ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್, 3ನೇ ಟಿ20: ಕುತೂಹಲಕಾರಿ ಅಂಕಿ-ಅಂಶಗಳು!

India vs West Indies, 3rd T20I: India on the cusp of unique records

ಗಯಾನಾ, ಆಗಸ್ಟ್ 6: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ, ಮಂಗಳವಾರ (ಆಗಸ್ಟ್ 6) ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ 3ನೇ ಮತ್ತು ಕೊನೆಯ ಟಿ20 ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಎರಡೂ ತಂಡಗಳ ಸೋಲು-ಗೆಲುವು ಕೆಲವೊಂದು ದಾಖಲೆಗಳಿಗೆ ಕಾರಣವಾಗಲಿದೆ.

ನಿವೃತ್ತಿ ಘೋಷಿಸಿದ ಡೇಲ್ ಸ್ಟೇನ್‌ಗೆ ಮನಮುಟ್ಟುವ ಸಂದೇಶ ಬರೆದ ಕೊಹ್ಲಿನಿವೃತ್ತಿ ಘೋಷಿಸಿದ ಡೇಲ್ ಸ್ಟೇನ್‌ಗೆ ಮನಮುಟ್ಟುವ ಸಂದೇಶ ಬರೆದ ಕೊಹ್ಲಿ

ಗಯಾನಾ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಮೊದಲೆರಡು ಪಂದ್ಯಗಳಲ್ಲಿ ಪಾಲ್ಗೊಂಡಿದ್ದ ಕೆಲ ಆಟಗಾರರಿಗೆ ಬದಲಾಗಿ ಹೊಸಬರು ಮೈದಾನಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಇಷ್ಟೇ ಅಲ್ಲದೆ ಹಲವಾರು ದಾಖಲೆಗಳಿಗೆ ಈ ಪಂದ್ಯ ಸಾಕ್ಷಿಯಾಗಲಿದೆ.

ಭಾರತ vs ವೆಸ್ಟ್ ಇಂಡೀಸ್, 3ನೇ ಟಿ20, Live ಸ್ಕೋರ್‌ಕಾರ್ಡ್

1
46246

ಭಾರತ-ವೆಸ್ಟ್ ಇಂಡೀಸ್ 3ನೇ ಟಿ20 ಪಂದ್ಯದಲ್ಲಿ ಇತ್ತಂಡಗಳಿಂದ, ಆಟಗಾರರಿಂದ ಆಗಲಿರುವ ದಾಖಲೆಗಳಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಅಂಕಿ-ಅಂಶಗಳಿವೆ.

ಗಯಾನಾ ಸ್ಟೇಡಿಯಂ

ಗಯಾನಾ ಸ್ಟೇಡಿಯಂ

1. ಗಯಾನಾ ಸ್ಟೇಡಿಯಂನಲ್ಲಿ ಈ ಮೊದಲು ಆಡಿದ ಎರಡು ಟಿ20ಐ ಪಂದ್ಯಗಳನ್ನು ಆತಿಥೇಯ ವೆಸ್ಟ್ ಇಂಡೀಸ್ ಗೆದ್ದುಕೊಂಡಿದೆ.
2. ಗಯಾನಾ ಸ್ಟೇಡಿಯಂನಲ್ಲಿ ಭಾರತ-ವಿಂಡೀಸ್ ಇದೇ ಮೊದಲ ಬಾರಿ ಟಿ20ಐಗೆ ಮುಖಾಮುಖಿಯಾಗುತ್ತಿವೆ.
3. ಈ ಪಂದ್ಯದಲ್ಲಿ ಕೆರಿಬಿಯನ್ನರು ಸೋತರೆ, ಹಿಂದಿನ ಸತತ ಐದು ಟಿ20ಐಗಳಲ್ಲಿ ವೆಸ್ಟ್ ಇಂಡೀಸ್ ಸೋತಂತಾಗುತ್ತದೆ.

