ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ ಎರಡನೇ ಟಿ ಟ್ವೆಂಟಿ ನಡೆಯುತ್ತಾ? ಈ 9 ಭಾರತೀಯ ಆಟಗಾರರು ಟೂರ್ನಿಯಿಂದಲೇ ಔಟ್!

India vs Sri Lanka: Will the 2nd T20 take place? 9 Indian players ruled out of full series

ಶಿಖರ್ ಧವನ್ ನೇತೃತ್ವದ ಯುವ ಆಟಗಾರರನ್ನೊಳಗೊಂಡ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದೆ. ಹಲವಾರು ಟೀಕೆಗಳ ನಡುವೆ ಶ್ರೀಲಂಕಾ ಪ್ರವಾಸವನ್ನು ಕೈಗೊಂಡ ಈ ಯುವ ಆಟಗಾರರಿಂದ ಕೂಡಿದ ಟೀಮ್ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಜಯ ಗಳಿಸುವುದರ ಮೂಲಕ ಎಲ್ಲಾ ಟೀಕೆಗಳಿಗೂ ಉತ್ತರ ನೀಡಿತು.

'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ

ಹೀಗೆ ಲಂಕಾ ವಿರುದ್ಧದ ಏಕದಿನ ಸರಣಿಯನ್ನು ಶ್ರೀಲಂಕಾ ನೆಲದಲ್ಲಿಯೇ ಕೈವಶ ಮಾಡಿಕೊಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಟೀಮ್ ಇಂಡಿಯಾ ಲಂಕಾ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ವಶಪಡಿಸಿಕೊಳ್ಳುವ ತವಕದಲ್ಲಿತ್ತು. ಹೀಗೆ ಭಾನುವಾರ ನಡೆದ ಮೊದಲನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 38 ರನ್‌ಗಳ ಜಯ ಸಾಧಿಸುವುದರ ಮೂಲಕ ಟಿ ಟ್ವೆಂಟಿ ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿತ್ತು.

ಟೋಕಿಯೋ ಒಲಿಂಪಿಕ್ಸ್: ಪಿ ವಿ ಸಿಂಧುಗೆ ಮತ್ತೊಂದು ಗೆಲುವುಟೋಕಿಯೋ ಒಲಿಂಪಿಕ್ಸ್: ಪಿ ವಿ ಸಿಂಧುಗೆ ಮತ್ತೊಂದು ಗೆಲುವು

ಹಾಗೂ ಮಂಗಳವಾರ ಎರಡನೇ ಟಿ ಟ್ವೆಂಟಿಯನ್ನು ಆಯೋಜಿಸಲಾಗಿತ್ತು. ಆದರೆ ಪಂದ್ಯಕ್ಕೂ ಮುನ್ನವೇ ಭಾರತ ತಂಡದ ಆಟಗಾರ ಕೃನಾಲ್ ಪಾಂಡ್ಯಗೆ ಕೊರೊನಾ ವೈರಸ್ ಸೋಂಕು ತಗುಲಿದ ಕಾರಣ ಪಂದ್ಯವನ್ನು ಮುಂದೂಡಲಾಯಿತು. ಕೃನಾಲ್ ಪಾಂಡ್ಯಗೆ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಕೃನಾಲ್ ಸಂಪರ್ಕವನ್ನು ಹೊಂದಿದ್ದ 8 ಆಟಗಾರರನ್ನು ಐಸೋಲೇಷನ್‌ಗೆ ಒಳಪಡಿಸಲಾಗಿದೆ. ಇಷ್ಟೆಲ್ಲ ವಿದ್ಯಾಮಾನಗಳ ನಡುವೆ ಇದೀಗ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ ಟ್ವೆಂಟಿ ಪಂದ್ಯ ನಡೆಯುತ್ತಾ ಎಂಬ ಅನುಮಾನ ಎದ್ದಿದ್ದು ಈ ಕೆಳಕಂಡ ಅಂಶಗಳ ಕುರಿತು ಭಾರೀ ಚರ್ಚೆಯಾಗುತ್ತಿದೆ..

ಎರಡನೇ ಟಿ ಟ್ವೆಂಟಿ ಪಂದ್ಯ ನಡೆಯುತ್ತಾ? ಯಾವಾಗ?

ಎರಡನೇ ಟಿ ಟ್ವೆಂಟಿ ಪಂದ್ಯ ನಡೆಯುತ್ತಾ? ಯಾವಾಗ?

ಮಂಗಳವಾರ ನಡೆಯಬೇಕಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟ್ವೆಂಟಿ ಪಂದ್ಯವನ್ನು ಬುಧವಾರ ರಾತ್ರಿ ನಡೆಸಲಾಗುವುದು ಎಂಬ ಸುದ್ದಿ ಇದೆ. ಹಾಗೂ ಮೂರನೇ ಟಿ ಟ್ವೆಂಟಿ ಪಂದ್ಯವನ್ನು ಗುರುವಾರ ರಾತ್ರಿ ನಡೆಸಲಾಗುವುದು ಎಂಬ ಸುದ್ದಿಯೂ ಹರಿದಾಡುತ್ತಿದೆ. ಹೀಗಾಗಿ ಎರಡು ಮತ್ತು ಮೂರನೇ ಟಿ ಟ್ವೆಂಟಿ ಪಂದ್ಯಗಳ ನಡುವೆ ದಿನದ ಅಂತರ ಇರುವುದಿಲ್ಲ.

