ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ಅಂತಿಮ 2 ಟಿ20 ಪಂದ್ಯಗಳಿಗೆ ಲಭ್ಯ ಆಟಗಾರರ ಪಟ್ಟಿ: ಭುವಿಗೆ ನಾಯಕನ ಪಟ್ಟ?

India vs Sri lanka: available players list and Bhuvneshwar could lead the team
Ind vs SL ಅಂತಿಮ ಟಿ20 ಪಂದ್ಯಗಳಿಗೆ ಲಭ್ಯ ಆಟಗಾರರ ಪಟ್ಟಿ | Oneindia Kannada

ಕೊಲಂಬೋ, ಜುಲೈ 28: ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಗೆ ಕೊರೊನಾವೈರಸ್ ಆಘಾತವನ್ನುಂಟು ಮಾಡಿದೆ. ಕೃನಾಲ್ ಪಾಂಡ್ಯ ಮಾತ್ರವೇ ಕೊರೊನಾವೈರಸ್‌ಗೆ ತುತ್ತಾಗಿದ್ದರು ಕೂಡ ಅವರ ಸಂಪರ್ಕದಲ್ಲಿದ್ದ ಉಳಿದ ಎಂಟು ಆಟಗಾರರನ್ನು ಐಸೋಲೇಶನ್‌ಗೆ ಒಳಪಡಿಸಲಾಗಿದೆ. ಸ್ವತಃ ನಾಯಕ ಶಿಖರ್ ಧವನ್ ಕೂಡ ಐಸೋಲೇಶನ್‌ಗೆ ಒಳಗಾದ ಆಟಗಾರರ ಪಟ್ಟಿಯಲ್ಲಿದ್ದಾರೆ.

ಈ ಎಲ್ಲಾ ಆಟಗಾರರ ಕೊರೊನಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಹಾಗಿದ್ದರೂ ಮುಂಜಾಗೃತಾ ಕ್ರಮವಾಗಿ ಆಟಗಾರರನ್ನು ಕಡ್ಡಾಯ ಐಸೋಲೇಶನ್ ಪೂರೈಸಬೇಕಾಗಿದೆ. ಹೀಗಾಗಿ ಅಂತಿಮ ಎರಡು ಪಂದ್ಯಗಳಲ್ಲಿ ಕೂಡ ಈ ಎಲ್ಲಾ ಎಂಟು ಮಂದಿ ಆಟಗಾರರು ಆಡಲು ಇಳಿಯುವುದಿಲ್ಲ. ಹೀಗಾಗಿ ಉಳಿದ ಆಟಗಾರರ ತಂಡದೊಂದಿಗೆ ಭಾರತ ತಂಡ ಕಣಕ್ಕಿಳಿಯಲಿದೆ. ಹೀಗಾಗಿ ತಂಡದ ಸಂಯೋಜನೆ ಕೂಡ ಸವಾಲಾಗಿದೆ.

ಭಾರತ vs ಶ್ರೀಲಂಕಾ ಎರಡನೇ ಟಿ ಟ್ವೆಂಟಿ ನಡೆಯುತ್ತಾ? ಈ 9 ಭಾರತೀಯ ಆಟಗಾರರು ಟೂರ್ನಿಯಿಂದಲೇ ಔಟ್!ಭಾರತ vs ಶ್ರೀಲಂಕಾ ಎರಡನೇ ಟಿ ಟ್ವೆಂಟಿ ನಡೆಯುತ್ತಾ? ಈ 9 ಭಾರತೀಯ ಆಟಗಾರರು ಟೂರ್ನಿಯಿಂದಲೇ ಔಟ್!

ಹಾಗಾದರೆ ಶ್ರೀಲಂಕಾ ವಿರುದ್ಧದ ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಲಭ್ಯವಿರುವ ಭಾರತೀಯ ತಂಡ ಹೇಗಿದೆ? ವೇಗಿ ಭುವನೇಶ್ವರ್ ಕುಮಾರ್ ಮೊಟ್ಟ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಜವಾಬ್ಧಾರಿ ಹೋರುತ್ತಾರಾ? ಮುಂದೆ ಓದಿ..

