ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್, 2ನೇ ಟೆಸ್ಟ್, Live: ಪೂಜಾರ ವಿಕೆಟ್ ಮುರಿದ ದೈತ್ಯ!

India vs West Indies: 2nd Test Match, Live Score

ಕಿಂಗ್ಸ್‌ಟನ್, ಆಗಸ್ಟ್ 30: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ಶುಕ್ರವಾರ (ಆಗಸ್ಟ್ 30) ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 264 ರನ್ ಗಳಿಸಿದೆ. ಹನುಮ ವಿಹಾರಿ (42), ರಿಷಬ್ ಪಂತ್ (27) ಕ್ರೀಸ್‌ನಲ್ಲಿದ್ದಾರೆ.

ಟಿ20 ತಂಡದಿಂದ ಧೋನಿ ಕೈಬಿಟ್ಟಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್ಟಿ20 ತಂಡದಿಂದ ಧೋನಿ ಕೈಬಿಟ್ಟಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್

ಜಮೈಕಾದ ಕಿಂಗ್ಸ್‌ಟನ್‌ನ ಸಬೀನಾ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪ್ರಮುಖಾಕರ್ಷಣೆಯಾಗಿದ್ದ ವಿಂಡೀಸ್ ದೈತ್ಯದೇಹಿ ಸ್ಪಿನ್ನರ್ ರಹಕೀಮ್ ಕಾರ್ನ್‌ವಾಲ್, ಭಾರತದ ಟೆಸ್ಟ್ ಸ್ಪೆಷಾಲಿಷ್ಟ್ ಚೇತೇಶ್ವರ ಪೂಜಾರ ಅವರ ವಿಕೆಟ್ ಮುರಿದು ಗಮನ ಸೆಳೆದರು. ಅಲ್ಲದೆ ಸ್ಲಿಪ್‌ನಲ್ಲಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಕ್ಯಾಚ್‌ ಪಡೆದು ಇಬ್ಬರಿಗೂ ಪೆವಿಲಿಯನ್ ದಾರಿ ತೋರಿದರು.

ಭಾರತದ ಬ್ಯಾಟ್ಸ್‌ಮನ್ ಸಾಹಸ, ಟಿ20ಐ ದಾಖಲೆ ಮುರಿದ ರೊಮೇನಿಯಾ!ಭಾರತದ ಬ್ಯಾಟ್ಸ್‌ಮನ್ ಸಾಹಸ, ಟಿ20ಐ ದಾಖಲೆ ಮುರಿದ ರೊಮೇನಿಯಾ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ರಾಹುಲ್ 13, ಅಗರ್ವಾಲ್ 55, ಪೂಜಾರ 6, ನಾಯಕ ವಿರಾಟ್ ಕೊಹ್ಲಿ 76, ಅಜಿಂಕ್ಯ ರಹಾನೆ 24 ರನ್ ಸೇರಿಸಿ ವಿಕೆಟ್ ಒಪ್ಪಿಸಿದ್ದಾರೆ. ವಿಂಡೀಸ್ ನಾಯಕ ಜೇಸನ್ ಹೋಲ್ಡರ್ 3 (39 ರನ್) ವಿಕೆಟ್ ಪಡೆದು ಮೊದಲ ದಿನ ಬೌಲಿಂಗ್ ಪಾರಮ್ಯ ಮೆರೆದಿದ್ದಾರೆ.

ಭಾರತ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್, 1ನೇ ದಿನ, Live ಸ್ಕೋರ್‌ಕಾರ್ಡ್

1
46251

ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಶಮರ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ಜಹ್ಮರ್ ಹ್ಯಾಮಿಲ್ಟನ್ (ವಿಕೆ), ಶಿಮ್ರಾನ್ ಹೆಟ್ಮೈಯರ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್ (ಸಿ), ಕೆಮರ್ ರೋಚ್, ರಾಕೀಮ್ ಕಾರ್ನ್‌ವಾಲ್, ಶಾನನ್ ಗೇಬ್ರಿಯಲ್.

ಯೂ ಟರ್ನ್ ಹೊಡೆದ ರಾಯುಡು, ಮತ್ತೆ ಕ್ರಿಕೆಟ್ ಮೈದಾನಕ್ಕೆ ಎಂಟ್ರಿಯೂ ಟರ್ನ್ ಹೊಡೆದ ರಾಯುಡು, ಮತ್ತೆ ಕ್ರಿಕೆಟ್ ಮೈದಾನಕ್ಕೆ ಎಂಟ್ರಿ

ಭಾರತ ತಂಡ: ಲೋಕೇಶ್ ರಾಹುಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ.

Story first published: Saturday, August 31, 2019, 10:39 [IST]
Other articles published on Aug 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X