ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20ಗೆ ಭಾರತದ ಸಂಭಾವ್ಯ XI

India vs West Indies: 3rd T20I: Predicted XI of India at Guyana

ಗಯಾನಾ, ಆಗಸ್ಟ್ 5: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಬಳಗ ಟಿ20ಯೊಂದಿಗೆ ಸರಣಿ ಆರಂಭಿಸಿದ್ದು, ಮೊದಲ ಎರಡೂ ಪಂದ್ಯಗಳನ್ನೂ ಗೆದ್ದುಕೊಳ್ಳುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿದೆ. ಆಗಸ್ಟ್ 6ರ ಮಂಗಳವಾರ ಭಾರತ-ವಿಂಡೀಸ್ ನಡುವಿನ 3ನೇ ಮತ್ತು ಕೊನೆಯ ಪಂದ್ಯ ನಡೆಯಲಿದೆ.

ಅಂತಾರಾಷ್ಟ್ರೀಯ ಟಿ20: ಹಿಟ್‌ಮ್ಯಾನ್‌ ಮುಡಿಗೆ ಸಿಕ್ಸರ್‌ಗಳ ವಿಶ್ವದಾಖಲೆ!ಅಂತಾರಾಷ್ಟ್ರೀಯ ಟಿ20: ಹಿಟ್‌ಮ್ಯಾನ್‌ ಮುಡಿಗೆ ಸಿಕ್ಸರ್‌ಗಳ ವಿಶ್ವದಾಖಲೆ!

ಭಾನುವಾರ (ಆಗಸ್ಟ್ 4) ದ್ವಿತೀಯ ಪಂದ್ಯದಲ್ಲಿ ಭಾರತ 24 ರನ್ ಗಳ ಜಯ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಗಳಿಸಿತ್ತು. ಈಗಾಗಲೇ ವಿರಾಟ್ ಕೊಹ್ಲಿ ನೀಡಿರುವ ಸುಳಿವಿನ ಪ್ರಕಾರ ಗಯಾನಾದ ಪ್ರಾವಿಡೆನ್ಸ್‌ನಲ್ಲಿ ನಡೆಯುವ ಪಂದ್ಯದಲ್ಲಿ ಆಡುವ 11ರಲ್ಲಿ ಕೆಲ ಬದಲಾವಣೆಗಳಾಗಲಿವೆ.

ಗ್ಲೋಬಲ್‌ ಟಿ20 ಕ್ರಿಕೆಟ್‌ ಕೆನಡಾದಲ್ಲಿ ಯುವರಾಜ್‌ 'ಸಿಂಗ್‌ ಈಸ್‌ ಕಿಂಗ್‌'ಗ್ಲೋಬಲ್‌ ಟಿ20 ಕ್ರಿಕೆಟ್‌ ಕೆನಡಾದಲ್ಲಿ ಯುವರಾಜ್‌ 'ಸಿಂಗ್‌ ಈಸ್‌ ಕಿಂಗ್‌'

ವೆಸ್ಟ್ ಇಂಡೀಸ್ ವಿರುದ್ಧ 3ನೇ ಮತ್ತು ಕೊನೆಯ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಇಂತಿದೆ.

1. ರೋಹಿತ್ ಶರ್ಮಾ

1. ರೋಹಿತ್ ಶರ್ಮಾ

ಕೆರಿಬಿಯನ್ನರ ವಿರುದ್ಧದ ಆರಂಭಿಕ ಎರಡೂ ಟಿ20 ಪಂದ್ಯಗಳಲ್ಲಿ ಓಪನರ್, ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಎರಡರಲ್ಲೂ ರೋಹಿತ್ ಅವರದ್ದೇ ಹೆಚ್ಚಿನ ರನ್. ಮೊದಲ ಪಂದ್ಯದಲ್ಲಿ 24, ಎರಡನೇ ಪಂದ್ಯದಲ್ಲಿ 67 ರನ್ ಕೊಡುಗೆ ಶರ್ಮಾ ಅವರಿಂದ ಲಭಿಸಿತ್ತು.

2. ಶಿಖರ್ ಧವನ್

2. ಶಿಖರ್ ಧವನ್

ಆರಂಭಿಕ ಪಂದ್ಯದಲ್ಲಿ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದ್ದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್, ದ್ವಿತೀಯ ಪಂದ್ಯದಲ್ಲಿ ಕೊಂಚ ಸುಧಾರಣೆ ಕಂಡಿದ್ದರು. 23 ರನ್ ಗಳಿಸಿದ್ದರು. 3ನೇ ಪಂದ್ಯದಲ್ಲಿ ಆರಂಭಿಕ ಆಟಗಾರರಲ್ಲಿ ಯಾವುದೇ ಬದಲಾವಣೆಯಿಲ್ಲ. ರೋಹಿತ್-ಧವನ್ ಜೋಡಿಯೇ ಮುಂದುವರೆಯಲಿದೆ.

