ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶೇಷ ದಾಖಲೆ ನಿರ್ಮಿಸಲು ಯುಜುವೇಂದ್ರ ಚಾಹಲ್‌ಗೆ 1 ವಿಕೆಟ್ ಬೇಕು!

India vs Sri Lanka: Yuzvendra Chahal 1 wicket away from achieving a unique feat

ಕೊಲಂಬೋ: ಕೊಲಂಬೋದ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ಜುಲೈ 27ರಂದು ಭಾರತ ಮತ್ತು ಶ್ರೀಲಂಕಾ ಮಧ್ಯೆ ದ್ವಿತೀಯ ಟಿ20ಐ ಪಂದ್ಯ ನಡೆಯಲಿದೆ. ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಈಗಾಗಲೇ ಭಾರತ 1-0ಯ ಮುನ್ನಡೆಯಲ್ಲಿದೆ. ದ್ವಿತೀಯ ಪಂದ್ಯದಲ್ಲೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿ ಶಿಖರ್ ಧವನ್ ಪಡೆಯಿದೆ. ಮಂಗಳವಾರ ಪಂದ್ಯ 8 PMಗೆ ಆರಂಭಗೊಳ್ಳಲಿದೆ.

ಕೊಹ್ಲಿ ಅಲ್ಲ ಆ ಭಾರತೀಯ ಕ್ರಿಕೆಟಿಗ ಧೋನಿ ರೀತಿಯ ಚಾಣಾಕ್ಷ ನಾಯಕ ಎಂದ ಕಮ್ರಾನ್ ಅಕ್ಮಲ್ಕೊಹ್ಲಿ ಅಲ್ಲ ಆ ಭಾರತೀಯ ಕ್ರಿಕೆಟಿಗ ಧೋನಿ ರೀತಿಯ ಚಾಣಾಕ್ಷ ನಾಯಕ ಎಂದ ಕಮ್ರಾನ್ ಅಕ್ಮಲ್

ದ್ವಿತೀಯ ಪಂದ್ಯದ ವೇಳೆ ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್‌ಗೆ ವಿಶೇಷ ದಾಖಲೆ ನಿರ್ಮಿಸಲು ಅವಕಾಶವಿದೆ. ಇನ್ನೊಂದೇ ವಿಕೆಟ್ ಪಡೆದರೂ ಸಾಕು; ಚಾಹಲ್ ಹೆಸರಿನಲ್ಲಿ ಅಂತಾರಾಷ್ಟ್ರೀಯ ಟಿ20ಗೆ ಸಂಬಂಧಿಸಿ ಅಪರೂಪದ ದಾಖಲೆ ನಿರ್ಮಣವಾಗಲಿದೆ.

ಶ್ರೀಲಂಕ ವಿರುದ್ಧ ಅತ್ಯಧಿಕ ವಿಕೆಟ್

ಶ್ರೀಲಂಕ ವಿರುದ್ಧ ಅತ್ಯಧಿಕ ವಿಕೆಟ್

ಮಂಗಳವಾರದ ಪಂದ್ಯದಲ್ಲಿ ಯುಜುವೇಂದ್ರ ಚಾಹಲ್‌ಗೆ ಒಂದು ವಿಕೆಟ್ ಲಭಿಸಿದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಶ್ರೀಲಂಕಾ ವಿರುದ್ಧ ಅತೀ ಹೆಚ್ಚು ವಿಕೆಟ್‌ ಪಡೆದವರಲ್ಲಿ ಚಾಹಲ್ ಮೊದಲ ಸ್ಥಾನಕ್ಕೇರಲಿದ್ದಾರೆ. ಈಗ ಲಂಕಾ ವಿರುದ್ಧ ಟಿ20ಐನಲ್ಲಿ 15 ವಿಕೆಟ್ ಪಡೆದಿರುವ ಚಾಹಲ್ ಇಂಗ್ಲೆಂಡ್‌ನ ಕ್ರಿಸ್ ಜೋರ್ಡನ್ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಟಿ20ಐನಲ್ಲಿ ಲಂಕಾ ವಿರುದ್ಧ ಹೆಚ್ಚು ವಿಕೆಟ್ ಪಟ್ಟಿ

ಟಿ20ಐನಲ್ಲಿ ಲಂಕಾ ವಿರುದ್ಧ ಹೆಚ್ಚು ವಿಕೆಟ್ ಪಟ್ಟಿ

* ಯುಜುವೇಂದ್ರ ಚಾಹಲ್, ಭಾರತ, 7 ಇನ್ನಿಂಗ್ಸ್‌, 15 ವಿಕೆಟ್‌ಗಳು
* ಕ್ರಿಸ್ ಜೋರ್ಡನ್, ಇಂಗ್ಲೆಂಡ್, 8 ಇನ್ನಿಂಗ್ಸ್‌, 15 ವಿಕೆಟ್‌ಗಳು
* ಡ್ವೇನ್ ಬ್ರಾವೋ, ವೆಸ್ಟ್‌ ಇಂಡೀಸ್, 11 ಇನ್ನಿಂಗ್ಸ್‌, 14 ವಿಕೆಟ್‌ಗಳು
* ಇಮ್ರಾನ್ ತಾಹಿರ್, ದಕ್ಷಿಣ ಆಫ್ರಿಕಾ, 9 ಇನ್ನಿಂಗ್ಸ್‌, 14 ವಿಕೆಟ್‌ಗಳು
* ಸಾಯೀದ್ ಅಜ್ಮಲ್, ಪಾಕಿಸ್ತಾನ, 9 ಇನ್ನಿಂಗ್ಸ್‌, 14 ವಿಕೆಟ್‌ಗಳು

ಚಾಹಲ್ ಬೌಲಿಂಗ್ ಸಾಧನೆ

ಚಾಹಲ್ ಬೌಲಿಂಗ್ ಸಾಧನೆ

31ರ ಹರೆಯದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಇನ್ನೂ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿಲ್ಲ. ಆದರೆ 56 ಏಕದಿನ ಪಂದ್ಯಗಳಲ್ಲಿ 97 ವಿಕೆಟ್‌, 49 ಟಿ20ಐ ಪಂದ್ಯಗಳಲ್ಲಿ 63 ವಿಕೆಟ್‌ಗಳು ಮತ್ತು 106 ಐಪಿಎಲ್ ಪಂದ್ಯಗಳಲ್ಲಿ 125 ವಿಕೆಟ್ ದಾಖಲೆ ಚಾಹಲ್ ಹೆಸರಿನಲ್ಲಿದೆ.

Story first published: Tuesday, July 27, 2021, 15:28 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X