ಭಾರತ vs ಶ್ರೀಲಂಕಾ: 2ನೇ ಟಿ20 ಪಂದ್ಯಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ

ಕೊಲಂಬೋ, ಜುಲೈ 26: ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಮಂಗಳವಾರ ನಡೆಯಲಿದೆ. ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ಎರಡನೇ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಸರಣಿ ವಶಕ್ಕೆ ಪಡೆಯುವ ಉತ್ಸಾಹದಲ್ಲಿದೆ. ಆತಿಥೇಯ ಶ್ರೀಲಂಕಾ ಚುಟುಕು ಸರಣಿಯನ್ನಾದರೂ ತನ್ನ ವಶಕ್ಕೆ ಪಡೆಯಬೇಕಾದರೆ ಮಂಗಳವಾರದ ಪಂದ್ಯದಲ್ಲಿ ಗೆಲುವು ಸಾಧಿಸಲೇ ಬೇಕಿದೆ.

ಆತಿಥೇಯ ಶ್ರೀಲಂಕಾ ಪಾಲಿಗೆ ನಿರ್ಣಾಯಕವಾಗಿರುವ ಟಿ20 ಸರಣಿಯ ಎರಡನೇ ಪಂದ್ಯದ ಆರಂಭಕ್ಕೂ ಮುನ್ನ ಗಾಯದ ಸುಳಿಯಲ್ಲಿ ಸಿಲುಕಿಕೊಂಡಿದೆ. ಶ್ರೀಲಂಕಾ ತಂಡದ ಮೂವರು ಪ್ರಮುಖ ಆಟಗಾರರು ಗಾಯಗೊಂಡಿದ್ದು ಎರಡನೇ ಟಿ20 ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆಯಿದೆ. ಈ ಮೂಲಕ ಸೋಲಿನ ಆಘಾತದ ನಂತರ ಗಾಯದ ಆತಂಕ ಶ್ರೀಲಂಕಾ ಪಾಲಿಗೆ ಮತ್ತಷ್ಟು ಕಂಗೆಡಿಸಿದೆ.

ಆತ ಕೋಚ್ ಮಾಡಿದ ತಂಡವೆಲ್ಲಾ ಅವನತಿಯತ್ತ ಸಾಗುತ್ತಿದೆ: ಲಂಕಾ ಕೋಚ್‌ಗೆ ಕನೇರಿಯಾ ಚಾಟಿಆತ ಕೋಚ್ ಮಾಡಿದ ತಂಡವೆಲ್ಲಾ ಅವನತಿಯತ್ತ ಸಾಗುತ್ತಿದೆ: ಲಂಕಾ ಕೋಚ್‌ಗೆ ಕನೇರಿಯಾ ಚಾಟಿ

ಭಾನುಕಾ ರಾಜಪಕ್ಸ

ಭಾನುಕಾ ರಾಜಪಕ್ಸ

ಭಾರತದ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ 65 ರನ್ ಗಳಿಸಿ ಲಂಕಾ ಗೆಲುವಿಗೆ ಕಾರಣವಾಗಿದ್ದ ಭಾನುಕಾ ರಾಜಪಕ್ಸ ಅದೇ ಪಂದ್ಯದಲ್ಲಿ ಗಾಯಗೊಂಡಿದ್ದರು. ಹಾರ್ದಿಕ್ ಪಾಂಡ್ಯ ಎಸೆದ ಚೆಂಡು ರಾಜಪಕ್ಸ ಬೆರಳಿಗೆ ತಾಗಿದ್ದು ಈ ಕಾರಣದಿಂದಾಗಿ ರಾಜಪಕ್ಸ ಸಂಪೂರ್ಣ ಸರಣಿಯಿಂದ ಹೊರಬಿದ್ದಿದ್ದಾರೆ. ಸ್ಲ್ಯಾನಿಂಗ್‌ನಲ್ಲಿ ಭಾನುಕಾ ಬೆರಳಿಗೆ ತೀವ್ರ ಏಟಾಗಿರುವುದು ಗೊತ್ತಾಗಿದೆ. ಮೊದಲ ಟಿ20 ಪಂದ್ಯದಲ್ಲಿ ಕೂಡ ಭಾನುಕಾ ರಾಜಪಕ್ಸ ಆಡಲು ಇಳಿದಿರಲಿಲ್ಲ.

ಯುವ ಆಟಗಾರ ಚರಿತ ಅಲಸಂಕ

ಯುವ ಆಟಗಾರ ಚರಿತ ಅಲಸಂಕ

24ರ ಹರೆಯದ ಚರಿತ ಅಲಸಂಕ ಶ್ರೀಲಂಕಾ ಪಾಲಿಗೆ ಈ ಸರಣಿಯಲ್ಲಿ ಸಿಕ್ಕ ಪ್ರತಿಭಾವಂತ ಕ್ರಿಕೆಟಿಗ. ಆದರೆ ಮೊದಲ ಟಿ20 ಪಂದ್ಯದ ವೇಳೆ ಮಂಡಿರಜ್ಜು ಗಾಯದಿಂದ ಬಳಲಿದ ಚರಿತ ಅಲಸಂಕ ಭಾರತದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲು ಆಡಲಿಳಿಯುವುದು ಅನುಮಾನವಾಗಿದೆ. ಮೊದಲ ಟಿ20 ಪಂದ್ಯದಲ್ಲಿ 44 ರನ್ ಬಾರಿಸಿ ಲಂಕಾ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಏಕದಿನ ಸರಣಿಯಲ್ಲಿ ಲಂಕಾ ಪರವಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

ಯಡಿಯೂರಪ್ಪನವರ ಪಾತ್ರವೇ ಇಲ್ಲ ಅಂದ್ಮೇಲೆ ಅವರ ಮಕ್ಕಳ ಪಾತ್ರ ಎಲ್ಲಿರುತ್ತೆ? | Oneindia Kannada
ನೆಟ್ ಅಭ್ಯಾಸದಲ್ಲಿ ಗಾಯಗೊಂಡ ಪತುಮ್ ನಿಸ್ಸಂಕ

ನೆಟ್ ಅಭ್ಯಾಸದಲ್ಲಿ ಗಾಯಗೊಂಡ ಪತುಮ್ ನಿಸ್ಸಂಕ

ಇನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಮತ್ತೋರ್ವ ಬ್ಯಾಟ್ಸ್‌ಮನ್ ಪತುಮ್ ನಿಸ್ಸಂಕ ಕೂಡ ನೆಟ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಕೈಗೆ ಚೆಂಡು ಬಡಿದಿದ್ದು ಅವರ ಸ್ಕ್ಯಾನ್ ವರದಿಗಾಗಿ ತಂಡ ಕಾಯುತ್ತಿದೆ. ಮಂಗಳವಾರ ಭಾರತದ ವಿರುದ್ಧದ ಪಂದ್ಯದಲ್ಲಿ ಇವರು ಕೂಡ ಕಣಕ್ಕಿಳಿಯುವುವುದು ಅನುಮಾನವಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Monday, July 26, 2021, 22:11 [IST]
Other articles published on Jul 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X