ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೇಗಿ ಮೊಹಮ್ಮದ್ ಶಮಿ ದಾಖಲೆ ಮುರಿಯಲಿದ್ದಾರೆ ಕುಲದೀಪ್ ಯಾದವ್

India vs West Indies 3rd ODI: Kuldeep Yadav 4 wickets away from massive record

ಪೋರ್ಟ್ ಆಫ್ ಸ್ಪೇನ್, ಆಗಸ್ಟ್ 14: ಭಾರತ ತಂಡದಲ್ಲಿ 50 ಓವರ್‌ಗಳ ಕ್ರಿಕೆಟ್ ಮಾದರಿಯಲ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮತ್ತು ಎಡಗೈ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಬೌಲಿಂಗ್ ಬಲವಾಗಿರುವವರು. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏಕದಿನ ತಂಡದಲ್ಲಿ ಆಡುತ್ತಿರುವ ಕುಲದೀಪ್‌ಗೆ ಅಪರೂಪದ ದಾಖಲೆ ನಿರ್ಮಿಸುವ ಅವಕಾಶವಿದೆ.

ಇಂಡಿಯಾ vs ವಿಂಡೀಸ್‌: 3ನೇ ಏಕದಿನಕ್ಕೆ ಭಾರತ ತಂಡದ ಸಂಭಾವ್ಯ XIಇಂಡಿಯಾ vs ವಿಂಡೀಸ್‌: 3ನೇ ಏಕದಿನಕ್ಕೆ ಭಾರತ ತಂಡದ ಸಂಭಾವ್ಯ XI

ಟ್ರಿನಿಡಾಡ್‌ನ ಪೋರ್ಟ್ ಆಫ್‌ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಬುಧವಾರ (ಆಗಸ್ಟ್ 14) ನಡೆಯಲಿರುವ ಭಾರತ vs ವೆಸ್ಟ್ ಇಂಡೀಸ್ 3ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಚೈನಾಮನ್ ಕುಲದೀಪ್ ಏನಾದರೂ 4 ವಿಕೆಟ್‌ಗಳನ್ನು ಪಡೆದರೆ, ಏಕದಿನದಲ್ಲಿ 100 ವಿಕೆಟ್‌ಗಳ ಹಿರಿಮೆ ಅವರದ್ದಾಗಲಿದೆ.

ಭಾರತ ವಿರುದ್ಧದ ಟಿ20, ಟೆಸ್ಟ್‌ ಸರಣಿಗೆ ತಂಡ ಪ್ರಕಟಿಸಿದ ದ. ಆಫ್ರಿಕಾಭಾರತ ವಿರುದ್ಧದ ಟಿ20, ಟೆಸ್ಟ್‌ ಸರಣಿಗೆ ತಂಡ ಪ್ರಕಟಿಸಿದ ದ. ಆಫ್ರಿಕಾ

ಸದ್ಯ ಕುಲದೀಪ್ ಒಟ್ಟು 53 ಏಕದಿನ ಪಂದ್ಯಗಳಲ್ಲಿ 96 ವಿಕೆಟ್‌ ಸಾಧನೆ ಹೊಂದಿದ್ದಾರೆ. ಬುಧವಾರದ ಪಂದ್ಯದಲ್ಲಿ 4 ವಿಕೆಟ್‌ಗಳು ಲಭಿಸಿದರೆ, ಏಕದಿನದಲ್ಲಿ ಅತಿ ವೇಗದಲ್ಲಿ 100 ವಿಕೆಟ್ ಪಡೆದ ಭಾರತದ ಬೌಲರ್ ದಾಖಲೆಗೆ ಯಾದವ್ ಕಾರಣರಾಗಲಿದ್ದಾರೆ.

ಐಪಿಎಲ್‌ 2020: ಡೆಲ್ಲಿ ಕ್ಯಾಪಿಟಲ್ಸ್‌ ಸೇರಲಿದ್ದಾರಂತೆ ರಾಯಲ್ಸ್‌ನ ಅಜಿಂಕ್ಯ ರಹಾನೆ!ಐಪಿಎಲ್‌ 2020: ಡೆಲ್ಲಿ ಕ್ಯಾಪಿಟಲ್ಸ್‌ ಸೇರಲಿದ್ದಾರಂತೆ ರಾಯಲ್ಸ್‌ನ ಅಜಿಂಕ್ಯ ರಹಾನೆ!

2019ರ ವಿಶ್ವಕಪ್‌ ವೇಳೆ ಕುಲದೀಪ್ ಯಾದವ್ ಈ ಮೈಲಿಗಲ್ಲು ಸ್ಥಾಪಿಸುವ ಅವಕಾಶವಿತ್ತು. ಆ ಟೂರ್ನಿಯಲ್ಲಿ ಕುಲದೀಪ್ 7 ಪಂದ್ಯಗಳಲ್ಲಿ ಕೇವಲ 6 ವಿಕೆಟ್ ಪಡೆದು ದಾಖಲೆಯ ಅವಕಾಶ ಕಳೆದುಕೊಂಡಿದ್ದರು. ಈಗಲೂ ಕುಲದೀಪ್‌ಗೆ ಮೊಹಮ್ಮದ್ ಶಮಿ ಅವರನ್ನು ಮೀರಿಸುವ ಅವಕಾಶವಿದೆ.

ಕೆರಿಬಿಯನ್‌ ನೆಲದಲ್ಲಿ ಪ್ರಿನ್ಸ್‌ ಲಾರಾ ದಾಖಲೆ ಮುರಿದ ಕಿಂಗ್‌ ಕೊಹ್ಲಿ!ಕೆರಿಬಿಯನ್‌ ನೆಲದಲ್ಲಿ ಪ್ರಿನ್ಸ್‌ ಲಾರಾ ದಾಖಲೆ ಮುರಿದ ಕಿಂಗ್‌ ಕೊಹ್ಲಿ!

ಶಮಿ ಒಟ್ಟು 56 ಪಂದ್ಯಗಳಲ್ಲಿ 100 ವಿಕೆಟ್‌ಗಳ ಮೂಲಕ ಏಕದಿನದಲ್ಲಿ ವೇಗದಲ್ಲಿ 100 ವಿಕೆಟ್ ಪಡೆದ ಭಾರತದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೆರಡು ಪಂದ್ಯಗಳಲ್ಲಿ ಕುಲದೀಪ್‌ 4 ವಿಕೆಟ್ ಪಡೆದರೂ ಶಮಿ ಸಾಧನೆಯನ್ನು ಹಿಂದಿಕ್ಕಬಲ್ಲರು. ಇತ್ತಂಡಗಳು 3ನೇ ಏಕದಿನ ಪಂದ್ಯ 7 pmಗೆ ಆರಂಭವಾಗಲಿದೆ.

Story first published: Wednesday, August 14, 2019, 11:42 [IST]
Other articles published on Aug 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X