ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡಿದ ರೋಹಿತ್, ರಾಹುಲ್, ಶ್ರೇಯಸ್: ವೆಸ್ಟ್ ಇಂಡೀಸ್ ಸದೆಬಡಿದ ಭಾರತ

India vs West Indies, 2nd ODI: India won by 107 runs

ವಿಶಾಖಪಟ್ಟಣ, ಡಿಸೆಂಬರ್ 18: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶ್ರೇಯಸ್ ಐಯ್ಯರ್, ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ಮತ್ತು ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 107 ರನ್ ಭರ್ಜರಿ ಜಯ ಗಳಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ.

ಸಚಿನ್ ತೆಂಡೂಲ್ಕರ್‌ಗೆ ಕೊಹ್ಲಿಯನ್ನು ಹೋಲಿಸಿ ಲಾರಾ ಹೇಳಿದ ಮಾತು!ಸಚಿನ್ ತೆಂಡೂಲ್ಕರ್‌ಗೆ ಕೊಹ್ಲಿಯನ್ನು ಹೋಲಿಸಿ ಲಾರಾ ಹೇಳಿದ ಮಾತು!

ರೋಹಿತ್, ರಾಹುಲ್ ಶತಕ ಬಾರಿಸಿದರೆ ಶ್ರೇಯಸ್ ಐಯ್ಯರ್ ಅರ್ಧ ಶತಕ ಸಿಡಿಸಿ ಬ್ಯಾಟಿಂಗ್ ವಿಭಾಗದಲ್ಲಿ ಬೆಂಬಲಿಸಿದರು. ವಿಂಡೀಸ್ ಇನ್ನಿಂಗ್ಸ್‌ ವೇಳೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಸಾಧನೆ ತಂಡಕ್ಕೆ ಬೌಲಿಂಗ್‌ ವಿಭಾಗದಲ್ಲಿ ನೆರವಿತ್ತಿತು.

ಪಂದ್ಯದ ಸ್ಕೋರ್‌ಕಾರ್ಡ್ ಕೆಳಗಿದೆ.

1
46125

2019ರಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಸದ್ದು ಮಾಡಿದ ವಿಷಯಗಳು2019ರಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಸದ್ದು ಮಾಡಿದ ವಿಷಯಗಳು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾದಿಂದ, ರೋಹಿತ್ 159 (138 ಎಸೆತ), ಕೆಎಲ್ ರಾಹುಲ್ 102 (104 ಎಸೆತ), ವಿರಾಟ್ ಕೊಹ್ಲಿ 0, ಶ್ರೇಯಸ್ ಐಯ್ಯರ್ 53 (32 ಎಸೆತ), ರಿಷಬ್ ಪಂತ್ 39 (16 ಎಸೆತ), ಕೇದಾರ್ ಜಾಧವ್ 16 ರನ್‌ ಸೇರ್ಪಡೆಯೊಂದಿಗೆ 50 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 387 ರನ್ ಪೇರಿಸಿತು.

ಐಪಿಎಲ್ ಹರಾಜು; ಹರಾಜಿಗೂ ಮುನ್ನ ನೀವು ತಿಳಿದಿರಲೇಬೇಕಾದ ಅಂಶಗಳುಐಪಿಎಲ್ ಹರಾಜು; ಹರಾಜಿಗೂ ಮುನ್ನ ನೀವು ತಿಳಿದಿರಲೇಬೇಕಾದ ಅಂಶಗಳು

ಗುರಿ ಬೆಂಬತ್ತಿದ ವೆಸ್ಟ್‌ ಇಂಡೀಸ್‌ನಿಂದ ಎವಿನ್ ಲೆವಿಸ್ 30, ಶಾಯ್ ಹೋಪ್ 78, ನಿಕೋಲಸ್ ಪೂರನ್ 75, ಕೀಮೋ ಪೌಲ್ 46 ರನ್‌ ಕೊಡುಗೆಯೊಂದಿಗೆ 43.3 ಓವರ್‌ಗಳಲ್ಲಿ ಎರ್ವ ಪತನ ಕಂಡು 280 ರನ್ ಕಲೆ ಹಾಕಲಷ್ಟೇ ವಿಂಡೀಸ್ ಶಕ್ತವಾಯಿತು. ಈ ಇನ್ನಿಂಗ್ಸ್‌ನಲ್ಲಿ ಕುಲದೀಪ್ ಅವರು ಶಾಯ್ ಹೋಪ್ (32.4 ಓ), ಜೇಸನ್ ಹೋಲ್ಡರ್ (32.5), ಅಲ್ಝಾರಿ ಜೋಸೆಪ್ (32.6) ವಿಕೆಟ್ ಮುರಿದು ಹ್ಯಾಟ್ರಿಕ್ ವಿಕೆಟ್ ಸಾಧನೆ ಮೆರೆದರು.

ದ್ರಾವಿಡ್ ಮೆಚ್ಚಿದ ಅಫ್ಘಾನಿಸ್ತಾನ 14ರ ಪೋರ ನೂರ್ ಐಪಿಎಲ್‌ಗೆ ಎಂಟ್ರಿದ್ರಾವಿಡ್ ಮೆಚ್ಚಿದ ಅಫ್ಘಾನಿಸ್ತಾನ 14ರ ಪೋರ ನೂರ್ ಐಪಿಎಲ್‌ಗೆ ಎಂಟ್ರಿ

ಉಳಿದಂತೆ ಭಾರತದ ಶಾರ್ದೂಲ್ ಠಾಕೂರ್ 1, ಮೊಹಮ್ಮದ್ ಶಮಿ 3, ರವೀಂದ್ರ ಜಡೇಜಾ 2 ವಿಕೆಟ್ ಪಡೆದರು. ಭಾರತದ ಇನ್ನಿಂಗ್ಸ್‌ನಲ್ಲಿ ಶೆಲ್ಡನ್ ಕಾಟ್ರೆಲ್ 2, ಕೀಮೋ ಪೌಲ್ 1, ಅಲ್ಝಾರಿ ಜೋಸೆಫ್ 1, ಕೀರನ್ ಪೊಲಾರ್ಡ್ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ರೋಹಿತ್ ಶರ್ಮಾ ಪಡೆದುಕೊಂಡರು.

Story first published: Wednesday, December 18, 2019, 21:43 [IST]
Other articles published on Dec 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X