ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ಶಿಖರ್ ಧವನ್ XI ವಿರುದ್ಧ ಭುವನೇಶ್ವರ್ ಕುಮಾರ್ XIಗೆ ಜಯ

India vs Sri Lanka, Intra-Squad Simulation T20 Game: Bhuvneshwar XI beat Dhawan XI
ಭುವಿ ಮುಂದೆ ನಡೀಲಿಲ್ಲ ಧವನ್ ಆಟ

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಸೋಮವಾರ (ಜುಲೈ 5) ಟಿ20 ಅಭ್ಯಾಸ ಪಂದ್ಯವನ್ನಾಡಿದೆ. ಆಂತರಿಕ ಅಭ್ಯಾಸ ಪಂದ್ಯದಲ್ಲಿ ವೇಗಿ ಭುವನೇಶ್ವರ್ ಕುಮಾರ್ ತಂಡ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ತಂಡವನ್ನು ಸೋಲಿಸಿದೆ. ಜುಲೈ 13ರಿಂದ ಭಾರತ-ಶ್ರೀಲಂಕಾ ಸರಣಿಗಳು ಆರಂಭಗೊಳ್ಳಲಿದ್ದು, ಬ್ಲೂಬಾಯ್ಸ್ ಪಡೆ ಭರ್ಜರಿ ಅಭ್ಯಾಸ ನಡೆಸುತ್ತಿದೆ.

ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿಯ ಒಪ್ಪಂದ ಶೀಘ್ರ ಕೊನೆ!ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿಯ ಒಪ್ಪಂದ ಶೀಘ್ರ ಕೊನೆ!

ಈ ಅಭ್ಯಾಸ ಪಂದ್ಯದಲ್ಲಿ ಧವನ್ XI ಪರವಾಗಿ ಆಡಿದ್ದ ಕನ್ನಡಿಗ ಮನೀಶ್ ಪಾಂಡೆ ಅರ್ಧ ಶತಕ ಬಾರಿಸಿದ್ದಾರೆ. ಇತ್ತ ಭುವನೇಶ್ವರ್ XI ತಂಡದಲ್ಲಿ ಆಡಿದ್ದ ಮುಂಬೈ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್ ಕೂಡ ಸ್ಫೋಟಕ ಅರ್ಧ ಶತಕಕ್ಕಾಗಿ ಗಮನ ಸೆಳೆದಿದ್ದಾರೆ.

ಶಿಖರ್ ಧವನ್ ತಂಡ ಬ್ಯಾಟಿಂಗ್

ಶಿಖರ್ ಧವನ್ ತಂಡ ಬ್ಯಾಟಿಂಗ್

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಭ್ಯಾಸ ಪಂದ್ಯದ ಕುರಿತು ಅಪ್‌ಡೇಟ್ಸ್‌ ನೀಡಿದೆ. ಟ್ವೀಟ್ ಮಾಡಿರುವ ಬಿಸಿಸಿಐ ಪಂದ್ಯ ವಿಡಿಯೋ ಹಾಕಿಕೊಂಡಿದೆ. ಈ ವಿಡಿಯೋದಲ್ಲಿ ಶಿಖರ್ ಧವನ್ ತಂಡ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿತ್ತು ಎಂದು ಭಾರತದ ಬೌಲಿಂಗ್ ಕೋಚ್ ಪರಾಸ್ ಮ್ಹಾಬ್ರೆ ಮಾಹಿತಿ ನೀಡಿದ್ದಾರೆ.

ಪಡಿಕ್ಕಲ್, ಪೃಥ್ವಿ, ಯಾದವ್ ಉತ್ತಮ ಆಟ

ಪಡಿಕ್ಕಲ್, ಪೃಥ್ವಿ, ಯಾದವ್ ಉತ್ತಮ ಆಟ

ಮೊದಲು ಬ್ಯಾಟಿಂಗ್‌ ಮಾಡಿದ್ದ ಧವನ್ ತಂಡ 154ರನ್ ಗಳಿಸಿತ್ತು, ಇದರಲ್ಲಿ ಮನೀಶ್ ಪಾಂಡೆಯ 62 ರನ್ ಗಮನಾರ್ಹವಾಗಿತ್ತು. 20 ಓವರ್‌ಗಳಲ್ಲಿ ಧವನ್ ತಂಡ ನೀಡಿದ್ದ ಗುರಿಯನ್ನು ಭುವಿ ತಂಡ ಕೇವಲ 17 ಓವರ್‌ಗಳಲ್ಲೇ ಚೇಸ್ ಮಾಡಿತು. ಈ ವೇಳೆ ಸೂರ್ಯಕುಮಾರ್ 50+ ರನ್ ಗಳಿಸಿದರೆ, ಇನ್ನು ದೇವದತ್ ಪಡಿಕ್ಕಲ್ ಮತ್ತು ಪೃಥ್ವಿ ಶಾ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಭಾರತ-ಶ್ರೀಲಂಕಾ ಪಂದ್ಯಗಳು

ಭಾರತ-ಶ್ರೀಲಂಕಾ ಸೀಮಿತ ಓವರ್‌ಗಳ ಸರಣಿಗಳು ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಜುಲೈ 13ರಿಂದ ಆರಂಭಗೊಳ್ಳುವ ಸರಣಿ ಜುಲೈ 25ಕ್ಕೆ ಕೊನೆಗೊಳ್ಳಲಿದೆ. ಏಕದಿನ ಸರಣಿಯೊಂದಿಗೆ ಪಂದ್ಯಗಳು ಆರಂಭಗೊಳ್ಳಲಿವೆ. ಎಲ್ಲಾ ಪಂದ್ಯಗಳು ಕೊಲಂಬೋದಲ್ಲಿರುವ ಆರ್‌ ಪ್ರೇಮಾನಂದ ಸ್ಟೇಡಿಯಂನಲ್ಲಿ ನಡೆಯಲಿವೆ.

Story first published: Tuesday, July 6, 2021, 18:44 [IST]
Other articles published on Jul 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X