ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್‌ ಬೇಕು!

India vs Sri Lanka: Virat Kohli one run away from massive T20I world record

ಗುವಾಹಟಿ, ಜನವರಿ 4: ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಶ್ವದಾಖಲೆ ನಿರ್ಮಿಸಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕೇವಲ 1 ರನ್ ಬೇಕಿದೆ. ಭಾನುವಾರ (ಜನವರಿ 5) ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಶ್ರೀಲಂಕಾ-ಭಾರತ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ ನಿರ್ಮಿಸಲಿದ್ದಾರೆ.

ಕೊಹ್ಲಿ ಕಂಡರೆ ಲಂಕಾಗೆ ನಡುಕ; 12 ವರ್ಷದಲ್ಲಿ ಗೆದ್ದಿಲ್ಲ ಒಂದೇ ಒಂದು ಸರಣಿ!ಕೊಹ್ಲಿ ಕಂಡರೆ ಲಂಕಾಗೆ ನಡುಕ; 12 ವರ್ಷದಲ್ಲಿ ಗೆದ್ದಿಲ್ಲ ಒಂದೇ ಒಂದು ಸರಣಿ!

ಶ್ರೀಲಂಕಾ ವಿರುದ್ಧದ ಟಿ20ಯಲ್ಲಿ ಕೊಹ್ಲಿ ಬರೀ 1 ರನ್‌ ಗಳಿಸಿದರೂ ಟಿ20ಐನಲ್ಲಿ ಅತ್ಯಧಿಕ ರನ್‌ ಗಳಿಸಿದ ವಿಶ್ವ ದಾಖಲೆ ಕೊಹ್ಲಿ ಪಾಲಾಗಲಿದೆ. ಸದ್ಯ ಈ ದಾಖಲೆ ಭಾರತದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಭಾರತ-ಶ್ರೀಲಂಕಾ ಮೊದಲ ಪಂದ್ಯ 7 pmಗೆ ಆರಂಭಗೊಳ್ಳಲಿದೆ.

ಭಾರತ vs ಶ್ರೀಲಂಕಾ, 1ನೇ ಟಿ20ಐ ಪಂದ್ಯ, Live ಸ್ಕೋರ್‌ಕಾರ್ಡ್

1
46127

ಭಾರತಕ್ಕೆ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಕ್ರಿಕೆಟ್‌ ತಂಡ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿ ಮುಗಿಯುವ ವೇಳೆ ಕೊಹ್ಲಿ ಟಿ20 ಅತೀ ಹೆಚ್ಚಿನ ರನ್‌ಗಾಗಿ ವಿಶ್ವದಲ್ಲೇ ನಂ.1 ಸ್ಥಾನ ಆವರಿಸಿಕೊಳ್ಳಲಿದ್ದಾರೆ.

ಕೊಹ್ಲಿ-ರೋಹಿತ್ ಸದ್ಯ ಟಾಪರ್

ಕೊಹ್ಲಿ-ರೋಹಿತ್ ಸದ್ಯ ಟಾಪರ್

ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ರನ್‌ ವಿಶ್ವದಾಖಲೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೆಸರಿನಲ್ಲಿದೆ. ಗಮ್ಮತ್ತೆಂದರೆ ಇಬ್ಬರೂ ಈಗ 2,633 ರನ್‌ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೊಹ್ಲಿ ರನ್‌ ಹೆಚ್ಚಿಸಿಕೊಂಡಿದ್ದರು.

ವಿಶ್ರಾಂತಿಯಲ್ಲಿ ಹಿಟ್‌ಮ್ಯಾನ್

ವಿಶ್ರಾಂತಿಯಲ್ಲಿ ಹಿಟ್‌ಮ್ಯಾನ್

ಹಿಟ್‌ಮ್ಯಾನ್ ರೋಹಿತ್ ಶರ್ಮಾ, ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿಲ್ಲ. 3 ಪಂದ್ಯಗಳ ಈ ಸರಣಿಯ ವೇಳೆ ಶರ್ಮಾ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಕೊಹ್ಲಿಗೆ ರೋಹಿತ್ ಹಿಂದಿಕ್ಕಲು ಸುವರ್ಣಾವಕಾಶವಿದೆ. ಅದೇ ರೋಹಿತ್ ಕೂಡ ಸರಣಿಯಲ್ಲಿ ಆಡುತ್ತಿದ್ದರೆ ಇಬ್ಬರ ನಡುವಿನ ರನ್‌ ಪೈಪೋಟಿ ಇನ್ನೂ ಕುತೂಹಲಕಾರಿ ಎನಿಸುತ್ತಿತ್ತು.

ಭಾರತ-ಲಂಕಾ ಟಿ20 ಮುಖಾಮುಖಿ

ಭಾರತ-ಲಂಕಾ ಟಿ20 ಮುಖಾಮುಖಿ

ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಸೋತಿದ್ದೇ ಇಲ್ಲ. ಈವರೆಗೆ ಒಟ್ಟು 9 ಟಿ20 ಪಂದ್ಯಗಳಲ್ಲಿ ಶ್ರೀಲಂಕಾ-ಭಾರತ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 5 (3 ಭಾರತದಲ್ಲಿ, 2 ಶ್ರೀಲಂಕಾದಲ್ಲಿ) ಪಂದ್ಯಗಳಲ್ಲಿ, ಶ್ರೀಲಂಕಾ 4 (2 ಭಾರತದಲ್ಲಿ, 2 ವಿದೇಶದಲ್ಲಿ) ಪಂದ್ಯಗಳಲ್ಲಿ ಗೆಲುವುಗಳನ್ನು ಕಂಡಿದೆ.

ಕೊಹ್ಲಿ-ರೋಹಿತ್ ಟಿ20 ಅಂಕಿ-ಅಂಶಗಳು

ಕೊಹ್ಲಿ-ರೋಹಿತ್ ಟಿ20 ಅಂಕಿ-ಅಂಶಗಳು

ಕೊಹ್ಲಿ 70 ಟಿ20ಐ ಇನ್ನಿಂಗ್ಸ್‌ಗಳಲ್ಲಿ 52.66ರ ಸರಾಸರಿಯಂತೆ 2633 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 24 ಅರ್ಧ ಶತಕಗಳು ಸೇರಿವೆ. ಆದರೆ ಕೊಹ್ಲಿ ಟಿ20 ಶತಕ ಬಾರಿಸಿಲ್ಲ. ರೋಹಿತ್ ಶರ್ಮಾ 96 ಟಿ20ಐ ಇನ್ನಿಂಗ್ಸ್‌ಗಳಲ್ಲಿ 32.11ರ ಸರಾಸರಿಯಲ್ಲಿ 2633 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ, 19 ಅರ್ಧ ಶತಕಗಳು ಸೇರಿವೆ.

Story first published: Saturday, January 4, 2020, 13:01 [IST]
Other articles published on Jan 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X