ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್ ಕೊನೆಯ ಪಂದ್ಯ: ಗೆದ್ದರೆ ಟ್ರೋಫಿ ಭಾರತದ ಮಡಿಲಿಗೆ

India vs West Indies 5th ODI: Preview, timing, where to watch, team strategy

ತಿರುವನಂತಪುರ, ಅಕ್ಟೋಬರ್ 31: ಮುಂಬೈ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡಿರುವ ಭಾರತ, ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿದೆ.

ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯ ನಡೆಯಲಿದೆ. ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿರುವ ಭಾರತ ಟ್ರೋಫಿ ಪಡೆದುಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕು.

 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಗೆ ಧೋನಿ ಸಹಾಯ ಬೇಕು: ಗವಾಸ್ಕರ್ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಗೆ ಧೋನಿ ಸಹಾಯ ಬೇಕು: ಗವಾಸ್ಕರ್

ಒಂದು ಟೈ ಮತ್ತು ಒಂದು ಗೆಲುವು ಕಂಡಿರುವ ವೆಸ್ಟ್ ಇಂಡೀಸ್, ಸರಣಿ ಕೈತಪ್ಪಿಹೋಗದಂತೆ ಸಮಬಲ ಸಾಧಿಸುವ ಗುರಿ ಹೊಂದಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆತ್ಮವಿಶ್ವಾಸದಿಂದ ಆಡಲು ಉಭಯ ತಂಡಗಳಿಗೆ ಈ ಗೆಲುವು ಮುಖ್ಯವಾಗಿದೆ.

ನಾಲ್ಕನೆಯ ಪಂದ್ಯದಲ್ಲಿ 224 ರನ್‌ಗಳ ಭಾರಿ ಗೆಲುವು ಕಂಡಿರುವ ಭಾರತ, ಅತ್ಯುತ್ಸಾಹದಲ್ಲಿದೆ. ಈ ಪಂದ್ಯದಲ್ಲಿ ಕೆರಿಬಿಯನ್ನರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ವಿಫಲರಾಗಿದ್ದರು.

ಭಾರತ Vs ವೆಸ್ಟ್ ಇಂಡೀಸ್: ಹಲವು ಹೊಸ ದಾಖಲೆಗಳನ್ನು ಬರೆದ ಭಾರತಭಾರತ Vs ವೆಸ್ಟ್ ಇಂಡೀಸ್: ಹಲವು ಹೊಸ ದಾಖಲೆಗಳನ್ನು ಬರೆದ ಭಾರತ

ಆದರೆ, ವಿಂಡೀಸ್‌ನ ಬಲವನ್ನು ಕಡೆಗಣಿಸಲು ಸಾಧ್ಯವಿಲ್ಲ. ಇದಕ್ಕೆ ವಿಶಾಖಪಟ್ಟಣಂ ಪಂದ್ಯದ ಟೈ ಮತ್ತು ಪುಣೆಯ ಪಂದ್ಯದ ಗೆಲುವು ಸಾಕ್ಷಿ. ಸೋಲಿನಿಂದ ಮೇಲೇಳುವ ಎಲ್ಲ ಸಾಮರ್ಥ್ಯವನ್ನೂ ವಿಂಡೀಸ್ ಹೊಂದಿದೆ.

ಧವನ್ ವೈಫಲ್ಯ

ಧವನ್ ವೈಫಲ್ಯ

ಶಿಖರ್ ಧವನ್ ಫಾರ್ಮ್ ಭಾರತಕ್ಕೆ ಚಿಂತೆಯಾಗಿದೆ. ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗುತ್ತಿದ್ದಾರೆ.

ರೋಹಿತ್ ಶರ್ಮಾ ಎಂದಿನ ಲಯದಲ್ಲಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಮೂರಲ್ಲಿ ಶತಕ ಬಾರಿಸಿರುವ ಕೊಹ್ಲಿ, ನಾಲ್ಕನೆಯ ಕ್ರಮಾಂಕದ ಕೊರತೆಯ ತಲೆನೋವನ್ನು ಕಡಿಮೆ ಮಾಡಿರುವ ಅಂಬಟಿ ರಾಯುಡು ಭಾರತದ ಬಲ ಹೆಚ್ಚಿಸಿದ್ದಾರೆ.

ವಿಕೆಟ್ ಕೀಪರ್ ಎಂಎಸ್ ಧೋನಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರಿಂದ ದೊಡ್ಡ ಇನ್ನಿಂಗ್ಸ್ ಕಂಡುಬರುತ್ತಿಲ್ಲ.

