ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ಸಂಜು ಹಾಗೂ ಇಶಾನ್ ಮಧ್ಯೆ ಯಾರು ಬೆಸ್ಟ್?

India vs Sri lanka: Choice between sanju samson and Ishan Kishan is tough says Aakash Chopra

ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿ ಮುಂದೂಡಿಕೆಯಾಗಿದೆ. ಈ ಸರಣಿಯಲ್ಲಿ ಬಹುತೇಕ ಯುವ ಆಟಗಾರರನ್ನೇ ಒಳಗೊಂಡಿದೆ. ಹಾಗಿದ್ದರೂ ಆಡುವ ಬಳಗದಲ್ಲಿ ಯಾರು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.

ಅದರಲ್ಲೂ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಥಾನಕ್ಕಿರುವ ಪೈಪೋಟಿ ಹೆಚ್ಚು ಗಮನಸೆಳೆಯುತ್ತದೆ. ಪ್ರತಿಭಾವಂತ ಯುವ ಆಟಗಾರರಾದ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಈ ಸ್ಥಾನಕ್ಕಾಗಿ ತೀವ್ರ ಪೈಪೋಟಿಯನ್ನು ನಡೆಸುತ್ತಿದ್ದಾರೆ. ಈ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಅವರಲ್ಲಿ ಕೇಳಿದ ಪ್ರಶ್ನೆಗೆ ಅವರು ಕುತೂಹಲಕಾರಿ ಉತ್ತರವನ್ನು ನೀಡಿದ್ದಾರೆ.

ಭಾರತ vs ಶ್ರೀಲಂಕಾ: ಬದಲಾಗಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿಭಾರತ vs ಶ್ರೀಲಂಕಾ: ಬದಲಾಗಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ

ನಿಜಕ್ಕೂ ಈ ಪ್ರಶ್ನೆ ಕಠಿಣ

ನಿಜಕ್ಕೂ ಈ ಪ್ರಶ್ನೆ ಕಠಿಣ

"ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಮಧ್ಯೆ ಯಾರು ಆಡಲಿದ್ದಾರೆ ಎಂಬ ಪ್ರಶ್ನೆ ನಿಜಕ್ಕೂ ಕಠಿಣವಾಗಿದೆ. ನನಗೂ ಹಾಗೆಯೇ ಅನಿಸುತ್ತದೆ, ರಾಹುಲ್ ದ್ರಾವಿಡ್ ಹಾಗೂ ಶಿಖರ್ ಧವನ್ ಇದ್ದಾರೆ. ನನ್ನ ಪ್ರಕಾರ ಇಬ್ಬರೂ ಕೂಡ ಮೂರು ಮೂರು ಪಂದ್ಯಗಳಲ್ಲಿ ಆಡಬಹುದು ಎನಿಸುತ್ತದೆ" ಎಂಬ ಅಭಿಪ್ರಾಯವನ್ನು ಆಕಾಶ್ ಚೋಪ್ರ ವ್ಯಕ್ತಪಡಿಸಿದ್ದಾರೆ.

ಮೊದಲಿಗೆ ಇಶಾನ್ ಆಡಬಹುದು

ಮೊದಲಿಗೆ ಇಶಾನ್ ಆಡಬಹುದು

ಆದರೆ ಇದೇ ಸಂದರ್ಭದಲ್ಲಿ ಅವರು ಮೊದಲಿಗೆ ಯಾರು ಆಡಬಹುದು ಎಂಬ ಬಗ್ಗೆ ತನ್ನ ಅಭಿಪ್ರಾಯವನ್ನು ತಿಳಿಸಿದ್ದಾರೆ. ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಮಧ್ಯೆ ಮೊದಲಿಗೆ ಇಶಾನ್ ಕಿಶನ್ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಕರ್ತವ್ಯ ನಿರ್ವಹಿಸಬಹುದು ಎಂದು ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಇಶಾನ್ ಕಿಶನ್ ಪ್ರದರ್ಶನ ಅತ್ಯುತ್ತಮವಾಗಿದೆ. ಯಾರಾದರೂ ಉತ್ತಮ ಪ್ರದರ್ಶನ ನೀಡಿದರೆ ಆತನಿಗೆ ನೀವು ಬಹುಮಾನವನ್ನು ನೀಡಬೇಕಾಗುತ್ತದೆ ಎಂದು ಆಕಾಶ್ ಚೋಪ್ರ ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ ತಂಡ ! | Oneindia Kannada
ಸಂಜುಗೆ ಸೀಮಿತ ಆವಕಾಶ

ಸಂಜುಗೆ ಸೀಮಿತ ಆವಕಾಶ

"ಸಂಜು ಸ್ಯಾಮ್ಸನ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೀಮಿತ ಅವಕಾಶಗಳು ದೊರೆತಿದೆ. ಸಿಕ್ಕ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಆತನಿಂದ ಸಾಧ್ಯವಾಗಿಲ್ಲ. ಆದರೆ ಈಗ ಮತ್ತೊಂದು ಅವಕಾಶ ಆತನ ಮುಂದಿದೆ" ಎಂದಿದ್ದಾರೆ ಆಕಾಶ್ ಚೋಪ್ರ. ಸಂಜು ಸ್ಯಾಮ್ಸನ್ ಭಾರತದ ಪರವಾಗಿ 7 ಟಿ20 ಪಂದ್ಯಗಳಲ್ಲಿ ಆಡಿದ್ದು 11.85ರ ಸರಾಸರಿಯಲ್ಲಿ 83 ರನ್ ಮಾತ್ರವೇ ಗಳಿಸಿದ್ದಾರೆ.

Story first published: Sunday, July 11, 2021, 17:08 [IST]
Other articles published on Jul 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X