ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್, 3ನೇ ಟಿ20: ಮುಂಬೈ ಹವಾಮಾನ ಹೇಗಿದೆ?

India vs West Indies 3rd T20I matchs Weather Report

ಮುಂಬೈ, ಡಿಸೆಂಬರ್ 11: ಪ್ರವಾಸಿ ವೆಸ್ಟ್‌ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದ ಸೋಲಿಗೆ ವಿರಾಟ್ ಕೊಹ್ಲಿ ಪಡೆ 3ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಪ್ರತ್ಯುತ್ತರ ನೀಡಲೇಬೇಕಿದೆ. 3 ಪಂದ್ಯಗಳ ಟಿ20 ಸರಣಿ ಯಾರದ್ದಾಗಲಿದೆ ಎಂದು ನಿರ್ಧರಿಸಲಿರುವ ಪಂದ್ಯ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ (ಡಿಸೆಂಬರ್ 11) ನಡೆಯಲಿದೆ.

ಆ್ಯನಿವರ್ಸರಿ ಸಂಭ್ರಮದಲ್ಲಿ ವಿರುಷ್ಕಾ ಜೋಡಿ; ವಿಶೇಷ ಸಂದರ್ಭಕ್ಕೆ ಕೊಹ್ಲಿ ಭಾವುಕ ಸಂದೇಶಆ್ಯನಿವರ್ಸರಿ ಸಂಭ್ರಮದಲ್ಲಿ ವಿರುಷ್ಕಾ ಜೋಡಿ; ವಿಶೇಷ ಸಂದರ್ಭಕ್ಕೆ ಕೊಹ್ಲಿ ಭಾವುಕ ಸಂದೇಶ

ಭಾರತ-ವೆಸ್ಟ್ ಇಂಡೀಸ್ ಮೊದಲ ಟಿ20ಯಲ್ಲಿ ಟೀಮ್ ಇಂಡಿಯಾ 6 ವಿಕೆಟ್ ರೋಚಕ ಜಯ ಗಳಿಸಿತ್ತು. ಮೊದಲ ಪಂದ್ಯದಲ್ಲಾದ ಹಿನ್ನಡೆಗೆ ವಿಂಡೀಸ್ ದ್ವಿತೀಯ ಪಂದ್ಯದಲ್ಲಿ ತಿರುಗೇಟು ನೀಡಿತ್ತು. ಸದ್ಯ ಸರಣಿ 1-1ರಿಂದ ಸಮಬಲಗೊಂಡಿದೆ. ಹೀಗಾಗಿ ಬುಧವಾರದ ನಾನಾ-ನೀನಾ ಪಂದ್ಯದತ್ತ ಕ್ರಿಕೆಟ್ ಅಭಿಮಾನಿಗಳ ಚಿತ್ತವಿದೆ.

ಭಾರತ vs ವೆಸ್ಟ್ ಇಂಡೀಸ್, 3ನೇ ಟಿ20, Live ಸ್ಕೋರ್‌ಕಾರ್ಡ್

1
46123

ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ನಿರ್ಣಾಯಕ ಪಂದ್ಯಕ್ಕೆ ಮಳೆಯ ಕಾಟವಿದೆಯಾ? ಮಾಹಿತಿಯ ಪ್ರಕಾರ 3ನೇ ಟಿ20 ಪಂದ್ಯಕ್ಕೆ ಮಳೆಯ ತೊಂದರೆಯಿಲ್ಲ. ಬುಧವಾರ ಮುಂಬೈ ತಾಪಮಾನ 32 ಡಿಗ್ರಿ ಸೆಲ್ಶಿಯಸ್‌ನಿಂದ 23 ಡಿಗ್ರಿ ಸೆಲ್ಶಿಯಸ್ ನಡುವೆ ಇರಲಿದೆ. ಹೀಗಾಗಿ ಪಂದ್ಯದ ವೇಳೆ ಮಳೆಯ ಸಾಧ್ಯತೆ ಇಲ್ಲ ಎನ್ನುತ್ತಿದೆ ಅಲ್ಲಿನ ಹವಾಮಾನ ವರದಿ.

ಐಪಿಎಲ್ 2020:ಉತ್ತಮ ಮೊತ್ತಕ್ಕೆ ಹರಾಜಾಗುವ ವೆಸ್ಟ್‌ ಇಂಡೀಸ್‌ನ 4 ಆಟಗಾರರು ಇವರು!ಐಪಿಎಲ್ 2020:ಉತ್ತಮ ಮೊತ್ತಕ್ಕೆ ಹರಾಜಾಗುವ ವೆಸ್ಟ್‌ ಇಂಡೀಸ್‌ನ 4 ಆಟಗಾರರು ಇವರು!

ಈ ಅಂತಿಮ ಟಿ20 ಪಂದ್ಯದಲ್ಲಿ ಕ್ರಿಕೆಟ್ ಪ್ರೇಮಿಗಳ ಮತ್ತು ಭಾರತ ಆಯ್ಕೆದಾರರ ಗಮನ ಬ್ಯಾಟ್ಸ್‌ಮನ್ ಕಮ್ ಆಫ್‌ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮತ್ತು ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಮೇಲಿರಲಿದೆ. ಅದರಲ್ಲೂ ತವರು ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಪಂತ್‌ ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಪಂದ್ಯ 7 pmಗೆ ಆರಂಭವಾಗಲಿದೆ.

Story first published: Wednesday, December 11, 2019, 16:08 [IST]
Other articles published on Dec 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X