ಸ್ವತಃ ನಾಯಕ ಧವನ್ ಅಲಭ್ಯ

ಸ್ವತಃ ನಾಯಕ ಧವನ್ ಅಲಭ್ಯ

ಇನ್ನು ಸ್ವತಃ ನಾಯಕ ಶಿಖರ್ ಧವನ್ ಅಂತಿಮ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯುವುದು ಅಸಾಧ್ಯವಾಗಿರುವ ಕಾರಣ ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಅನಿವಾರ್ಯವಾಗಿದೆ. ಟೀಮ್ ಇಂಡಿಯಾದ ಅನುಭವು ವೇಗಿ ಭುವನೇಶ್ವರ್ ಕುಮಾರ್‌ಗೆ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ದೊರೆಯುವ ಸಾಧ್ಯತೆಯಿದೆ.

ಉಪನಾಯಕನ ಜವಾಬ್ಧಾರಿ ನಿರ್ವಹಿಸಿರುವ ಭುವಿ

ಉಪನಾಯಕನ ಜವಾಬ್ಧಾರಿ ನಿರ್ವಹಿಸಿರುವ ಭುವಿ

ಶ್ರೀಲಂಕಾ ವಿರುದ್ಧದ ಸರಣಿಗೆ ಶಿಖರ್ ಧವನ್ ನಾಯಕನಾಗಿ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಉಪನಾಯಕನಾಗಿ ಹೆಸರಿಸಲಾಗಿತ್ತು. ಈಗ ಅಂತಿಮ ಎರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಭುವಿ ಪಾಲಿಗೆ ದೊರೆಯುವ ಸಾಧ್ಯತೆಯಿದೆ. ಈ ಎರಡು ಪಂದ್ಯಗಳು ಕೂಡ ಭಾರತದ ಪಾಲಿಗೆ ಅತ್ಯಂತ ಸವಾಲಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಟೀಮ್ ಇಂಡಿಯಾದಲ್ಲಿ ಇಲ್ಲ ಆಯ್ಕೆಗಳು

ಟೀಮ್ ಇಂಡಿಯಾದಲ್ಲಿ ಇಲ್ಲ ಆಯ್ಕೆಗಳು

ಕೊರೊನಾ ವೈರಸ್‌ಗೆ ತುತ್ತಾಗಿರುವ ಕೃನಾಲ್ ಪಾಂಡ್ಯ ಸೇರಿದಂತೆ 9 ಮಂದಿ ಆಟಗಾರರು ಆಡಲಿಳಿಯುವುದು ಅಸಾಧ್ಯವಾಗಿರುವ ಕಾರಣ ಭಾರತೀಯ ತಂಡದಲ್ಲಿ ಆಡಲು ಈಗ ಆಯ್ಕೆಗಳು ಉಳಿದಿಲ್ಲ. ತಂಡದಲ್ಲಿ ಈಗ ಒಟ್ಟು 11 ಆಟಗಾರರು ಉಳಿದುಕೊಂಡಿದ್ದಾರೆ. ಹೀಗಾಗಿ ಈ ಯುವ ಆಟಗಾರರ ಬಳಗ ಲಂಕಾ ವಿರುದ್ಧದ ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಆಡಲು ಲಭ್ಯವಿರುವ ಆಟಗಾರರ ಪಟ್ಟಿ

ಆಡಲು ಲಭ್ಯವಿರುವ ಆಟಗಾರರ ಪಟ್ಟಿ

ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ನಿತೀಶ್ ರಾಣಾ, ಸಂಜು ಸ್ಯಾಮ್ಸನ್, ರಾಹುಲ್ ಚಹರ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ವರುಣ್ ಚಕ್ರವರ್ತಿ, ಚೇತನ್ ಸಕರಿಯಾ ಮತ್ತು ನವದೀಪ್ ಸೈನಿ ಟೀಮ್ ಇಂಡಿಯಾದಲ್ಲಿ ಲಭ್ಯವಿರುವ ಆಟಗಾರರು ಎನ್ನಲಾಗಿದೆ. ಇವರನ್ನು ಹೊರತಪಡಿಸಿ ಇಶಾನ್ ಪೊರೆಲ್, ಸಂದೀಪ್ ವಾರಿಯರ್ ಮತ್ತು ಸಾಯಿ ಕಿಶೋರ್ ನೆಟ್ ಬೌಲರ್‌ಗಳಾಗಿ ತಂಡದಲ್ಲಿದ್ದಾರೆ.

Story first published: Thursday, July 29, 2021, 17:06 [IST]
Other articles published on Jul 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X