ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ನಿಮಗೆ ತಿಳಿದಿಲ್ಲದ 3ನೇ ಏಕದಿನ ಪಂದ್ಯದ 5 ಕುತೂಹಲಕಾರಿ ಸಂಗತಿಗಳು!

India vs Sri Lanka: Five interesting facts of ODI series between India and Sri Lanka

ಕೊಲಂಬೋ, ಜುಲೈ 24: ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡ ಗೆಲುವು ಸಾಧಿಸಿದೆ. ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದರಿಂದ ಭಾರತ ಅದಾಗಲೇ ಏಕದಿನ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತ್ತು. ಹೀಗಾಗಿ ಅಂತಿಮ ಪಂದ್ಯದಲ್ಲಿ ಭಾರೀ ಬದಲಾವಣೆಯೊಂದಿಗೆ ಭಾರತ ತಂಡ ಕಣಕ್ಕಿಳಿದಿತ್ತು. ಹಾಗಿದ್ದರೂ ಶ್ರೀಲಂಕಾಗೆ ಭಾರೀ ಪೈಪೋಟಿ ನೀಡಿ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಕೆಲ ಕುತೂಹಲಕಾರಿ ಅಂಕಿಅಂಶಗಳು ದಾಖಲಾಗಿದೆ.

ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತದ ನಾಯಕ ಶಿಖರ್ ಧವನ್ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ರು. ಆದರೆ ಭಾರತದ ಪರವಾಗಿ ಪೃಥ್ವಿ ಶಾ, ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್‌ಮನ್‌ನಿಂದ ಕೂಡ ಹೇಳಿಕೊಳ್ಳುವಂತಾ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ 226 ರನ್‌ಗಳ ಗುರಿಯನ್ನು ಭಾರತ ಮುಂದಿಟ್ಟಿತ್ತು. ಇದನ್ನು ಶ್ರೀಲಂಕಾ 7 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತ್ತು.

ಜರ್ಮನ್ ಸೈಕ್ಲಿಸ್ಟ್ ಸೈಮನ್ ಗೆಶ್ಕೆಗೆ ಕೊರೊನಾ ಸೋಂಕು, ಒಲಿಂಪಿಕ್ಸ್‌ನಿಂದ ಹೊರಕ್ಕೆಜರ್ಮನ್ ಸೈಕ್ಲಿಸ್ಟ್ ಸೈಮನ್ ಗೆಶ್ಕೆಗೆ ಕೊರೊನಾ ಸೋಂಕು, ಒಲಿಂಪಿಕ್ಸ್‌ನಿಂದ ಹೊರಕ್ಕೆ

ಈ ಅಂತಿಮ ಪಂದ್ಯದಲ್ಲಿ ಕೆಲ ಕುತೂಹಲಕಾರಿ ಸಂಗತಿಗಳು ದಾಖಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ..

