ್ತೆ ತಂಡ ಸೇರಿಕೊಂಡಿದ್ದಾರೆ. ಗಾಯದ ಕಾರಣ ಕೊಂಚ ಕಾಲ ತಂಡದಿಂದ ಹೊರಗಿದ್ದ ಬೂಮ್ರಾ ಇಂದೋರ್‌ನಲ್ಲಿ ನಡೆದಿದ್ದ ಭಾರತ-ಶ್ರೀಲಂಕಾ ದ್ವಿತೀಯ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದರು. ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ತಂಡ ಬಲಿಷ್ಠಗೊಳಿಸುವತ್ತ ಯೋಚಿಸಿರುವ ಭಾರತಕ್ಕೆ ಬೂಮ್ರಾ ಆಗಮನ ಇನ್ನಷ್ಟು ಹುರುಪು ತುಂಬಿದೆ.

ಶ್ರೀಲಂಕಾ ವಿರುದ್ಧದ ಅಂತಿಮ ಟಿ20ಐಗೆ ಕಣಕ್ಕಿಳಿಯಲಿರುವ ಭಾರತ XIಶ್ರೀಲಂಕಾ ವಿರುದ್ಧದ ಅಂತಿಮ ಟಿ20ಐಗೆ ಕಣಕ್ಕಿಳಿಯಲಿರುವ ಭಾರತ XI

ಇಂದೋರ್ ಪಂದ್ಯದಲ್ಲಿ ಜಸ್‌ಪ್ರೀತ್‌ ಬೂಮ್ರಾಗೆ ದಾಸುನ್ ಶನಕಾ ಅವರ ವಿಕೆಟ್ ಲಭಿಸಿತ್ತು. ಪಂದ್ಯವನ್ನು ಕೊಹ್ಲಿ ಪಡೆ 7 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದಿತ್ತು ಕೂಡ. ಭಾರತ-ಶ್ರೀಲಂಕಾ ತೃತೀಯ ಟಿ20 ಪಂದ್ಯ ಪುಣೆಯಲ್ಲಿ ಶುಕ್ರವಾರ (ಜನವರಿ 9) ನಡೆಯಲಿದೆ.

T20 ವಿಶ್ವಕಪ್: ಭಾರತದ ''ಅಚ್ಚರಿಯT20 ವಿಶ್ವಕಪ್: ಭಾರತದ ''ಅಚ್ಚರಿಯ" ಬೌಲರ್ ಹೆಸರಿಸಿದ ಕೊಹ್ಲಿ

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಬೂಮ್ರಾಗೆ ಹೊಸ ದಾಖಲೆ ನಿರ್ಮಿಸಲು ಅವಕಾಶವಿದೆ.

ಮೂವರ ಹೆಸರಿನಲ್ಲಿ ದಾಖಲೆ

ಮೂವರ ಹೆಸರಿನಲ್ಲಿ ದಾಖಲೆ

3ನೇ ಟಿ20ಯಲ್ಲಿ ಬೂಮ್ರಾಗೆ 1 ವಿಕೆಟ್ ಲಭಿಸಿದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ಪರ ಅತೀ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿ ಬೂಮ್ರಾ ಗುರುತಿಸಿಕೊಳ್ಳಲಿದ್ದಾರೆ. ಸದ್ಯ ಈ ದಾಖಲೆ ಭಾರತದ ಅನುಭವಿ ಸ್ಪಿನ್ನರ್ ಆರ್‌ ಅಶ್ವಿನ್, ಜಸ್‌ಪ್ರೀತ್‌ ಬೂಮ್ರಾ ಮತ್ತು ಯುಜುವೇಂದ್ರ ಚಾಹಲ್ ಮೂವರ ಹೆಸರಿನಲ್ಲಿದೆ.

4 ತಿಂಗಳ ಬಳಿಕ ಅಂಗಳಕ್ಕೆ

4 ತಿಂಗಳ ಬಳಿಕ ಅಂಗಳಕ್ಕೆ

ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ಗಾಯದ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಅವರು ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿಯಬೇಕಾಗಿತ್ತು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಬೂಮ್ರಾ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಂದರೆ 4 ತಿಂಗಳ ಬಳಿಕ ಮೈದಾನಕ್ಕಿಳಿದಿದ್ದಾರೆ.

ಟಿ20ಐನಲ್ಲಿ ಚಾಹಲ್ ಬೆಸ್ಟ್

ಟಿ20ಐನಲ್ಲಿ ಚಾಹಲ್ ಬೆಸ್ಟ್

ಟಿ20ಐನಲ್ಲಿ ಭಾರತದ ಅಶ್ವಿನ್, ಬೂಮ್ರಾ ಮತ್ತು ಚಾಹಲ್ ಮೂವರೂ ತಲಾ 52 ವಿಕೆಟ್‌ಗಳನ್ನು ಪಡೆದಿದ್ದಾರೆ. ಬೂಮ್ರಾ 43 ಇನ್ನಿಂಗ್ಸ್‌ಗಳಲ್ಲಿ, ಚಾಹಲ್ 36 ಇನ್ನಿಂಗ್ಸ್‌ಗಳಲ್ಲಿ ಮತ್ತು ಆರ್ ಅಶ್ವಿನ್ 46 ಇನ್ನಿಂಗ್ಸ್‌ಗಳಲ್ಲಿ 52 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಕಡಿಮೆ ಇನ್ನಿಂಗ್ಸ್‌ನಲ್ಲಿ ಹೆಚ್ಚು ಟಿ20 ವಿಕೆಟ್‌ ದಾಖಲೆ ಪರಿಗಣಿಸಿದರೆ ಚಾಹಲ್ ಮೊದಲಿಗರೆನಿಸುತ್ತಾರೆ.

ಬೂಮ್ರಾ ಮುನ್ನಡೆಗೆ ಅವಕಾಶ

ಬೂಮ್ರಾ ಮುನ್ನಡೆಗೆ ಅವಕಾಶ

ಶ್ರೀಲಂಕಾ ಟಿ20 ಸರಣಿಯಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಡುತ್ತಿಲ್ಲ. ಅಂತಿಮ ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ ಕೂಡ ಆಡುವ ಸಾಧ್ಯತೆ ತುಂಬಾ ಕಡಿಮೆ. ಹೀಗಾಗಿ ಬೂಮ್ರಾಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ವಿಕೆಟ್ ಲಭಿಸಿದರೆ ಭಾರತ ಪರ ಟಿ20ಐನಲ್ಲಿ ಅತೀ ಹೆಚ್ಚು ವಿಕೆಟ್‌ ದಾಖಲೆಯಲ್ಲಿ ಮುನ್ನಡೆ ಸಾಧಿಸಲು ಅವಕಾಶವಿದೆ.

Story first published: Thursday, January 9, 2020, 18:31 [IST]
Other articles published on Jan 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X