ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್ : 5 ಅವಿಸ್ಮರಣೀಯ ಟೆಸ್ಟ್ ಪಂದ್ಯಗಳು

India vs West Indies: 5 most memorable Test matches

ಬೆಂಗಳೂರು, ಅಕ್ಟೋಬರ್ 3: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಅಕ್ಟೋಬರ್ 4ರಂದು ರಾಜ್‌ಕೋಟ್ ನಲ್ಲಿ ಮುಖಾಮುಖಿಯಾಗಲಿವೆ. ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿರುವ ಇತ್ತಂಡಗಳ ಕಾದಾಟ ಮತ್ತೆ ಕುತೂಹಲ ಮೂಡಿಸಿದೆ.

ಕ್ರಿಕೆಟ್: ತಂಡಕ್ಕೆ ಆಯ್ಕೆಯಾದರೂ ಮಯಾಂಕ್‌ಗೆ ಆಡುವ ಅವಕಾಶವಿಲ್ಲಕ್ರಿಕೆಟ್: ತಂಡಕ್ಕೆ ಆಯ್ಕೆಯಾದರೂ ಮಯಾಂಕ್‌ಗೆ ಆಡುವ ಅವಕಾಶವಿಲ್ಲ

ವಿಂಡೀಸ್ ಆಟಗಾರರ ಸವಾಲು ಸ್ವೀಕರಿಸಲು ಭಾರತ ಆಟಗಾರರು ಸಜ್ಜಾಗಿದ್ದಾರೆ. ತಂಡದಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಿವೆ. ಮೂವರು ಆಟಗಾರರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವುದರಲ್ಲಿದ್ದಾರೆ.

'ವಿಹಾರಿ, ಪೃಥ್ವಿ, ಮಯಾಂಕ್ ತಂಡದಲ್ಲಿ ಹೆಚ್ಚು ಕಾಲ ಉಳಿಯುವಂತಾಗಬೇಕು''ವಿಹಾರಿ, ಪೃಥ್ವಿ, ಮಯಾಂಕ್ ತಂಡದಲ್ಲಿ ಹೆಚ್ಚು ಕಾಲ ಉಳಿಯುವಂತಾಗಬೇಕು'

ಮೊಹಮ್ಮದ್ ಸಿರಾಜ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್ ಈ ಮೂವರೂ ವಿಂಡೀಸ್ ಟೆಸ್ಟ್ ಸರಣಿ ಮೂಲಕ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಗೆ ಬರುವುದರಲ್ಲಿದ್ದಾರೆ. ಮೊದಲ ಟೆಸ್ಟ್ ನಲ್ಲಿ ಶಾಗೆ ಅವಕಾಶ ದೊರೆತಿದ್ದರೂ ಎರಡನೇ ಟೆಸ್ಟ್ ನಲ್ಲಿ ಮಯಾಂಕ್, ಸಿರಾಜ್ ಗೆ ಅವಕಾಶ ಸಿಗುವ ನಿರಿಕ್ಷೆಯಿದೆ.

ಈ ಹಿಂದಿನ ಭಾರತ-ವೆಸ್ಟ್ ಇಂಡೀಸ್ ಮುಖಾಮುಖಿ ಸಾಕಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಿದೆ. ಅವುಗಳಲ್ಲಿ ಕೆಲವು ಇಲ್ಲಿವೆ.

1971 ಕಿಂಗ್ಸ್ಟನ್, ಜಮೈಕಾ

1971 ಕಿಂಗ್ಸ್ಟನ್, ಜಮೈಕಾ

1971ರಲ್ಲಿ ನಡೆದಿದ್ದ ಈ ಪಂದ್ಯ ಮೂರು ಇನ್ನಿಂಗ್ಸ್ ಗಳೊಂದಿಗೆ ಡ್ರಾದಿಂದ ಅಂತ್ಯಗೊಂಡಿತ್ತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ 387 ರನ್ ಗಳಿಸಿತ್ತು. ವಿಂಡೀಸ್ 217 ರನ್ನಿಗೆ ಪ್ರಥಮ ಇನ್ನಿಂಗ್ಸ್ ಇನ್ನಿಂಗ್ಸ್ ಮುಗಿಸಿ ದ್ವಿತೀಯ ಇನ್ನಿಂಗ್ಸ್ ಗೆ ಇಳಿಯಿತು. ಆದರೆ ವಿಂಡೀಸ್ ದ್ವಿತೀಯ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಳೆದು 385 ರನ್ ಪೇರಸಿದಿದ್ದರಿಂದ ಪಂದ್ಯ ಡ್ರಾಗೊಂಡಿತು.