3. ವಿರಾಟ್ ಕೊಹ್ಲಿ

3. ವಿರಾಟ್ ಕೊಹ್ಲಿ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಮುಕ್ತಾಯಗೊಂಡ ಎರಡೂ ಪಂದ್ಯಗಳಲ್ಲೂ ಗಮನಾರ್ಹ ಬ್ಯಾಟಿಂಗ್ ಏನೂ ತೋರಿಸಿಲ್ಲ. ಎರಡು ಪಂದ್ಯಗಳಲ್ಲಿ ಕೊಹ್ಲಿ ಕ್ರಮವಾಗಿ 19, 28 ರನ್ ಬಾರಿಸಿದ್ದರು. ಕೊನೆಯ ಪಂದ್ಯದಲ್ಲೂ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬರಲಿದ್ದಾರೆ.

4. ರಿಷಬ್ ಪಂತ್

4. ರಿಷಬ್ ಪಂತ್

ಪ್ರತೀ ಟೂರ್ನಿಯಲ್ಲೂ ಭಾರತದ ತಂಡದಲ್ಲಿ ರಿಷಬ್ ಪಂತ್ ಇದ್ದರೆ ಅದೇನೋ ಕುತೂಹಲ. ಸಿಕ್ಕ ಅವಕಾಶವನ್ನು ಆತ ಹೇಗೆ ಬಳಸಿಕೊಳ್ಳಬಹುದು ನೋಡಬೇಕು ಅನ್ನೋರು ಹೆಚ್ಚು. ಆದರೆ ಎರಡೂ ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ರಿಷಬ್ ಬೇಜಾವಾಬ್ದಾರಿಯ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದರು. ಮೊದಲ ಪಂದ್ಯದಲ್ಲಿ 0, 2ನೇ ಪಂದ್ಯದಲ್ಲಿ 4 ರನ್ ಪಂತ್‌ ಅವರಿಂದ ಲಭಿಸಿತ್ತು.

5. ಶ್ರೇಯಸ್ ಐಯ್ಯರ್/ಕೆಎಲ್ ರಾಹುಲ್

5. ಶ್ರೇಯಸ್ ಐಯ್ಯರ್/ಕೆಎಲ್ ರಾಹುಲ್

ಎರಡೂ ಟಿ20ಗಳಲ್ಲಿ ತಂಡದಲ್ಲಿ ಕಾಣಿಸಿಕೊಳ್ಳದಿದ್ದ ಶ್ರೇಯಸ್ ಐಯ್ಯರ್, ಅಂತಿಮ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಹಿಂದಿನ ಪಂದ್ಯಗಳಲ್ಲಿ ಮನೀಷ್ ಪಾಂಡೆ ಆಡಿದ್ದರು. ಕನ್ನಡಿಗ ಕೆಎಲ್ ರಾಹುಲ್ ಕೂಡ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

6. ರವೀಂದ್ರ ಜಡೇಜಾ

6. ರವೀಂದ್ರ ಜಡೇಜಾ

ಹಿಂದಿನ ಪಂದ್ಯಗಳಲ್ಲೂ ಜಡೇಜಾ ಉತ್ತಮ ಆಟ ಪ್ರದರ್ಶಿಸಿದ್ದರು. ಕೊನೇ ಕ್ಷಣದಲ್ಲಿ ಬ್ಯಾಟ್ ಎತ್ತಿಕೊಂಡಿದ್ದರಿಂದ ಬ್ಯಾಟಿಂಗ್‌ನಲ್ಲಿ ಮಿಂಚಲು ಅವಕಾಶ ಲಭಿಸದಿದ್ದರೂ ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಜಡೇಜಾ ಗಮನ ಸೆಳೆದಿದ್ದರು. ಕೊನೇ ಪಂದ್ಯದಲ್ಲಿ ಆಲ್ ರೌಂಡರ್ ಅವರನ್ನು 6ನೇ ಕ್ರಮಾಂದಲ್ಲಿ ನಿರೀಕ್ಷಿಸಬಹುದು.

