ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್ ಪ್ರಥಮ ಏಕದಿನ: ಅಭ್ಯಾಸ ರದ್ದು; ಪಂದ್ಯ ನಡೆಯುತ್ತಾ, ಇಲ್ವಾ? ಬಿಸಿಸಿಐ ಹೇಳಿದ್ದಿಷ್ಟು

India vs West Indies: 1st ODI start on Sunday is in doubt and training session cancelled

ಇತ್ತೀಚೆಗಷ್ಟೇ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಹೀನಾಯವಾಗಿ ಸೋಲನ್ನು ಕಂಡ ಟೀಮ್ ಇಂಡಿಯಾ ಇದೀಗ ಭಾರತದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ.

ಐಪಿಎಲ್ ಮೆಗಾ ಹರಾಜು: ವಿಕೆಟ್ ಕೀಪರ್ ಆಗಿ ನೋಂದಾಯಿಸಿಕೊಂಡ ಸಿಎಸ್‌ಕೆ ಮಾಜಿ ಕ್ರಿಕೆಟಿಗಐಪಿಎಲ್ ಮೆಗಾ ಹರಾಜು: ವಿಕೆಟ್ ಕೀಪರ್ ಆಗಿ ನೋಂದಾಯಿಸಿಕೊಂಡ ಸಿಎಸ್‌ಕೆ ಮಾಜಿ ಕ್ರಿಕೆಟಿಗ

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಫೆಬ್ರವರಿ 6ರಂದು ನಡೆಯಲಿರುವ ಪ್ರಥಮ ಏಕದಿನ ಪಂದ್ಯದ ಮೂಲಕ ಈ ಸರಣಿ ಆರಂಭವಾಗಲಿದೆ. ಈ ಹಿಂದೆ ಪ್ರಕಟಿಸಿದ್ದ ಪ್ರಕಾರ ಇತ್ತಂಡಗಳ ನಡುವಿನ ಈ 3 ಪಂದ್ಯಗಳ ಏಕದಿನ ಸರಣಿ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಬೇಕಿತ್ತು. ಆದರೆ ಕೊರೋನಾ ವೈರಸ್ ಹೆಚ್ಚಾಗುತ್ತಿರುವುದರ ಕಾರಣದಿಂದಾಗಿ ಈ ಎಲ್ಲಾ ಪಂದ್ಯಗಳನ್ನು ಕೂಡ ಅಹ್ಮದಾಬಾದ್ ನಗರದ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿಯೇ ನಡೆಸಲು ಬಿಸಿಸಿಐ ನಿರ್ಧಾರವನ್ನು ಕೈಗೊಂಡಿತ್ತು. ಅದರಂತೆ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಗೆ ವೇದಿಕೆಯಾಗಿ ಸಜ್ಜಾಗುತ್ತಿದ್ದರೆ, ಅತ್ತ ಈ ಸರಣಿಯ ಮೂಲಕ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಅಧಿಕಾರ ಸ್ವೀಕರಿಸಲು ರೋಹಿತ್ ಶರ್ಮಾ ಸಜ್ಜಾಗಿದ್ದರು.

ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಅಬ್ಬರಿಸಲು ಕಾತರತೆ ವ್ಯಕ್ತಪಡಿಸಿದ ರೋಹಿತ್ ಶರ್ಮಾಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಅಬ್ಬರಿಸಲು ಕಾತರತೆ ವ್ಯಕ್ತಪಡಿಸಿದ ರೋಹಿತ್ ಶರ್ಮಾ

ಇನ್ನು ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಟಿ ಟ್ವೆಂಟಿ ಸರಣಿಯನ್ನು ಆಡಿ ಜಯ ಗಳಿಸಿದ್ದ ವೆಸ್ಟ್ ಇಂಡೀಸ್ ಇತ್ತೀಚಿಗಷ್ಟೆ ಭಾರತವನ್ನು ತಲುಪಿದ್ದು ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯ ಸಲುವಾಗಿ ಅಭ್ಯಾಸಗಳನ್ನು ಆರಂಭಿಸಿತ್ತು. ಹೀಗೆ ದಿನದಿಂದ ದಿನಕ್ಕೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಈ ಸರಣಿಗಳ ಕುರಿತಾಗಿ ಬೇಸರ ಮೂಡಿಸುವಂತಹ ಚಟುವಟಿಕೆಗಳು ನಡೆಯುತ್ತಿದ್ದು, ಟೀಮ್ ಇಂಡಿಯಾದ 8 ಸದಸ್ಯರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಬುಧವಾರ ದೃಢಪಟ್ಟಿದೆ. ಹೀಗೆ ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ನಿರಾಸೆ ಉಂಟಾಗಿದ್ದು, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ನಡೆಯುತ್ತಾ ಅಥವಾ ಇಲ್ಲವಾ ಎಂಬ ಅನುಮಾನ ಉಂಟಾಗುವಂತೆ ಮಾಡಿದೆ. ಈ ಕುರಿತಾಗಿ ಮಾಹಿತಿಯನ್ನು ನೀಡಿರುವ ಬಿಸಿಸಿಐನ ಅಧಿಕಾರಿಯೋರ್ವರು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಮೊದಲನೇ ಏಕದಿನ ಪಂದ್ಯ ಅನುಮಾನ!