1997, ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್

1997, ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್

ಬಾರ್ಬಡೋಸ್ ನ ಕೆನ್ಸಿಂಗ್ಟನ್ ಓವಲ್ ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 298 ರನ್ ಪೇರಿಸಿತ್ತು. ಭಾರತ ತಂಡ ಸಚಿನ್ ತೆಂಡೂಲ್ಕರ್ (92), ರಾಹುಲ್ ದ್ರಾವಿಡ್ (78) ರನ್ ನೆರವಿನೊಂದಿಗೆ 319 ರನ್ ಪೇರಿಸಿತ್ತು. ದ್ವಿತೀಯ ಇನ್ನಿಂಗ್ಸ್ ನಲ್ಲಿ ವಿಂಡೀಸ್ 140 ರನ್ ಪೇರಿಸಿದರೆ, ಭಾರತ 35.5 ಓವರ್ ಗೆ 81 ರನ್ ಪೇರಿಸಿ ಶರಣಾಗಿತ್ತು.

2002, ಸೇಂಟ್ ಜಾನ್ಸ್, ಆಂಟಿಗುವಾ

2002, ಸೇಂಟ್ ಜಾನ್ಸ್, ಆಂಟಿಗುವಾ

ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟಿದ್ದ ಭಾರತ 196 ಓವರ್ ಗೆ 9 ವಿಕೆಟ್ ಕಳೆದು 513 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ದ್ರಾವಿಡ್ 91, ಲಕ್ಷ್ಮಣ್ 130, ಅಜಯ್ ರಾತ್ರಾ ಅಜೇಯ 115 ರನ್ ಪೇರಿಸಿದ್ದರು. ವಿಂಡೀಸ್ 9 ವಿಕೆಟ್ ಕಳೆದು 629 ರನ್ ಪೇರಿಸಿ ಡಿಕ್ಲೇರ್ ಘೋಷಿಸಿದ್ದರಿಂದ ಈ ಪಂದ್ಯ ಡ್ರಾದೊಂದಿಗೆ ಮುಗಿದಿತ್ತು.

2011, ಮುಂಬೈನ ವಾಂಖೇಡೆ ಕ್ರೀಡಾಂಗಣ

2011, ಮುಂಬೈನ ವಾಂಖೇಡೆ ಕ್ರೀಡಾಂಗಣ

ಟಾಸ್ ಗೆದ್ದ ವಿಂಡೀಸ್ 590 ರನ್ ಪೇರಿಸಿತ್ತು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 482 ರನ್ನಿಗೆ ಆಲೌಟ್ ಆಯ್ತು. ದ್ವಿತೀಯ ಇನ್ನಿಂಗ್ಸ್ ನಲ್ಲಿ ವಿಂಡೀಸ್ 134 ರನ್ನಿಗೆ ಆಲೌಟ್ ಆದರೆ ಭಾರತ 9 ವಿಕೆಟ್ ಕಳೆದು 242 ರನ್ ಪೇರಿಸಿ ಪಂದ್ಯ ಡ್ರಾಗೊಳಿಸಿಕೊಂಡಿತ್ತು. ಅಶ್ವಿನ್ 5+4 ವಿಕೆಟ್ ನೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು.

2013, ಕೋಲ್ಕತಾ ಮತ್ತು ಮುಂಬೈ

2013, ಕೋಲ್ಕತಾ ಮತ್ತು ಮುಂಬೈ

ಭಾರತ ಈ ಪಂದ್ಯದಲ್ಲಿ ಭಾರತ 126 ರನ್ ಜಯ ಸಾಧಿಸಿತ್ತು. ಇದಕ್ಕೂ ಹೆಚ್ಚಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು ಇದೇ ಪಂದ್ಯದ ಬಳಿಕ.

Story first published: Wednesday, October 3, 2018, 20:29 [IST]
Other articles published on Oct 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X