ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧದ ಸರಣಿಯಿಂದಲೇ ಹೊರಗುಳಿಯುವ ಆತಂಕದಲ್ಲಿ ಸಂಜು ಸ್ಯಾಮ್ಸನ್

India vs Sri lanka: Sanju Samson misses first match, he could be ruled out from full series

ಕೊಲೊಂಬೋ ಜುಲೈ 18: ಭಾರತ ಹಾಗೂ ಶ್ರೀಲಂಕಾ ತಂಡಗಳು ಮೊದಲ ಏಕದಿನ ಪಂದ್ಯದಲ್ಲಿ ಭಾನುವಾರ ಕಣಕ್ಕಿಳಿದಿದೆ. ಈ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಇಬ್ಬರು ಆಟಗಾರರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಹಾಗೂ ವಿಕೆಟ್ ಕೀಪರ್ ಇಶಾನ್ ಕಿಶನ್ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಕಣಕ್ಕಿಳಿದಿದ್ದಾರೆ. ಈ ಮಧ್ಯೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಮತ್ತೋರ್ವ ಸ್ಪರ್ಧಿಯಾಗಿದ್ದ ಸಂಜು ಸ್ಯಾಮ್ಸನ್ ತಂಡದಿಂದ ಹೊರಗುಳಿದಿದ್ದು ಇದಕ್ಕೆ ಅವರು ಗಾಯಗೊಂಡಿರುವುದು ಕಾರಣ ಎಂದು ತಿಳಿದುಬಂದಿದೆ.

ಸಂಜು ಸ್ಯಾಮ್ಸನ್ ಅಭ್ಯಾಸದ ಸಂದರ್ಭದಲ್ಲಿ ಮೊಣಕಾಲು ಮಂಡಿರಜ್ಜು ಗಾಯಕ್ಕೊಳಗಾಗಿದ್ದಾರೆ. ಹೀಗಾಗಿ ಅವರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಈಗ ಅವರು ಇಡೀ ಏಕದಿನ ಸರಣಿಯಿಂದಲೇ ಹೊರಗುಳಿಯುವ ಆತಂಕ ಉಂಟಾಗಿದೆ. ಸಂಜು ಸ್ಯಾಮ್ಸನ್ ಅವರ ಗಾಯದ ಬಗ್ಗೆ ವೈದ್ಯಕೀಯ ತಂಡ ನಿಗಾ ವಹಿಸಿದೆ.

ಭಾರತ vs ಶ್ರೀಲಂಕಾ: ಮೊದಲ ಏಕದಿನ ಪಂದ್ಯ, Live ಸ್ಕೋರ್ ಭಾರತ vs ಶ್ರೀಲಂಕಾ: ಮೊದಲ ಏಕದಿನ ಪಂದ್ಯ, Live ಸ್ಕೋರ್

ಸಂಜು ಸ್ಯಾಮ್ಸನ್ ಅವರ ಬಿಸಿಸಿಐನ ಮಾಧ್ಯಮ ತಂಡ ಮಾಹಿತಿಯನ್ನು ನೀಡಿದ್ದಾರೆ "ಸಂಜು ಸ್ಯಾಮ್ಸನ್ ಮೊಣಕಾಲಿನ ಮಂಡಿರಜ್ಜು ಉಳಿಕಿಗೆ ಒಳಗಾಗಿದ್ದಾರೆ. ಹೀಗಾಗಿ ಅವರು ಮೊದಲ ಪಂದ್ಯದ ಆಯ್ಕೆಗೆ ಲಭ್ಯವಿರಲಿಲ್ಲ. ವೈದ್ಯಕೀಯ ತಂಡ ಅವರ ಚೇತರಿಕೆಯತ್ತ ನಿಗಾವಹಿಸಿದೆ" ಎಂದು ಮಾಹಿತಿ ನೀಡಿದ್ದಾರೆ.

ಶ್ರೀಲಂಕಾ ವಿರುದ್ಧದ ಭಾರತ ತಂಡ ಏಕದಿನ ಹಾಗೂ ಟಿ20 ಪಂದ್ಯಗಳನ್ನು ಆಡಲಿದೆ. ಒಟ್ಟು ಆರು ಪಂದ್ಯಗಳ ಸರಣಿ ಇದಾಗಿದ್ದು ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದೆ.

ಬರ್ತ್‌ ಡೇ ಗರ್ಲ್ ಸ್ಮೃತಿ ಮಂಧಾನರ 3 ಅಪರೂಪದ ದಾಖಲೆಗಳಿವು!ಬರ್ತ್‌ ಡೇ ಗರ್ಲ್ ಸ್ಮೃತಿ ಮಂಧಾನರ 3 ಅಪರೂಪದ ದಾಖಲೆಗಳಿವು!

Prithvi Shaw ಔಟ್ ಆಗಿದ್ದೇಕೆ ಖುದ್ದು ಅವರೇ ನೀಡಿದ ಕಾರಣ | Oneindia Kannada

ಇನ್ನು ಭಾರತದ ಪ್ರಮುಖ ಆಟಗಾರರ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡಲು ತೆರಳಿರುವ ಸಂದರ್ಭದಲ್ಲಿಯೇ ಏಕದಿನ ಸ್ಪೆಶಲಿಸ್ಟ್‌ಗಳನ್ನು ಒಳಗೊಂಡ ತಂಡವನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಕಳುಹಿಸುವ ನಿರ್ಧಾರವನ್ನು ಬಿಸಿಸಿಐ ಮಾಡಿತು. ಶಿಖರ್ ಧವನ್ ನೇತೃತ್ವದ ಈ ತಂಡದಲ್ಲಿ ಬಹುತೇಕ ಯುವ ಆಟಗಾರರು ತುಂಬಿದ್ದಾರೆ. ರಾಹುಲ್ ದ್ರಾವಿಡ್ ಈ ತಂಡಕ್ಕೆ ಕೋಚ್ ಆಗಿ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.

Story first published: Monday, July 19, 2021, 21:10 [IST]
Other articles published on Jul 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X