ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

1ನೇ ಪಂದ್ಯ ಭಾರತಕ್ಕೆ ಸುಲಭ ತುತ್ತು, ಕೊಹ್ಲಿ-ರೋಹಿತ್ ಆಟದ ಗಮ್ಮತ್ತು

INDIA v/s WEST INDIES : ಭಾರತಕ್ಕೆ ಅಮೋಘ ಜಯ | Oneindia Kannada
Rohit and Kohli

ಗುವಾಹಟಿ, ಅಕ್ಟೋಬರ್ 21: ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅವರ ಸ್ಫೋಟಕ ಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾದ ಸುಲಭವಾಗಿ ಗೆದ್ದುಕೊಂಡಿದೆ. ವೆಸ್ಟ್ ಇಂಡೀಸ್ ನೀಡಿದ್ದ 323ರನ್ ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿ 8 ವಿಕೆಟ್ ಗಳಿಂದ ಜಯ ದಾಖಲಿಸಿದೆ.

ಭಾರತದ ಚೇಸ್ :

* * ಹಿಟ್ ಮ್ಯಾನ್ ರೋಹಿತ್ ಶರ್ಮ 117 ಎಸೆತಗಳಲ್ಲಿ 152ರನ್ (15 ಬೌಂಡರಿ, 8ಸಿಕ್ಸರ್) ಬಾರಿಸಿ ಅಜೇಯರಾಗಿ ಉಳಿದು ಗೆಲುವಿನ ರನ್ ಬಾರಿಸಿದರು. ಇದು ವೆಸ್ಟ್ ಇಂಡೀಸ್ ವಿರುದ್ಧ ರೋಹಿತ್ ಅವರ ಚೊಚ್ಚಲ ಶತಕವಾಗಿದೆ.
* ರನ್ ಮಷಿನ್ ವಿರಾಟ್ ಕೊಹ್ಲಿ 107 ಎಸೆತಗಳಲ್ಲಿ 140ರನ್ (21 ಬೌಂಡರಿ, 2 ಸಿಕ್ಸರ್) ಗಳಿಸಿ ಜಯದ ಹಾದಿಗೆ ತಂಡವನ್ನು ತಂದರು.

ಭಾರತ- ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯ ಸ್ಕೋರ್ ಕಾರ್ಡ್

* ಇದು ಕೊಹ್ಲಿ ಅವರ 26ನೇ ಏಕದಿನ ಶತಕ, 60ನೇ ಅಂತಾರಾಷ್ಟ್ರೀಯ ಶತಕವಾಗಿದೆ.
* ಅಂಬಟಿ ರಾಯುಡು 22ರನ್ ಗಳಿಸಿ ತಮ್ಮ ಕೊಡುಗೆ ನೀಡಿದರು.
* 42.1 ಓವರ್ ಗಳಲ್ಲಿ 326/2 ಸ್ಕೋರ್ ಮಾಡಿದ ಭಾರತವು, 8 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡು, ಐದು ಪಂದ್ಯಗಳ ಸರಣಿಯಲ್ಲಿ 1-0ರ ಮುನ್ನಡೆ ಪಡೆದುಕೊಂಡಿದೆ.

ವಿಂಡೀಸ್ ಇನ್ನಿಂಗ್ಸ್ :

* ಯುವ ಆಟಗಾರ ಶಿಮ್ರೋನ್ ಹೆಟ್ಮಾರ್ ಅವರ ಸ್ಫೋಟಕ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಬೃಹತ್ ಮೊತ್ತ ಕಲೆ ಹಾಕಿದೆ. ಭಾರತಕ್ಕೆ ಗೆಲ್ಲಲು 323ರನ್ ಗುರಿ ನೀಡಲಾಗಿದೆ.

* ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ವೆಸ್ಟ್ ಇಂಡೀಸ್ ತಂಡಕ್ಕೆ ಕಿರಾನ್ ಪೊವೆಲ್ ಅವರು ಆಸರೆಯಾದರು.

ಅಭಿಮಾನಿಗಳಿಗೆ ನಿರಾಶೆ! ಭಾರತ ವಿರುದ್ಧದ ಸರಣಿಗೆ ಗೇಲ್ ಇಲ್ಲ ಅಭಿಮಾನಿಗಳಿಗೆ ನಿರಾಶೆ! ಭಾರತ ವಿರುದ್ಧದ ಸರಣಿಗೆ ಗೇಲ್ ಇಲ್ಲ

* ಪೊವೆಲ್ 39 ಎಸೆತಗಳಲ್ಲಿ 51ರನ್ (6 ಬೌಂಡರಿ, 2 ಸಿಕ್ಸರ್) ಹಾಗೂ ವಿಕೆಟ್ ಕೀಪರ್ ಶಾಯಿ ಹೋಪ್ ಅವರು 51 ಎಸೆತಗಳಲ್ಲಿ 32ರನ್ ಗಳಿಸಿ ಜೊತೆಯಾಟ ಸಾಧಿಸಿದರು.

* 200ನೇ ಪಂದ್ಯವಾಡುತ್ತಿರುವ ಮರ್ಲಾನ್ ಸ್ಯಾಮುಲ್ಸ್ ಅವರು 2 ಎಸೆತಗಳನ್ನಾಡಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.

* ರೊವ್ಮನ್ ಪೊವೆಲ್ 22ರನ್ ಗಳಿಸಿದರೆ, ಆಶ್ಲೆ ನರ್ಸ್ 2 ರನ್ ಗಳಿಸಿ ಔಟಾದರು.

1
44266

* ಶಿಮ್ರೋನ್ ಹೆಟ್ಮಾರ್ ಅವರು 74 ಎಸೆತಗಳಲ್ಲಿ ಶತಕ ಗಳಿಸಿ ,ರನ್ ಗತಿ ಹೆಚ್ಚಿಸಿದರು. ಆದರೆ,78 ಎಸೆತಗಳಲ್ಲಿ 106ರನ್ ಗಳಿಸಿ ಔಟಾದರು. ಹೆಟ್ಮಾರ್ 6 ಸಿಕ್ಸರ್ ಹಾಗೂ 6 ಬೌಂಡರಿ ಚೆಚ್ಚಿದರು.

*13 ಇನ್ನಿಂಗ್ಸ್ ನಲ್ಲಿ 500ರನ್ ಗಳಿಸಿರುವ ಹೆಟ್ಮಾರ್, ತ್ವರಿತಗತಿಯಲ್ಲಿ ರನ್ ಗಳಿಸಿದ ವೆಸ್ಟ್ ಇಂಡೀಸ್ ನ ಕ್ಲೈವ್ ಲಾಯ್ಡ್, ಫಿಲ್ ಸಿಮನ್ಸ್ ಹಾಗೂ ಶಾಯಿ ಹೋಪ್ ಸಾಲಿಗೆ ಹೆಟ್ಮಾರ್ ಸೇರಿದ್ದಾರೆ.

* ದೇವೇಂದ್ರ ಬಿಶೂ ಅಜೇಯ 22 ಹಾಗೂ ಕೇಮಾರ್ ರೋಚ್ ಅಜೇಯ 26ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು.
* ಅಂತಿಮವಾಗಿ 50 ಓವರ್ ಗಳಲ್ಲಿ 322/8 ಸ್ಕೋರ್ ಮಾಡಿದೆ.

Story first published: Sunday, October 21, 2018, 21:32 [IST]
Other articles published on Oct 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X