ಟೀಮ್ ಇಂಡಿಯಾಗೆ ಕೋವಿಡ್ ಆತಂಕ: ಐಸೋಲೇಶನ್‌ನಲ್ಲಿದ್ದ ಎಲ್ಲಾ ಕ್ರಿಕೆಟಿಗರ ವರದಿ ನೆಗೆಟಿವ್

ಕೊಲಂಬೋ, ಜುಲೈ 27: ಕೊರೊನಾವೈರಸ್‌ನ ಆತಂಕವನ್ನು ಎದುರಿಸುತ್ತಿದ್ದ ಟೀಮ್ ಇಂಡಿಯಾ ನಿರಾಳಪಡುವಂತಾ ಸುದ್ದಿ ಬಂದಿದೆ. ಕೃನಾಲ್ ಪಾಂಡ್ಯ ಜೊತೆಗೆ ನಿಕಟ ಸಂಪರ್ಕವನ್ನು ಹೊಂದಿದ್ದ ಟೀಮ್ ಇಂಡಿಯಾದ 8 ಕ್ರಿಕೆಟಿಗರ ಕೋವಿಡ್ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ.

ಶ್ರೀಲಂಕಾ ವಿರುದ್ಧ ಎರಡನೇ ಟಿ20 ಸರಣಿಯ ಆರಂಭಕ್ಕೂ ಕೆಲವೇ ಗಂಟೆಗಳ ಮೊದಲು ಟೀಮ್ ಇಂಡಿಯಾ ಆಟಗಾರ ಕೃನಾಲ್ ಪಾಂಡ್ಯ ಕೊರೊನಾವೈರಸ್‌ಗೆ ತುತ್ತಾಗಿರುವುದು ಪರೀಕ್ಷೆಯಿಂದ ತಿಳಿದುಬಂದಿತ್ತು. ಉಳಿದ ಆಟಗಾರರ ಪೈಕಿ ಕೃನಾಲ್ ಪಾಂಡ್ಯ ಅವರ ನಿಕಟ ಸಂಪರ್ಕವನ್ನು ಹೊಂದಿದ್ದ 8 ಕ್ರಿಕೆಟಿಗರನ್ನು ಐಸೋಲೇಶನ್‌ಗೆ ಒಳಪಡಿಸಿ ಕೊರೊನಾಪರೀಕ್ಷೆಗೆ ಒಳಪಡಿಸಲಾಗಿತ್ತು.

ಈ ಎಲ್ಲಾ 8 ಆಟಗಾರರ ಕೊರೊನಾಪರೀಕ್ಷೆಯ ವರದಿ ಈಗ ಬಂದಿದೆ. ಕೃನಾಲ್ ಪಾಂಡ್ಯ ಹೊರತುಪಡಿಸಿ ಭಾರತೀಯ ಕ್ರಿಕೆಟ್ ಎಲ್ಲಾ ಆಟಗಾರರು ಕೂಡ ಕೊರೊನಾವೈರಸ್ ನೆಗೆಟಿವ್ ವರದಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಭಾರತ ಹಾಗೂ ಶ್ರೀಲಂಕಾ ಟಿ20 ಸರಣಿಗಿದ್ದ ಎಲ್ಲಾ ಆತಂಕಗಳು ಕೂಡ ಕಡಿಮೆಯಾಗಿದೆ.

ಭಾರತ vs ಶ್ರೀಲಂಕಾ: ಕೃನಾಲ್ ಪಾಂಡ್ಯಗೆ ಕೋವಿಡ್-19 ಸೋಂಕುಭಾರತ vs ಶ್ರೀಲಂಕಾ: ಕೃನಾಲ್ ಪಾಂಡ್ಯಗೆ ಕೋವಿಡ್-19 ಸೋಂಕು

ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಮಂಗಳವಾರ ನಡೆಯಬೇಕಾಗಿತ್ತು. ಆದರೆ ಕೊರೊನಾವೈರಸ್‌ನ ಕಾರಣದಿಂದಾಗಿ ಪಂದ್ಯವನ್ನು ಒಂದು ದಿನ ಮುಂದೂಡಲಾಗಿದೆ. ಜುಲೈ 28 ಬುಧವಾರದಂದು ಈ ಪಂದ್ಯ ನಡೆಯಲಿದೆ.

ಮಂಗಳವಾರ ಬೆಳಗ್ಗೆ ನಡೆಸಿದ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಸಂದರ್ಭದಲ್ಲಿ ಕೃನಾಲ್ ಪಾಂಡ್ಯ ಕೊರೊನಾವೈರಸ್‌ಗೆ ತುತ್ತಾಗಿರುವುದು ಪತ್ತೆಯಾಗಿತ್ತು. ಹೀಗಾಗಿ ಅವರೊಂದಿಗೆ ಆಪ್ತ ಸಂಪರ್ಕದಲ್ಲಿದ್ದ 8 ಕ್ರಿಕೆಟಿಗರನ್ನು ಬಿಸಿಸಿಐನ ವೈದ್ಯಕೀಯ ತಂಡ ಗುರುತಿಸಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿತ್ತು. ಈ ಪರೀಕ್ಷೆಯ ವರದಿ ಈಗ ಹೊರಬಿದ್ದಿದೆ.

Ind vs SL ಅಂತಿಮ ಟಿ20 ಪಂದ್ಯಗಳಿಗೆ ಲಭ್ಯ ಆಟಗಾರರ ಪಟ್ಟಿ | Oneindia Kannada

ಕೃನಾಲ್ ಪಾಂಡ್ಯ ಮುಂದಿನ ಎರಡು ಟಿ20 ಪಂದ್ಯಗಳಿಂದಲೂ ಹೊರಗುಳಿಯಬೇಕಿದೆ. ಏಳು ದಿನಗಳ ಕಡ್ಡಾಯ ಐಸೋಲೇಶನ್ ಪೂರೈಸಿದ ಬಳಿಕ ಭಾರತಕ್ಕೆ ಮರಳಲಿದ್ದಾರೆ. ಹೀಗಾಗಿ ಭಾರತೀಯ ತಂಡ ಜುಲೈ 30ರಂದು ಭಾರತಕ್ಕೆ ಮರಳಲಿದ್ದರೂ ಕೃನಾಲ್ ಪಾಂಡ್ಯ ಶ್ರೀಲಂಕಾದಲ್ಲಿದ್ದು ಕ್ವಾರಂಟೈನ್ ಪೂರೈಸಿದ ಬಳಿಕ ಭಾರತಕ್ಕೆ ಮರಳಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, July 27, 2021, 23:30 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X