ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ಶಿಖರ್ ಧವನ್ ಸರಣಿಯಿಂದಲೇ ಔಟ್?!; ಈ ಆಟಗಾರ ಆಗ್ತಾರಾ ನಾಯಕ?

India vs Sri Lanka: Shikhar Dhawan may be unavailable for the remaining matches of t20 series

ಇತ್ತೀಚೆಗೆ ಹರಿದಾಡುತ್ತಿರುವ ವಿದ್ಯಮಾನಗಳ ಪ್ರಕಾರ ಭಾರತ ತಂಡದ ನಾಯಕ ಸೇರಿದಂತೆ ಪ್ರಮುಖ 9 ಆಟಗಾರರು ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯ ಉಳಿದ 2 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗುತ್ತಿದೆ.

ಭಾರತ vs ಶ್ರೀಲಂಕಾ ಎರಡನೇ ಟಿ ಟ್ವೆಂಟಿ ನಡೆಯುತ್ತಾ? ಈ 9 ಭಾರತೀಯ ಆಟಗಾರರು ಟೂರ್ನಿಯಿಂದಲೇ ಔಟ್!ಭಾರತ vs ಶ್ರೀಲಂಕಾ ಎರಡನೇ ಟಿ ಟ್ವೆಂಟಿ ನಡೆಯುತ್ತಾ? ಈ 9 ಭಾರತೀಯ ಆಟಗಾರರು ಟೂರ್ನಿಯಿಂದಲೇ ಔಟ್!

3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಈಗಾಗಲೇ ಭಾನುವಾರ ಮೊದಲನೇ ಪಂದ್ಯ ನಡೆದಿದ್ದು ಅದರಲ್ಲಿ ಭಾರತ ಶ್ರೀಲಂಕಾ ವಿರುದ್ಧ 38 ರನ್‌ಗಳ ಗೆಲುವನ್ನು ಸಾಧಿಸಿದೆ. ಮಂಗಳವಾರದಂದು ಎರಡನೇ ಟಿ ಟ್ವೆಂಟಿ ಪಂದ್ಯ ನಡೆಯಬೇಕಿತ್ತು ಆದರೆ ಪಂದ್ಯ ಆರಂಭವಾಗುವ ಮುನ್ನವೇ ಭಾರತ ತಂಡದ ಕೃನಾಲ್ ಪಾಂಡ್ಯ ಕೊರೊನಾ ಸೋಂಕಿಗೆ ಒಳಗಾಗಿರುವ ಅಂಶ ಬೆಳಕಿಗೆ ಬಂತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಭಾರತ ಮತ್ತು ಲಂಕಾ ನಡುವಿನ ಎರಡನೇ ಟ್ವೆಂಟಿ ಪಂದ್ಯವನ್ನು ರದ್ದುಗೊಳಿಸಲಾಯಿತು.

ಟೋಕಿಯೋ ಒಲಿಂಪಿಕ್ಸ್: ಪಿ ವಿ ಸಿಂಧುಗೆ ಮತ್ತೊಂದು ಗೆಲುವುಟೋಕಿಯೋ ಒಲಿಂಪಿಕ್ಸ್: ಪಿ ವಿ ಸಿಂಧುಗೆ ಮತ್ತೊಂದು ಗೆಲುವು

ಹೀಗೆ ರದ್ದುಗೊಳಿಸಿದ ಎರಡನೇ ಟಿ ಟ್ವೆಂಟಿ ಪಂದ್ಯವನ್ನು ಬುಧವಾರ ನಡೆಸಬೇಕೆಂದು ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ. ಆದರೆ ಇತ್ತ ಭಾರತದ 8 ಪ್ರಮುಖ ಆಟಗಾರರು ಕೃನಾಲ್ ಪಾಂಡ್ಯಾ ಸಂಪರ್ಕದಲ್ಲಿದ್ದ ಕಾರಣ ಕೃನಾಲ್ ಜೊತೆ ಅವರೂ ಸಹ ಸರಣಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಸರಣಿಯಿಂದ ಹೊರಗುಳಿಯುವ ಆಟಗಾರರ ಪೈಕಿ ತಂಡದ ನಾಯಕ ಶಿಖರ್ ಧವನ್ ಕೂಡ ಇದ್ದಾರೆ ಎನ್ನಲಾಗುತ್ತಿದ್ದು, ಒಂದು ವೇಳೆ ಶಿಖರ್ ಧವನ್ ಸರಣಿಯಿಂದ ಹೊರಗುಳಿದರೆ ಪರ್ಯಾಯ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಇದೀಗ ಮೂಡಿದೆ. ಸದ್ಯ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯ ಕುರಿತು ಈ ಕೆಳಕಂಡ ಅಂಶಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಗೀಡಾಗಿವೆ.

ಸರಣಿಯಿಂದ ಹೊರಗುಳಿಯುವ 9 ಆಟಗಾರರು ಯಾರು?

ಸರಣಿಯಿಂದ ಹೊರಗುಳಿಯುವ 9 ಆಟಗಾರರು ಯಾರು?

ಕೃನಾಲ್ ಪಾಂಡ್ಯಗೆ ಕೊರೋನಾ ಸೋಂಕು ಪಾಸಿಟಿವ್ ವರದಿ ಬಂದ ನಂತರ ಆತನ ಸಂಪರ್ಕದಲ್ಲಿದ್ದ ಇತರ 8 ಆಟಗಾರರಿಗೂ ಕೊರೋನಾ ಪರೀಕ್ಷೆ ನಡೆಸಲಾಯಿತು ಮತ್ತು ಎಲ್ಲರಿಗೂ ವರದಿ ನೆಗೆಟಿವ್ ಬಂದಿದೆ. ಆದರೂ ಸಹ ಈ 9 ಆಟಗಾರರಿಗೆ ಲಂಕಾ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡುವುದಿಲ್ಲ ಎನ್ನಲಾಗುತ್ತಿದೆ. ಹೀಗೆ ಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿರುವ 9 ಆಟಗಾರರೆಂದರೆ: ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಾಹಲ್, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ, ಕೃಷ್ಣಪ್ಪ ಗೌತಮ್, ಇಶಾನ್ ಕಿಶನ್ ಹಾಗೂ ಇನ್ನೋರ್ವ ಆಟಗಾರ ಎಂದು ಹೇಳಲಾಗುತ್ತಿದೆ.

ಧವನ್ ಸರಣಿಯಿಂದ ಹೊರ ಬಿದ್ದರೆ ಪರ್ಯಾಯ ನಾಯಕ ಯಾರು?

ಧವನ್ ಸರಣಿಯಿಂದ ಹೊರ ಬಿದ್ದರೆ ಪರ್ಯಾಯ ನಾಯಕ ಯಾರು?

ಕೃನಾಲ್ ಪಾಂಡ್ಯ ಸಂಪರ್ಕದಲ್ಲಿ ನಾಯಕ ಶಿಖರ್ ಧವನ್ ಕೂಡ ಇದ್ದರು ಎಂದು ಹೇಳಲಾಗುತ್ತಿದ್ದು, ಸರಣಿಯಿಂದ ಹೊರಗುಳಿಯುವ ಆಟಗಾರರಲ್ಲಿ ಅವರು ಕೂಡ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಒಂದುವೇಳೆ ಶಿಖರ್ ಧವನ್ ಸರಣಿಯಿಂದ ಹೊರ ಬಿದ್ದರೆ ತಂಡದ ಅನುಭವಿ ಆಟಗಾರರಾದ ಭುವನೇಶ್ವರ್ ಕುಮಾರ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಬೀಳಬಹುದು.

ಭಾರತ ತಂಡದ ಪ್ರಮುಖ ಆಟಗಾರರು ಎರಡನೇ ಪಂದ್ಯದಿಂದ ಆಚೆ | Oneindia Kannada
ತಂಡಕ್ಕೆ ಬ್ಯಾಟಿಂಗ್ ಸಮಸ್ಯೆ ಕಾಡಬಹುದು

ತಂಡಕ್ಕೆ ಬ್ಯಾಟಿಂಗ್ ಸಮಸ್ಯೆ ಕಾಡಬಹುದು

ಸದ್ಯ ತಂಡದಿಂದ ಹೊರ ಬೀಳಲಿದ್ದಾರೆ ಎನ್ನಲಾಗುತ್ತಿರುವ ಆಟಗಾರರ ಪಟ್ಟಿಯನ್ನು ನೋಡಿದರೆ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಅಲಭ್ಯರಾಗಲಿದ್ದಾರೆ ಎಂಬುದು ನಿಖರವಾಗಿ ತಿಳಿಯುತ್ತಿದೆ. ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಶಿಖರ್ ಧವನ್ ಹಾಗೂ ಇಶಾನ್ ಕಿಶನ್ ರೀತಿಯ ಬ್ಯಾಟ್ಸ್‌ಮನ್‌ಗಳೇ ಅಲಭ್ಯರಾಗಲಿದ್ದಾರೆ ಎನ್ನಲಾಗುತ್ತಿದ್ದು ಒಂದು ವೇಳೆ ಈ ಆಟಗಾರರಿಲ್ಲದೆ ಸರಣಿಯನ್ನು ಆಡಿದರೆ ಬ್ಯಾಟಿಂಗ್ ಸಮಸ್ಯೆ ಖಂಡಿತವಾಗಿಯೂ ತಲೆದೋರಲಿದೆ.

Story first published: Wednesday, July 28, 2021, 15:21 [IST]
Other articles published on Jul 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X