ಚೊಚ್ಚಲ ಪಂದ್ಯದಲ್ಲಿ ರಾಹುಲ್ ಚಾಹರ್ ವಿಶೇಷ ಸಾಧನೆ

ಚೊಚ್ಚಲ ಪಂದ್ಯದಲ್ಲಿ ರಾಹುಲ್ ಚಾಹರ್ ವಿಶೇಷ ಸಾಧನೆ

ಇನ್ನು ಟೀಮ್ ಇಂಡಿಯಾಗೆ ಏಕದಿನ ಮಾದರಿಯಲ್ಲಿ ಮೊದಲ ಬಾರಿಗೆ ಪದಾರ್ಪಣೆ ಮಾಡಿದ ರಾಹುಲ್ ಚಾಹರ್ ಮೊದಲ ಪಂದ್ಯದಲ್ಲಿ ಮಿಂಚಿದರು. ಪ್ರಥಮ ಏಕದಿನ ಪಂದ್ಯದಲ್ಲಿಯೇ ಅವರು ಶ್ರೀಲಂಕಾ ತಂಡದ ಮೂವರು ಆಟಗಾರರನ್ನು ಬಲಿಪಡೆದಿದ್ದಾರೆ. ಈ ಮೂಲಕ ಪ್ರಥಮ ಏಕದಿನ ಪಂದ್ಯದಲ್ಲಿಯೇ ಮೂರು ವಿಕೆಟ್‌ಗಳ ಗೊಂಚಲು ಪಡೆದ ಭಾರತದ 6ನೇ ಬೌಲರ್ ಎನಿಸಿದ್ದಾರೆ. ಬಿ ಚಂದ್ರಶೇಖರ್ (1976) ದಿಲೀಪ್ ದೋಶಿ (1980), ನೋಯೆಲ್ ಡೇವಿಡ್ (1997), ಪಿಯೂಷ್ ಚಾವ್ಲಾ (2007) ರಾಹುಲ್ ಶರ್ಮಾ (2011) ರಾಹುಲ್ ಚಾಹರ್‌ಗೂ ಮುನ್ನ ಈ ಸಾಧನೆ ಮಾಡಿದ್ದರು.

ಸಂಜು ಸ್ಯಾಮ್ಸನ್ ಪದಾರ್ಪಣೆಯಲ್ಲೂ ದಾಖಲೆ

ಸಂಜು ಸ್ಯಾಮ್ಸನ್ ಪದಾರ್ಪಣೆಯಲ್ಲೂ ದಾಖಲೆ

ಇನ್ನು ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಮೊದಲ ಬಾರಿಗೆ ಆಡಲಿಳಿದ ಸಂಜು ಸ್ಯಾಮ್ಸನ್ ಕೂಡ ವಿಶೇಷ ದಾಖಲೆಯಿಂದನ್ನು ಬರೆದಿದ್ದಾರೆ. ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಸುದೀರ್ಘ ಕಾಲದ ಬಳಿಕ ಏಕದಿನ ತಂಡಕ್ಕೆ ಆಯ್ಕೆಯಾದ ಆಟಗಾರ ಎನಿಸಿದ್ದಾರೆ ಸಂಜು ಸ್ಯಾಮ್ಸನ್. ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 6 ವರ್ಷ 4 ದುನಗಳ ನಂತರ ಸಣಜು ಏಕದಿನ ಕ್ರಿಕೆಟ್‌ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಕೃನಾಲ್ ಪೊಆಂಡ್ಯ 2 ವರ್ಷ 139 ದಿನಗಳು ಈವರೆಗಿನ ಭಾರತೀಯ ಆಟಗಾರರ ಪೈಕಿ ದಾಖಲೆಯಾಗಿತ್ತು.

ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ದಾಖಲೆ

ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ದಾಖಲೆ

ಇನ್ನು ಭಾರತೀಯ ಕ್ರಿಕೆಟ್ ತಂಡ ಏಕದಿನ ಕ್ರಿಕೆಟ್‌ನಲ್ಲಿ ಹೊಸದೊಂದು ದಾಖಲೆಯನ್ನು ಬರೆದಿದೆ. ಈ ಸರಣಿಯಲ್ಲಿ ಈವರೆಗೆ ಭಾರತ ತಂಡಕ್ಕೆ ಅತಿ ಹೆಚ್ಚು ಆಟಗಾರರು ಪದಾರ್ಪಣೆ ಮಾಡಿದ್ದಾರೆ. ಇದು ಕೂಡ ದಾಖಲೆಯಾಗಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡದ ಏಳು ಆಟಗಾರರು ಪದಾರ್ಪಣೆ ಮಾಡಿದರು. ಭಾರತ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಪ್ರಮುಖ ಆಟಗಾರರನ್ನು ಹೊರತುಪಡಿಸಿ ಕಣಕ್ಕಿಳಿಯುತ್ತಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಯುವ ಆಟಗಾರರು ಆಡುವ ಬಳಗದಲ್ಲಿ ಅವಕಾಶವನ್ನು ಪಡೆದಿದ್ದಾರೆ. ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದಲ್ಲಿ ಪದಾರ್ಪಣೆಯನ್ನು ಮಾಡಿದ್ದರೆ ಅಂತಿಮ ಪಂದ್ಯದಲ್ಲಿ ರಾಹುಲ್ ಚಹರ್, ನಿತೀಶ್ ರಾಣಾ, ಚೇತನ್ ಸಕರಿಯಾ, ಕೃಷ್ಣಪ್ಪ ಗೌತಮ್ ಮತ್ತು ಸಂಜು ಸ್ಯಾಮ್ಸನ್ ಆಡುವ ಬಳಗದಲ್ಲಿ ಮೊದಲ ಬಾರಿಗೆ ಅವಕಾಶವನ್ನು ಗಿಟ್ಟಿಸಿದರು.

