ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ಸುದೀರ್ಘ ಕಾಲದ ಬಳಿಕ ಬೌಲಿಂಗ್‌ನಲ್ಲಿ ಮಿಂಚಿದ ಕುಲ್‌ದೀಪ್

India vs Sri Lanka: Kuldeep Yadav shines in bowling after long time

ಕೊಲಂಬೋ, ಜುಲೈ 18: ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ಪ್ರದರ್ಶನ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಸುದೀರ್ಘ ಕಾಲದಿಂದ ಒಂದರ ಮೇಲೊಂದು ಹಿನ್ನೆಡೆಯನ್ನೇ ಅನುಭವಿಸುತ್ತಾ ಬಂದಿರುವ ಕುಲ್‌ದೀಪ್ ಯಾದವ್ ಲಂಕಾ ವಿರುದ್ಧದ ಸರಣಿಯನ್ನು ಉತ್ತಮವಾಗಿ ಬಳಸಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಸ್ಪಿನ್ ಜೋಡಿಯಾದ ಕುಲ್‌ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಸುದೀರ್ಘ ಕಾಲದ ಬಳಿಕ ಜೊತೆಯಾಗಿ ಆಡಲು ಇಳಿದಿದ್ದರು. ಈ ಜೋಡಿ 2019ರ ವಿಶ್ವಕಪ್‌ನ ಸೆಮಿ ಫೈನಲ್ ಪಂದ್ಯದ ಬಳಿಕ ಮತ್ತೆ ಜೊತೆಯಾಗಿ ಕಣಕ್ಕಿಳಿದಿರಲಿಲ್ಲ. ಅದರಲ್ಲೂ ಕುಲ್‌ದೀಪ್ ಯಾದವ್ ಬಳಿಕ ಬೆರಳೆಣಿಕೆಯ ಪಂದ್ಯಗಳಲ್ಲಷ್ಟೇ ಅವಕಾಶವನ್ನು ಪಡೆದುಕೊಂಡರು. ಅದರಲ್ಲಿಯೂ ಮಿಂಚುಹರಿಸಲು ಕುಲ್‌ದೀಪ್‌ಗೆ ಸಾಧ್ಯವಾಗಿರಲಿಲ್ಲ.

ಭಾರತ vs ಶ್ರೀಲಂಕಾ: ಮೊದಲ ಏಕದಿನ ಪಂದ್ಯ, Live ಸ್ಕೋರ್ ಭಾರತ vs ಶ್ರೀಲಂಕಾ: ಮೊದಲ ಏಕದಿನ ಪಂದ್ಯ, Live ಸ್ಕೋರ್

ಟೀಮ್ ಇಂಡಿಯಾದಿಂದ ಬಹುತೇಕ ಹೊರಬೀಳುವ ಹಂತದಲ್ಲಿದ್ದಂತೆ ಕುಲ್‌ದೀಪ್ ಗೋಚರಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಭಾರತ ತಂಡದಲ್ಲಿದ್ದರೂ ಆಡುವ ಬಳಗದಲ್ಲಿ ಹೆಚ್ಚಿನ ಅವಕಾಶಗಳು ದೊರೆಯದೆ ಇರುವುದು, ಆಡುವ ಬಳಗಕ್ಕೆ ಸೇರ್ಪಡೆಗೊಂಡರೂ ಹೆಚ್ಚಿನ ಅವಕಾಶಗಳನ್ನು ಕುಲ್‌ದೀಪ್‌ಗೆ ನೀಡದೆ ಇರುವುದು ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಲು ವಿಫಲರಾಗಿದ್ದು ಕುಲ್‌ದೀಪ್ ತಂಡದಿಂದ ಹೊರಬೀಳುವ ಮುನ್ಸೂಚನೆಗಳಾಗಿದ್ದವು.

ಅದಕ್ಕೆ ಪೂರಕವಾಗಿ ಕುಲ್‌ದೀಪ್ ಯಾದವ್ ಇಂಗ್ಲೆಂಡ್ ಪ್ರವಾಸದಿಂದ ಹೊರಬಿದ್ದರು. ಹೀಗಾಗಿ ಚೈನಾಮನ್ ಬೌಲರ್ ಮತ್ತೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಅನುಮಾನ ಎಂಬಂತಾ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಶ್ರೀಲಂಕಾ ಪ್ರವಾಸ ನಿಗದಿಯಾಗಿದ್ದು ಕುಲ್‌ದೀಪ್ ಈ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಬರ್ತ್‌ ಡೇ ಗರ್ಲ್ ಸ್ಮೃತಿ ಮಂಧಾನರ 3 ಅಪರೂಪದ ದಾಖಲೆಗಳಿವು!ಬರ್ತ್‌ ಡೇ ಗರ್ಲ್ ಸ್ಮೃತಿ ಮಂಧಾನರ 3 ಅಪರೂಪದ ದಾಖಲೆಗಳಿವು!

ಖುಷಿಯಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿರುವ ವಿದ್ಯಾರ್ಥಿಗಳು | Oneindia Kannada

ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ 17ನೇ ಓವರ್‌ನಲ್ಲಿ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 24 ರನ್‌ಗಳಿಸಿ ಉತ್ತಮ ಆಟವನ್ನು ಪ್ರದರ್ಶಿಸುತ್ತಿದ್ದ ಭಾನುಕ ರಾಜಪಕ್ಸ ಅವರನ್ನು ಔಟ್ ಮಾಡಿದ ಕುಲ್‌ದೀಪ್ ಬಳಿಕ ಮೂರು ಎಸೆತಗಳ ಅಂತರದಲ್ಲಿ ಮಿನೋದ್ ಭಾನುಕ ವಿಕೆಟ್ ಕೂಡ ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತಕ್ಕೆ ಸತತ ಯಶಸ್ಸು ನೀಡಿದರು. 2020ರ ಡಿಸೆಂಬರ್ ಬಳಿಕ ಕುಲ್‌ದೀಪ್‌ಗೆ ದೊರೆತ ಮೊದಲ ವಿಕೆಟ್ ಇದಾಗಿದೆ. ಇಂಗ್ಲೆಂಡ್ ವಿರುದ್ಧ ಆಡಿದ ಪಂದ್ಯದಲ್ಲಿ ಅವರು ಒಂದು ವಿಕೆಟ್ ಕೂಡ ಪಡೆಯುವಲ್ಲಿ ವಿಫಲರಾಗಿದ್ದರು.

Story first published: Sunday, July 18, 2021, 19:50 [IST]
Other articles published on Jul 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X