ಭಾರತದ 9 ಆಟಗಾರರು ಟೂರ್ನಿಯಿಂದ ಹೊರಕ್ಕೆ!

ಭಾರತದ 9 ಆಟಗಾರರು ಟೂರ್ನಿಯಿಂದ ಹೊರಕ್ಕೆ!

ಇದೀಗ ಹೆಚ್ಚಾಗಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಕೃನಾಲ್ ಪಾಂಡ್ಯ ಸಂಪರ್ಕದಲ್ಲಿದ್ದ 8 ಆಟಗಾರರನ್ನು ಐಸೋಲೇಷನ್ ಮಾಡಿದ್ದರೂ ಸಹ ಅವರಿಗೆ 2 ಮತ್ತು ಮೂರನೇ ಟಿ ಟ್ವೆಂಟಿ ಪಂದ್ಯಗಳನ್ನು ಆಡಲು ಅವಕಾಶ ನೀಡುವುದಿಲ್ಲ ಎನ್ನಲಾಗುತ್ತಿದೆ. ಟೀಮ್ ಇಂಡಿಯಾದ ಆಟಗಾರರಾದ ಶಿಖರ್ ಧವನ್, ಸೂರ್ಯಕುಮಾರ್ ಯಾದವ್, ಕೃಷ್ಣಪ್ಪ ಗೌತಮ್, ಪೃಥ್ವಿ ಶಾ, ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶಾನ್ ಸೇರಿದಂತೆ ಇನ್ನೂ ಕೆಲ ಆಟಗಾರರಿಗೆ ಮುಂದಿನ ಪಂದ್ಯಗಳನ್ನು ಆಡಲು ಅವಕಾಶ ಇಲ್ಲ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕೃನಾಲ್ ಪಾಂಡ್ಯ ಸೇರಿ ಒಟ್ಟು 9 ಭಾರತೀಯ ಕ್ರಿಕೆಟಿಗರು ಟಿ ಟ್ವೆಂಟಿ ಸರಣಿಯಿಂದ ಹೊರ ಉಳಿಯಲಿದ್ದಾರೆ ಎನ್ನಲಾಗ್ತಿದೆ.ಶಿಖರ್ ಧವನ್ ಕೂಡ ಸರಣಿಯಿಂದ ಹೊರ ಬೀಳಲಿದ್ದಾರೆ ಎನ್ನಲಾಗುತ್ತಿದ್ದು ಪರ್ಯಾಯ ನಾಯಕನ ನೇಮಕವಾಗಬಹುದು.

ಕೃನಾಲ್ ಪಾಂಡ್ಯ ಸಂಪರ್ಕದಲ್ಲಿದ್ದ ಎಲ್ಲಾ ಆಟಗಾರರ ಕೊರೊನಾ ರಿಪೋರ್ಟ್ ನೆಗೆಟಿವ್

ಕೃನಾಲ್ ಪಾಂಡ್ಯ ಸಂಪರ್ಕದಲ್ಲಿದ್ದ ಎಲ್ಲಾ ಆಟಗಾರರ ಕೊರೊನಾ ರಿಪೋರ್ಟ್ ನೆಗೆಟಿವ್

ಕೊರೊನಾ ಸೊಂಕು ತಗುಲಿದ್ದ ಕೃನಾಲ್ ಪಾಂಡ್ಯ ಸಂಪರ್ಕದಲ್ಲಿದ್ದ ಭಾರತದ 8 ಆಟಗಾರರ ಕೊರೊನಾಸೋಂಕು ರಿಪೋರ್ಟ್ ನೆಗೆಟಿವ್ ಬಂದಿದೆ. ಈ ಎಲ್ಲ ಆಟಗಾರರ ವರದಿ ನೆಗೆಟಿವ್ ಬಂದಿದ್ದರೂ ಸಹ ಐಸೋಲೇಶನ್‌ನಿಂದ ಮುಕ್ತಿ ಮಾತ್ರ ಸಿಕ್ಕಿಲ್ಲ.

Ind vs SL ಅಂತಿಮ ಟಿ20 ಪಂದ್ಯಗಳಿಗೆ ಲಭ್ಯ ಆಟಗಾರರ ಪಟ್ಟಿ | Oneindia Kannada
20 ಆಟಗಾರರ ತಂಡವಾದ್ದರಿಂದ ಸಮಸ್ಯೆಯಿಲ್ಲ

20 ಆಟಗಾರರ ತಂಡವಾದ್ದರಿಂದ ಸಮಸ್ಯೆಯಿಲ್ಲ

ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಒಟ್ಟು 20 ಆಟಗಾರರಿದ್ದಾರೆ. ಹೀಗಾಗಿ ಕೆಲ ಆಟಗಾರರನ್ನು ಐಸೋಲೇಷನ್ ಮಾಡಿದರೂ ಸಹ ಉಳಿದ ಆಟಗಾರರನ್ನು ಬಳಸಿ ಸರಣಿ ಮುಂದುವರಿಸಬಹುದುಸಮಸ್ಯೆಯಿಲ್ಲ ಎಂಬ ಮಾತುಗಳು ಸಹ ಹರಿದಾಡುತ್ತಿವೆ.

Story first published: Wednesday, July 28, 2021, 13:35 [IST]
Other articles published on Jul 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X