40 ವರ್ಷಗಳ ನಂತರದ ಏಕದಿನದಲ್ಲಿ ದಾಖಲೆ

40 ವರ್ಷಗಳ ನಂತರದ ಏಕದಿನದಲ್ಲಿ ದಾಖಲೆ

ಇನ್ನು ಅಂತಿಮ ಏಕದಿನ ಪಂದ್ಯದಲ್ಲಿ ಭಾರತೀಯ ಏಕದಿನ ತಂಡಕ್ಕೆ ಐವರು ಆಟಗಾರರು ಪದಾರ್ಪಣೆ ಮಾಡಿದರು. ಇದು ಕಳೆದ 40 ವರ್ಷಗಳಲ್ಲಿ ಮೊದಲಬಾರಿಯಾಗಿದೆ. ಇದಕ್ಕೂ ಮುನ್ನ 1980ರಲ್ಲಿ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ ಐವರು ಏಕದಿನ ಪಂದ್ಯಕ್ಕೆ ಕಾಲಿಟ್ಟಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಅದಾಗಿತ್ತು. ಈಗ ಶ್ರೀಲಂಕಾ ತಂಡದ ವಿರುದ್ಧವು ಐವರು ಆಟಗಾರರು ಒಂದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದಾರೆ.

Shikhar Dhawan ನಾಯಕನಾದ ಮೊದಲ ಸರಣಿ ಹೀಗಿತ್ತು | Oneindia Kannada
ಶ್ರೀಲಂಕಾ ವಿರುದ್ಧ ಮುಂದುವರಿದ ಭಾರತೀಯ ನಾಯಕರ ಅಬ್ಬರ

ಶ್ರೀಲಂಕಾ ವಿರುದ್ಧ ಮುಂದುವರಿದ ಭಾರತೀಯ ನಾಯಕರ ಅಬ್ಬರ

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತೀಯ ತಂಡದ ನಾಯಕರ ಅಬ್ಬರ ಈ ಪಂದ್ಯದಲ್ಲಿಯೂ ಮುಂದುವರಿದಿದೆ. 2014 ಹಾಗೂ 2017ರ ಸರಣಿಯಲ್ಲಿ ನಾಯಕನಾಗಿದ್ದ ವಿರಾಟ್ ಕೊಹ್ಲಿ ಅತಿ ಹೆಚ್ಚಿನ ರನ್‌ಗಳಿಸಿದ ಆಟಗಾರನಾಗಿದ್ದರು. 2017ರಲ್ಲಿ ತವರಿನಲ್ಲಿ ನಡೆದ ಸರಣಿಗೆ ನಾಯಕನಾಗಿ ರೋಹಿತ್ ಶರ್ಮಾ ಆ ಸರಣಿಯಲ್ಲಿ ಅತಿ ಹೆಚ್ಚಿನ ರನ್‌ಗಳಿಸಿದ ಆಟಗಾರನಾಗಿದ್ದರು. ಈಗ ಶಿಖರ್ ಧವನ್ ಕೂಡ ಈ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

Story first published: Saturday, July 24, 2021, 13:13 [IST]
Other articles published on Jul 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X