ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ಟಿ20 ಸಿರೀಸ್, ಯಾವಾಗ? ಎಲ್ಲಿ? ನೇರಪ್ರಸಾರದ ಮಾಹಿತಿ

India vs Sri lanka, t20 series: Time table and Live details

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಏಕದಿನ ಸರಣಿ ಸಂಪೂರ್ಣವಾಗಿದ್ದು ಈಗ ಎರಡು ತಂಡಗಳ ಚಿತ್ತ ಟಿ20 ಸರಣಿಯ ಮೇಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಿಂದ ಗೆಲುವು ಸಾಧಿಸಿದೆ. ಈಗ ಮೂರು ಪಂದ್ಯಗಳ ಟಿ20 ಸರಣಿಗೆ ಎರಡು ತಂಡಗಳು ಕೂಡ ಸಿದ್ಧತೆ ನಡೆಸುತ್ತಿವೆ. ಭಾನುವಾರ ಈ ಸರಣಿಯ ಮೊದಲ ಪಂದ್ಯ ನಡೆಯಲಿದೆ.

ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿತ್ತು. ಟಿ20 ಸರಣಿಯು ಕೂಡ ಇದೇ ಅಂಗಳದಲ್ಲಿ ನಡೆಯಲಿದೆ. ಕೊರೊನಾವೈರಸ್‌ನ ಕಾರಣದಿಂದಾಗಿ ಮುಂಜಾಗೃತಾ ಕ್ರಮವಾಗಿ ಒಂದೇ ಕ್ರೀಡಾಂಗಣದಲ್ಲಿ ಸಂಪೂರ್ಣ ಸರಣಿಯನ್ನು ಏರ್ಪಡಿಸಲಾಗಿದೆ.

ಟೋಕಿಯೋ ಒಲಂಪಿಕ್ಸ್: ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಮೀರಾಬಾಯಿ ಚಾನುಟೋಕಿಯೋ ಒಲಂಪಿಕ್ಸ್: ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಮೀರಾಬಾಯಿ ಚಾನು

ಏಕದಿನ ಸರಣಿಯಲ್ಲಿ ಭಾರತ ಬಹುತೇಕ ಎಲ್ಲಾ ವಿಭಾಗಗಳಲ್ಲಿಯೂ ಮೇಲುಗೈ ಸಾಧಿಸಿದೆ. ಶ್ರೀಲಂಕಾ ತನ್ನ ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿರುವ ಹೊರತಾಗಿಯೂ ಭಾರತದ ಯುವ ಆಟಗಾರರ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ.

ಮತ್ತೊಂದೆಡೆ ಈ ಬಾರಿಯ ಟಿ20 ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಮಹತ್ವದ ಟೂರ್ನಿಯಲ್ಲಿ ಭಾಗವಹಿಸುವ ಮುನ್ನ ಆತ್ಮವಿಶ್ವಾಸವನ್ನು ಗಳಿಸಬೇಕಾದರೆ ಶ್ರೀಲಂಕಾ ತಂಡಕ್ಕೆ ಚುಟುಕು ಸರಣಿಯಲ್ಲಾದರೂ ಗೆಲುವು ಅನಿವಾರ್ಯವಾಗಿದೆ. ಭಾರತದ ಯುವ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಿದ ಅನುಭವವನ್ನು ಲಂಕಾ ಸರಣಿಯಲ್ಲಿ ಬಳಸಿಕೊಳ್ಳಲು ಉತ್ತಮ ಅವಕಾಶ ದೊರೆತಿದೆ.

ವೇಳಾಪಟ್ಟಿ:
1ನೇ ಟಿ20 ಪಂದ್ಯ - ಜುಲೈ 25, 8:00 PM, ಕೊಲಂಬೊ
2ನೇ ಟಿ 20 ಪಂದ್ಯ - ಜುಲೈ 27, 8:00 PM, ಕೊಲಂಬೊ
3ನೇ ಟಿ 20 ಪಂದ್ಯ - ಜುಲೈ 29, 8:00 PM, ಕೊಲಂಬೊ

ನೇರಪ್ರಸಾರ:

Suryakumar Yadav ಈ ಸರಣಿಯ ಶ್ರೇಷ್ಠ ಆಟಗಾರ | Oneindia Kannada

ಸೋನಿ ನೆಟ್‌ವರ್ಕ್
ಲೈವ್‌ಸ್ಟ್ರೀಮ್: ಸೋನಿ ಲಿವ್

Story first published: Saturday, July 24, 2021, 16:50 [IST]
Other articles published on Jul 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X