ಮೊದಲನೇ ಏಕದಿನ ಪಂದ್ಯ ಅನುಮಾನ!

ಟೀಮ್ ಇಂಡಿಯಾದ ಕೆಲ ಆಟಗಾರರಲ್ಲಿ ಕೊರೋನಾವೈರಸ್ ಕಾಣಿಸಿಕೊಂಡ ನಂತರ ಮಾತನಾಡಿರುವ ಬಿಸಿಸಿಐ ಅಧಿಕಾರಿಯೋರ್ವರು ಈಗಲೂ ಕೂಡ ಸರಣಿ ನಿಗದಿಪಡಿಸಿದ ದಿನಾಂಕಗಳಂದು ನಡೆಯಲಿದೆ ಎಂದಿದ್ದಾರೆ. ಆದರೆ, ನಾಳೆ ಅಥವಾ ನಾಡಿದ್ದು ಟೀಮ್ ಇಂಡಿಯಾದ ಇತರೆ ಯಾವುದೇ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ ಸರಣಿ ಆರಂಭವಾಗುವುದರಲ್ಲಿ ಒಂದೆರಡು ದಿನಗಳ ವಿಳಂಬವಾಗಬಹುದು ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಪ್ರಥಮ ಏಕದಿನ ಪಂದ್ಯದ ಸಲುವಾಗಿ ಟೀಮ್ ಇಂಡಿಯಾ ಆರಂಭಿಸಿದ್ದ ಅಭ್ಯಾಸವೂ ಕೂಡ ಇದೀಗ ರದ್ದಾಗಿದೆ.

ಮಯಾಂಕ್ ಅಗರ್ವಾಲ್ ಏಕದಿನ ತಂಡಕ್ಕೆ ಸೇರ್ಪಡೆ

ಮಯಾಂಕ್ ಅಗರ್ವಾಲ್ ಏಕದಿನ ತಂಡಕ್ಕೆ ಸೇರ್ಪಡೆ

ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕೊರೊನಾ ಸೋಂಕಿಗೆ ಒಳಗಾದ ನಂತರ ಭಾರತದ ಆಯ್ಕೆ ಸಮಿತಿ ಮಯಾಂಕ್ ಅಗರ್ವಾಲ್ ಅವರನ್ನು ಭಾರತ ಏಕದಿನ ತಂಡಕ್ಕೆ ಆಯ್ದುಕೊಂಡಿದೆ. ಒಟ್ಟಿನಲ್ಲಿ ಸದ್ಯಕ್ಕೆ ಕೊರೊನ ಸೋಂಕಿಗೆ ಒಳಗಾಗಿರುವ ಆಟಗಾರರು ಇಲ್ಲದೇ ಇದ್ದರೂ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯ ನಡೆಯಲಿದೆ ಎಂದಿರುವ ಬಿಸಿಸಿಐ ಇದರ ಮೇಲೂ ಬೇರೆ ಆಟಗಾರರಿಗೆ ಕೊರೋನಾ ಸೋಂಕು ತಗುಲಿದರೆ ಪಂದ್ಯ ಆರಂಭದಲ್ಲಿ ವಿಳಂಬವಾಗುವುದು ಖಚಿತ ಎಂದಿದೆ.

ಕೊರೊನಾ ಸೋಂಕು ತಗುಲಿರುವುದು ಯಾರಿಗೆ?

ಕೊರೊನಾ ಸೋಂಕು ತಗುಲಿರುವುದು ಯಾರಿಗೆ?

ಇನ್ನು ಬುಧವಾರದಂದು ಟೀಮ್ ಇಂಡಿಯಾದ ಕೆಲ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಶ್ರೇಯಸ್ ಅಯ್ಯರ್, ಶಿಖರ್ ಧವನ್, ರುತುರಾಜ್ ಗಾಯಕ್ವಾಡ್ ಮತ್ತು ನವದೀಪ್ ಸೈನಿ ಈ 4 ಆಟಗಾರರಿಗೆ ಸೋಂಕು ತಗುಲಿದೆ. ಅತ್ತ ಅಹಮದಾಬಾದ್ ತಲುಪಬೇಕಿರುವ ಅಕ್ಷರ್ ಪಟೇಲ್ ಅವರಿಗೂ ಕೂಡ ಕೊರೊನ ಸೋಂಕು ತಗುಲಿದೆ. ಹೀಗೆ ಆಟಗಾರರು ಸೇರಿದಂತೆ ಟೀಮ್ ಇಂಡಿಯಾದ ಒಟ್ಟು 8 ಸದಸ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಇದೀಗ ಭೀತಿಯನ್ನು ಹುಟ್ಟಿಸಿದೆ.

Story first published: Thursday, February 3, 2022, 15:17 [IST]
Other articles published on Feb 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X