ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಟಿ20ಐ ಪಂದ್ಯದಿಂದ ನವದೀಪ್ ಸೈನಿ ಹೊರ ಬೀಳುವ ಸಾಧ್ಯತೆ

India vs Sri Lanka: Fast bowler Navdeep Saini sustains shoulder injury, likely to miss final T20I

ಕೊಲಂಬೋ: ಭಾರತದ ವೇಗಿ ನವದೀಪ್ ಸೈನಿ ಭಾರತ ಮತ್ತು ಶ್ರೀಲಂಕಾ ನಡುವಿನ ತೃತೀಯ ಮತ್ತು ಕೊನೇಯ ಟಿ20ಐ ಪಂದ್ಯದಿಂದ ಹೊರ ಬೀಳುವ ಸಾಧ್ಯತೆಯಿದೆ. ದ್ವಿತೀಯ ಪಂದ್ಯದ ವೇಳೆ ಸೈನಿ ಭುಜಕ್ಕೆ ಗಾಯವಾಗಿತ್ತು. ಹೀಗಾಗಿ ಅವರು ಕೊನೇ ಪಂದ್ಯದಿಂದ ಹೊರ ಬೀಳುವ ನಿರೀಕ್ಷೆಯಿದೆ.

ಭಾರತ vs ಶ್ರೀಲಂಕಾ: ವಿಶೇಷ ದಾಖಲೆ ಬರೆದ ದೇವದತ್ ಪಡಿಕ್ಕಲ್ಭಾರತ vs ಶ್ರೀಲಂಕಾ: ವಿಶೇಷ ದಾಖಲೆ ಬರೆದ ದೇವದತ್ ಪಡಿಕ್ಕಲ್

ಕೊಲಂಬೋದ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಟಿ20ಐ ಪಂದ್ಯದ ವೇಳೆ ಶ್ರೀಲಂಕಾದ ಇನ್ನಿಂಗ್ಸ್‌ನಲ್ಲಿ ಸೈನಿ ಅವರು ಚಮಿಕ ಕರುಣರತ್ನೆ ಕ್ಯಾಚ್ ಪಡೆಯಲೆತ್ನಿಸಿ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಬಲಗೈ ವೇಗಿ ಸೈನಿ ಎಕ್ಸ್ಟ್ರಾ ಕವರ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಗಾಯವಾಗಿತ್ತು.

ಚಮಿಕ ಹೊಡೆದ ಚೆಂಡು ಸೈನಿಯ ಮೇಲಿಂದ ಹಾದು ಹೋಗುವಾಗ ಸೈನಿ ಕ್ಯಾಚ್ ಪಡೆಯಲು ಯತ್ನಿಸಿ ಕೆಳಕ್ಕೆ ಬಿದ್ದರು. ಆಗ ಸೈನಿ ಭುಜಕ್ಕೆ ಗಾಯವಾಗಿದ್ದು ಅವರ ಮುಖಭಾವದಲ್ಲೇ ಗೊತ್ತಾಗಿತ್ತು. ಹೀಗಾಗಿ ಜುಲೈ 29ರಂದು ನಡೆಯಲಿರುವ ತೃತೀಯ ಟಿ20ಐ ಪಂದ್ಯದಲ್ಲಿ ಸೈನಿ ಆಡುವ ಸಾಧ್ಯತೆಯಿಲ್ಲ.

ಭಾರತ vs ಶ್ರೀಲಂಕಾ 3ನೇ ಟಿ ಟ್ವೆಂಟಿ: ಸಂಭಾವ್ಯ ಆಟಗಾರರ ಪಟ್ಟಿ, ನೇರಪ್ರಸಾರದ ಮಾಹಿತಿಭಾರತ vs ಶ್ರೀಲಂಕಾ 3ನೇ ಟಿ ಟ್ವೆಂಟಿ: ಸಂಭಾವ್ಯ ಆಟಗಾರರ ಪಟ್ಟಿ, ನೇರಪ್ರಸಾರದ ಮಾಹಿತಿ

Rahul Chahar ಈ ರೀತಿ ನಡೆದುಕೊಂಡಿದ್ದೇಕೆ | Oneindia Kannada

ಭಾರತೀಯ ತಂಡದಲ್ಲಿ ಕೃನಾಲ್ ಪಾಂಡ್ಯಗೆ ಕೋವಿಡ್ ಸೋಂಕು ತಗುಲಿದ್ದರಿಂದ ಮುನ್ನೆಚ್ಚರಿಕೆಯಾಗಿ ಭಾರತ ತಂಡದಲ್ಲಿ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ದೀಪಕ್ ಚಾಹರ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಮೊದಲಾದವರು ಐಸೊಲೇಶನ್‌ನಲ್ಲಿದ್ದರು. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಸೈನಿ ಕಣಕ್ಕಿಳಿದಿದ್ದರು. ಆದರೆ ಪಂದ್ಯದಲ್ಲಿ ಭಾರತ 4 ವಿಕೆಟ್ ಸೋಲನುಭವಿಸಿತ್ತು.

Story first published: Thursday, July 29, 2021, 14:29 [IST]
Other articles published on Jul 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X