ಅತ್ಯಧಿಕ ಜಯ

ಅತ್ಯಧಿಕ ಜಯ

1. ಟೀಮ್ ಇಂಡಿಯಾ ಟಿ20ಐಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧ ಸತತ 5 ಗೆಲುವುಗಳ ದಾಖಲೆ ಹೊಂದಿದೆ. 3ನೇ ಪಂದ್ಯದಲ್ಲೂ ಭಾರತ ಗೆದ್ದರೆ, ವಿಂಡೀಸ್ ವಿರುದ್ಧ ಟಿ20ಐನಲ್ಲಿ 6ನೇ ಗೆಲುವನ್ನು ದಾಖಲಿಸಿದಂತಾಗುತ್ತದೆ.
2. 3ನೇ ಟಿ20ಯಲ್ಲಿ ಭಾರತ ಗೆಲ್ಲಬೇಕಿದೆ. ಗೆದ್ದರೆ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಟಿ20 ಸರಣಿಯಲ್ಲಿ ವೈಟ್ ವಾಷ್ ಮಾಡಿದಂತಾಗುತ್ತದೆ. ಇಲ್ಲಿಗೆ ಭಾರತ 4ನೇ ಸಾರಿ ಎದುರಾಳಿ ತಂಡವನ್ನು ವೈಟ್ ವಾಷ್ ಮಾಡಿದಂತಾಗುತ್ತದೆ.
3. ಈ ಮೊದಲು ಭಾರತ, 2016ರಲ್ಲಿ ಆಸ್ಟ್ರೇಲಿಯಾದ ಸರಣಿಯಲ್ಲಿ, 2017ರಲ್ಲಿ ಶ್ರೀಲಂಕಾದ ಭಾರತದ ಪ್ರವಾಸ ಸರಣಿ ಮತ್ತು 2018ರಲ್ಲಿ ಭಾರತಕ್ಕೆ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಟಿ20ಐ ಸರಣಿಗಳಲ್ಲಿ ಎದುರಾಳಿಯನ್ನು ವೈಟ್‌ವಾಷ್ ಮುಖಭಂಗಕ್ಕೀಡು ಮಾಡಿತ್ತು.

2ನೇ ಸಾರಿ ವೈಟ್ ವಾಷ್

2ನೇ ಸಾರಿ ವೈಟ್ ವಾಷ್

1. ಇಂದಿನ ಪಂದ್ಯದಲ್ಲಿ ಭಾರತ, ವಿಂಡೀಸ್ ಅನ್ನು ವೈಟ್ ವಾಷ್ ಗೊಳಿಸಿದರೆ, ವೆಸ್ಟ್ ಇಂಡೀಸ್ ಅನ್ನು 3 ಪಂದ್ಯಗಳ ಟಿ20ಐ ನಲ್ಲಿ ಭಾರತ ಎರಡನೇ ಸಾರಿ ವೈಟ್‌ವಾಷ್‌ಗೊಳಿಸಿದಂತಾಗುತ್ತದೆ.
2. ಟಿ20ಐನಲ್ಲಿ ಕೆಎಲ್ ರಾಹುಲ್ 1000 ರನ್ ಮೈಲಿಗಲ್ಲು ಸ್ಥಾಪಿಸಲು 121 ರನ್ ಬೇಕಿದೆ.
3. ರಾಹುಲ್, ಆಗಸ್ಟ್ 6ರ ಪಂದ್ಯದಲ್ಲೇ 121 ರನ್ ಗಳಿಸಿದರೆ ಟಿ20ಐನಲ್ಲಿ 1000 ರನ್ ಸಾಧನೆ ಮಾಡಿದ 7ನೇ ಭಾರತೀಯನಾಗಿ ಗುರುತಿಸಿಕೊಳ್ಳಲಿದ್ದಾರೆ.

ಧವನ್‌ಗೆ 47 ರನ್ ಬೇಕು

ಧವನ್‌ಗೆ 47 ರನ್ ಬೇಕು

1. ಟಿ20ಐನಲ್ಲಿ ಶಿಖರ್ ಧವನ್ 7,000 ರನ್‌ ಪೂರೈಸಲು 47 ರನ್ ಬೇಕು.
2. ವೆಸ್ಟ್ ಇಂಡೀಸ್‌ನ ಶೆಲ್ಡನ್ ಕಾಟ್ರೆಲ್ ಟಿ20ಯಲ್ಲಿ 100 ವಿಕೆಟ್‌ಗಳನ್ನು ಪೂರೈಸಲು ಇನ್ನು 1 ವಿಕೆಟ್‌ ಬೇಕು.
3. ಅಂತಾರಾಷ್ಟ್ರೀಯ ಟಿ20ಯಲ್ಲಿ ವೆಸ್ಟ್ ಇಂಡೀಸ್ 50 ಗೆಲುವುಗಳನ್ನು ದಾಖಲಿಸಲು ಕೇವಲ 1 ಗೆಲುವು ಬೇಕು.

Story first published: Tuesday, August 6, 2019, 13:45 [IST]
Other articles published on Aug 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X