ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ಭಾರತದ ವಿರುದ್ಧ 3ನೇ ಟಿ20 ಗೆದ್ದು ಸರಣಿ ವಶಪಡಿಸಿದ ಶ್ರೀಲಂಕಾ

India vs Sri Lanka 3rd t20i: Sri lanka win by 7 wicket and won series Highlights

ಕೊಲಂಬೋ: ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮೂರನೇ ಪಂದ್ಯವನ್ನು ಶ್ರೀಲಂಕಾ ತಂಡ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಭಾರತ ತಂಡ ನೀಡಿದ ಸುಲಭ ಸವಾಲನ್ನು ಸ್ವೀಕರಿಸಿದ ಶ್ರೀಲಂಕಾ 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿ ಶ್ರೀಲಂಕಾ ಪಾಲಾಗಿದೆ.

ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ಭಾರತದ ಬ್ಯಾಟಿಂಗ್ ಸಂಪೂರ್ಣವಾಗಿ ವೈಫಲ್ಯವನ್ನು ಅನುಭವಿಸಿತು. ಇದರ ಪರಿಣಾಮವಾಗಿ ನಿಗದಿತ 20 ಓವರ್‌ಗಳಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು ಕೇವಲ 81 ರನ್‌ಗಳಿಸಲಷ್ಟೇ ಶಕ್ತವಾಯಿತು.

ಟೋಕಿಯೋ ಒಲಿಂಪಿಕ್ಸ್: ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಭಾರತದ ಅತನು ದಾಸ್‌ಗೆ ಜಯಟೋಕಿಯೋ ಒಲಿಂಪಿಕ್ಸ್: ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಭಾರತದ ಅತನು ದಾಸ್‌ಗೆ ಜಯ

ಭಾರತದ ಬ್ಯಾಟ್ಸ್‌ಮನ್‌ಗಳ ಹೀನಾಯ ಪ್ರದರ್ಶನ

ಭಾರತದ ಬ್ಯಾಟ್ಸ್‌ಮನ್‌ಗಳ ಹೀನಾಯ ಪ್ರದರ್ಶನ

ನಾಯಕ ಶಿಖರ್ ಧವನ್, ಸಂಜು ಸ್ಯಾಮ್ಸನ್ ಸಹಿತ ಎಲ್ಲಾ ಬ್ಯಾಟ್ಸ್‌ಮನ್‌ಗಳು ಹೀನಾಯ ಪ್ರದರ್ಶನ ನೀಡಿದರು. ಕುಲ್‌ದೀಪ್ ಯಾದವ್ ಗಳಿಸಿದ 23 ರನ್ ಭಾರತದ ಪರವಾಗಿ ದಾಖಲಾದ ಅತಿ ಹೆಚ್ಚಿನ ಸ್ಕೋರ್ ಆಗಿದೆ. ಉಳಿದಂತೆ ಭುವನೇಶ್ವರ್ ಕುಮಾರ್ ಹಾಗೂ ಋತುರಾಜ್ ಗಾಯಕ್ವಾಡ್ ಮಾತ್ರವೇ ಎರಡಂಕಿ ಮೊತ್ತವನ್ನು ಗಳಿಸಲು ಯಶಸ್ವಿಯಾಗಿದ್ದರು.

ಸುಲಭವಾಗಿ ಗೆದ್ದ ಲಂಕಾ

ಸುಲಭವಾಗಿ ಗೆದ್ದ ಲಂಕಾ

ಇನ್ನು ಭಾರತ ನೀಡಿದ ಈ ಸುಲಭ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ತಲುಪಿದೆ. ಶ್ರೀಲಂಕಾ ಇನ್ನೂ 33 ಎಸೆತಗಳು ಬಾಕಿಯಿರುವಂತೆಯೇ ಪಂದ್ಯವನ್ನು ಗೆದ್ದು ಬೀಗಿದೆ. ಭಾರತೀಯ ಬೌಲರ್‌ಗಳು ಉತ್ತಮ ದಾಳಿ ಸಂಘಟಿಸಿದರಾದರೂ ಸಣ್ಣ ಗುರಿ ಶ್ರೀಲಂಕಾ ಮುಂದಿದ್ದರಿಂದ ಅನಿರೀಕ್ಷಿತ ಫಲಿತಾಂಶವನ್ನು ನಿರೀಕ್ಷಿಸುವುದು ಸಾಧ್ಯವಿರಲಿಲ್ಲ.

ಟಿ20 ಸರಣಿ ಸೋತ ಭಾರತ

ಟಿ20 ಸರಣಿ ಸೋತ ಭಾರತ

ಭಾರತದ ಪರವಾಗಿ ಭುವನೇಶ್ವರ್ ಕುಮಾರ್ ಎರಡು ವಿಕೆಟ್ ಕಬಳಿಸಿದರೆ ವರುಣ್ ಚಕ್ರವರ್ತಿ ಕುಲ್‌ದೀಪ್ ಯಾದವ್ ಹಾಗೂ ಮೊದಲ ಪಂದ್ಯವನ್ನಾಡಿದ ಸಂದೀಪ್ ವಾರಿಯರ್ ತಲಾ ಎರಡು ವಿಕೆಟ್ ಕಬಳಿಸಿದರು. ಈ ಫಲಿತಾಂಶದ ಮೂಲಕ ಭಾರತ ಸುದೀರ್ಘ ಕಾಲದ ಬಳಿಕ ಟಿ20 ಸರಣಿಯನ್ನು ಎದುರಾಳಿಗೆ ಬಿಟ್ಟುಕೊಟ್ಟಂತಾಗಿದೆ.

Rahul Dravid ಅವರ ಪ್ರಕಾರ ಯಾವ ಆಟಗಾರ ಬೆಸ್ಟ್ ಆಟಗಾರ | Oneindia Kannada
ಭಾರತ ತಂಡಕ್ಕೆ ದುಬಾರಿಯಾದ ಕೊರೊನಾವೈರಸ್

ಭಾರತ ತಂಡಕ್ಕೆ ದುಬಾರಿಯಾದ ಕೊರೊನಾವೈರಸ್

ಇನ್ನು ಈ ಸರಣಿಯಲ್ಲಿ ಭಾರತ ತಂಡಕ್ಕೆ ಕೊರೊನಾವೈರಸ್ ದೊಡ್ಡ ಹಾನಿಯನ್ನುಂಟು ಮಾಡಿತ್ತು. ಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದ 7 ಮಂದಿ ಆಟಗಾರರು ಅಂತಿಮ ಎರಡು ಪಂದ್ಯಗಳಿಗೆ ಕಣಕ್ಕಿಳಿಯಲು ಸಾಧ್ಯವಾಗಿರಲಿಲ್ಲ. ಟೀಮ್ ಇಂಡಿಯಾದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಕೊರೊನಾವೈರಸ್‌ಗೆ ತುತ್ತಾಗಿದ್ದ ಪರಿಣಾಮವಾಗಿ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಆಟಗಾರರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತು. ಹಿಗಾಗಿ ಟೀಮ್ ಇಂಡಿಯಾ ಬಹುತೇಕ ಹೊಸ ಆಟಗಾರರೊಂದಿಗೆ ಕಣಕ್ಕಿಳಿದಿತ್ತು.

Story first published: Friday, July 30, 2021, 9:47 [IST]
Other articles published on Jul 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X