ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

India vs Sri Lanka: ಇಂದೋರ್‌ನಲ್ಲಿ 2ನೇ ಟಿ20 ನಡೆಯುತ್ತಾ, ಇಲ್ವಾ?!

India vs Sri Lanka: will weather play a role in Indore?

ಇಂದೋರ್, ಜನವರಿ 6: ಗುವಾಹಟಿಯಲ್ಲಿ ಜನವರಿ 5ರಂದು ನಡೆಯಬೇಕಿದ್ದ ಭಾರತ vs ಶ್ರೀಲಂಕಾ ಮೊದಲನೇ ಟಿ20 ಪಂದ್ಯ ಮಳೆಯ ಕಾರಣದಿಂದ ರದ್ದಾಗಿತ್ತು. ಟಾಸ್ ಗೆದ್ದಿದ್ದ ಭಾರತ ಬೌಲಿಂಗ್ ಆಯ್ದುಕೊಂಡಿತ್ತಾದರೂ ಆಟ ಆರಂಭಗೊಳ್ಳಲು ಮಳೆ ಅವಕಾಶವೇ ಮಾಡಿಕೊಡಲಿಲ್ಲ.

ಭಾರತ vs ಶ್ರೀಲಂಕಾ 2nd ಟಿ20: ಪಂದ್ಯಕ್ಕೂ ಮುನ್ನ ತಿಳಿಯಲೇಬೇಕಾದ ಪ್ರಮುಖಾಂಶಗಳುಭಾರತ vs ಶ್ರೀಲಂಕಾ 2nd ಟಿ20: ಪಂದ್ಯಕ್ಕೂ ಮುನ್ನ ತಿಳಿಯಲೇಬೇಕಾದ ಪ್ರಮುಖಾಂಶಗಳು

ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿ ಪಡೆಯ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳುವುದರಲ್ಲಿತ್ತು. ಆದರೆ ಆರಂಭಿಕ ಪಂದ್ಯ ಮಳೆಗೆ ಆಹುತಿಯಾಗಿದ್ದರಿಂದ ಇನ್ನೆರಡು ಪಂದ್ಯಗಳು ಬಾಕಿ ಉಳಿದಿವೆ. ದ್ವಿತೀಯ ಪಂದ್ಯ ಮಂಗಳವಾರ (ಜನವರಿ 7) ನಡೆಯಲಿದೆ. ಈ ಪಂದ್ಯ ನಡೆಯುವ ಇಂದೋರ್‌ನಲ್ಲಿ ಹವಾಮಾನ ಹೇಗಿರಲಿದೆ ಗೊತ್ತಾ?

ಭಾರತ vs ಶ್ರೀಲಂಕಾ, 2ನೇ ಟಿ20 ಪಂದ್ಯ, Live ಸ್ಕೋರ್‌ಕಾರ್ಡ್

1
46128

ಹವಾಮಾನ ವರದಿಯ ಪ್ರಕಾರ ಭಾರತ-ಶ್ರೀಲಂಕಾ ದ್ವಿತೀಯ ಟಿ20 ಪಂದ್ಯ ನಡೆಯುವ ಮಂಗಳವಾರದಂದು ಇಂದೋರ್‌ನಲ್ಲಿ ಆಟಕ್ಕೆ ಅನುಕೂಲಕರ ಹವಾಮಾನವಿರಲಿದೆ. ಆ ದಿನವಿಡೀ ಮಬ್ಬು ಬಿಸಿಲಿನ ವಾತಾವರಣ ಇರಲಿದೆ. ತಾಪಮಾನ 26 ಡಿಗ್ರೀ ಸೆಲ್ಶಿಯಸ್‌ನಿಂದ 15 ಡಿಗ್ರೀ ಸೆಲ್ಶಿಯಸ್ ನಡುವೆ ಇರಲಿದೆ.

ಆರು ಬಾಲ್‌ಗೆ ಆರು ಸಿಕ್ಸರ್: ಯುವರಾಜ್ ದಾಖಲೆ ನೆನಪಿಸಿದ ಕೀವಿಸ್ ಕ್ರಿಕೆಟಿಗಆರು ಬಾಲ್‌ಗೆ ಆರು ಸಿಕ್ಸರ್: ಯುವರಾಜ್ ದಾಖಲೆ ನೆನಪಿಸಿದ ಕೀವಿಸ್ ಕ್ರಿಕೆಟಿಗ

ಎಲ್ಲದಕ್ಕಿಂತ ಹೆಚ್ಚಾಗಿ ಮಂಗಳವಾರ ಇಂದೋರ್‌ನಲ್ಲಿ ಮಳೆಯ ಸಾಧ್ಯತೆ 8ರಿಂದ 25 ಶೇ. ಇದೆಯಷ್ಟೇ. ಅಂದರೆ ಆಟಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ತುಂಬಾ ಕಡಿಮೆ. ಇನ್ನೂ ಖುಷಿಯ ಸಂಗತಿಯೆಂದರೆ ಒಟ್ಟಾರೆ ಹವಾಮಾನ ವರದಿಯ ಪ್ರಕಾರ ಜನವರಿ 7ರಂದು ಮಳೆ ನಿರೀಕ್ಷೆಯಿಲ್ಲ. ಪಂದ್ಯ ಎಂದಿನ ಸಮಯ 7 pmಗೆ ಆರಂಭಗೊಳ್ಳಲಿದೆ.

Story first published: Monday, January 6, 2020, 17:58 [IST]
Other articles published on Jan 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X