7. ಕೃಣಾಲ್ ಪಾಂಡ್ಯ

7. ಕೃಣಾಲ್ ಪಾಂಡ್ಯ

ತಂಡದ ಮತ್ತೊಬ್ಬ ಆಲ್ ರೌಂಡರ್ ಕೃನಾಲ್ ಪಾಂಡ್ಯ ಕೂಡ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ 3ನೇ ಪಂದ್ಯದಲ್ಲೂ ಕೃಣಾಲ್ ಮೈದಾನಕ್ಕಿಳಿಯುವುದನ್ನು ನಿರೀಕ್ಷಿಸಲಾಗಿದೆ.

8. ವಾಷಿಂಗ್ಟನ್ ಸುಂದರ್

8. ವಾಷಿಂಗ್ಟನ್ ಸುಂದರ್

ಕೊಟ್ಟ ಅವಕಾಶವನ್ನು ವಾಷಿಂಗ್ಟನ್ ಸುಂದರ್ ಉತ್ತಮವಾಗಿ ಬಳಸಿಕೊಂಡಿದ್ದಾರೆ. ಆರಂಭಿಕ ಪಂದ್ಯದಲ್ಲಿ ಜಾನ್ ಕ್ಯಾಂಪ್‌ಬೆಲ್ ವಿಕೆಟ್ ಮತ್ತು ದ್ವಿತೀಯ ಪಂದ್ಯದಲ್ಲಿ ಸುನಿಲ್ ನರೈನ್ ವಿಕೆಟ್ ಕೆಡವಿ ಸುಂದರ್ ಪ್ರಭಾವ ಬೀರಿದ್ದರು. ಹೀಗಾಗಿ ಮೂರನೇ ಪಂದ್ಯದಲ್ಲೂ ವಾಷಿಂಗ್ಟನ್ ಮುಂದುವರೆಯುವ ನಿರೀಕ್ಷೆಯಿದೆ.

9. ಭುವನೇಶ್ವರ್ ಕುಮಾರ್

9. ಭುವನೇಶ್ವರ್ ಕುಮಾರ್

ಜಸ್‌ಪ್ರೀತ್‌ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ತಂಡಕ್ಕೆ ವೇಗದ ಬೌಲಿಂಗ್ ಬೆಂಬಲದ ಜವಾಬ್ದಾರಿ ಹೊತ್ತಿರುವ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಎರಡೂ ಪಂದ್ಯಗಳಲ್ಲೂ ತಂಡದ ಗೆಲುವಿಗೆ ವೇಗಿಗಳ ಕೊಡುಗೆ ಮಹತ್ವದ್ದಾಗಿತ್ತು.

10. ದೀಪಕ್ ಚಾಹರ್/ರಾಹುಲ್ ಚಾಹರ್

10. ದೀಪಕ್ ಚಾಹರ್/ರಾಹುಲ್ ಚಾಹರ್

2019ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಬೌಲರ್ ದೀಪಕ್ ಚಾಹರ್ ಗಮನ ಸೆಳೆದಿದ್ದರು. ಅಂತಿಮ ಪಂದ್ಯದಲ್ಲಿ ಹೊಸಬರಿಗೆ ಅವಕಾಶ ಕೊಟ್ಟು ನೋಡುವ ಯೋಜನೆಯಲ್ಲಿ ತಂಡ ನಿರ್ವಹಣಾ ಸಮಿತಿಯಿರುವುದರಿಂದ ಗಯಾನ ಪಂದ್ಯದಲ್ಲಿ ರಾಹುಲ್ ಚಾಹರ್ ಅಥವಾ ದೀಪಕ್ ಚಾಹರ್ ಕಾಣಿಸಿಕೊಳ್ಳಬಹುದು.

11. ಕೆ ಖಲೀಲ್ ಅಹ್ಮದ್

11. ಕೆ ಖಲೀಲ್ ಅಹ್ಮದ್

ಎರಡೂ ಟಿ20 ಪಂದ್ಯಗಳು ಸೇರಿ ಎಡಗೈ ವೇಗಿ ಕೆ ಖಲೀಲ್ ಅಹ್ಮದ್‌ಗೆ 1 ವಿಕೆಟ್ ಲಭಿಸಿತ್ತು. ಆದರೂ 3ನೇ ಪಂದ್ಯದಲ್ಲೂ ಖಲೀಲ್ ಮೈದಾನಕ್ಕಿಳಿಯು ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಸ್ಪಿನ್‌ನತ್ತ ಯೋಚಿಸುವ ಬದಲು ತಂಡ ನಿರ್ವಹಣಾ ಸಮಿತಿ ವೇಗಿಯತ್ತಲೇ ಯೋಚಿಸುವುದು ನಿರೀಕ್ಷಿತ.

Story first published: Monday, August 5, 2019, 15:48 [IST]
Other articles published on Aug 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X