ದುಬಾರಿಯಾಗುತ್ತಿರುವ ಭುವನೇಶ್ವರ್

ಇನ್ನು ಬೌಲಿಂಗ್ ವಿಭಾಗದಲ್ಲಿ ಜಸ್ ಪ್ರೀತ್ ಬೂಮ್ರಾ ಪ್ರಮುಖ ಶಕ್ತಿಯಾಗಿದ್ದಾರೆ. ಕಳೆದ ಪಂದ್ಯದಲ್ಲಿ ಮಿಂಚಿರುವ ಖಲೀಲ್ ಅಹ್ಮದ್ ಕೂಡ ಭರವಸೆ ಮೂಡಿಸಿದ್ದಾರೆ. ಆದರೆ, ಭುವನೇಶ್ವರ್ ಕುಮಾರ್ ಹೆಚ್ಚು ರನ್‌ಗಳನ್ನು ಬಿಟ್ಟುಕೊಡುತ್ತಿದ್ದಾರೆ. ಹಳೆಯ ಫಾರ್ಮ್‌ಗೆ ಅವರು ಮರಳಿದರೆ ಬೌಲಿಂಗ್ ಪಡೆ ಇನ್ನಷ್ಟು ಬಲಗೊಳ್ಳಲಿದೆ.

ಸ್ಪಿನ್ ವಿಭಾಗದಲ್ಲಿಯೂ ಭಾರತಕ್ಕೆ ಸಮಸ್ಯೆಯಿಲ್ಲ. ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ರವೀಂದ್ರ ಜಡೇಜಾ ಅವರ ಜತೆಗೆ ಕೇದಾರ್ ಜಾಧವ್ ಕೊಡುಗೆಯೂ ಸಿಗಲಿದೆ.

ಮಿಂಚಿನ ವೇಗದಲ್ಲಿ ಸ್ಟಂಪಿಂಗ್, ಧೋನಿಗೆ ಸರಿಸಾಟಿ ಯಾರು ಇಲ್ಲ!

ಸ್ಥಿರ ಪ್ರದರ್ಶನದ ಕೊರತೆ

ಸ್ಥಿರ ಪ್ರದರ್ಶನದ ಕೊರತೆ

ವೆಸ್ಟ್ ಇಂಡೀಸ್‌ಗೆ ಆಕ್ರಮಣಕಾರಿ ಆಟದ ಮನೋಭಾವವೇ ಮುಳುವಾಗುತ್ತಿದೆ. ಶಾಯ್ ಹೋಪ್, ಶಿಮ್ರೊನ್ ಹೆಟ್ಮೇರ್, ಪೊವೆಲ್ ಅವರಂತಹ ಆಟಗಾರರು ಬಿರುಸಿನ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಹಿರಿಯ ಆಟಗಾರ ಮರ್ಲನ್ ಸ್ಯಾಮ್ಯುಯೆಲ್ಸ್ ನಿರೀಕ್ಷೆಯಂತೆ ಆಡುತ್ತಿಲ್ಲ. ಸ್ಥಿರ ಪ್ರದರ್ಶನ ಕಾಣದ ಕಾರಣ ನಾಯಕ ಜೇಸನ್ ಹೋಲ್ಡರ್ ಮೇಲಿನ ಜವಾಬ್ದಾರಿ ಹೆಚ್ಚಿದೆ.

ಒಂದೇ ಪಂದ್ಯದ ಇತಿಹಾಸ

ಒಂದೇ ಪಂದ್ಯದ ಇತಿಹಾಸ

ಗ್ರೀನ್‌ಫೀಲ್ಡ್ ಅಂಗಳದಲ್ಲಿ ಇದುವರೆಗೆ ನಡೆದಿರುವುದು ಒಂದೇ ಒಂದು ಪಂದ್ಯ. 2017ರ ನವೆಂಬರ್ 7ರಂದು ನ್ಯೂಜಿಲೆಂಡ್ ಮತ್ತು ಭಾರತದ ನಡುವೆ ಏಕೈಕ ಟಿ20 ಪಂದ್ಯ ನಡೆದಿತ್ತು. ಮಳೆಯ ಕಾಟಕ್ಕೆ ಒಳಗಾಗಿದ್ದ ಪಂದ್ಯದಲ್ಲಿ ಆತಿಥೇಯ ತಂಡ ಆರು ರನ್‌ಗಳಿಂದ ಗೆಲುವು ಸಾಧಿಸಿತ್ತು. 31 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದರಿಂದ ಬಿಸಿಲಿನ ಧಗೆ ಆಟಗಾರರನ್ನು ಕಾಡಲಿದೆ.

ರಾಹುಲ್ ಜೋಹ್ರಿ ವಿರುದ್ಧ ಮೀಟೂ ಆರೋಪ: ಸಿಒಎ ಮೇಲೆ ಸಿಡುಕಿದ ಗಂಗೂಲಿ

ಹಳೆಯ ಪಂದ್ಯದ ನೆನಪು

ಹಳೆಯ ಪಂದ್ಯದ ನೆನಪು

ಕೇರಳದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳು ಈ ಹಿಂದೆ ಒಂದು ಪಂದ್ಯ ಆಡಿದ್ದವು. ಭಾರತ-ವೆಸ್ಟ್ ಇಂಡೀಸ್ ನಡುವಿನ ಏಳನೇ ಏಕದಿನ ಪಂದ್ಯ 1988ರಲ್ಲಿ ಎಂ ಚಂದ್ರಶೇಖರನ್ ನಾಯರ್ ಕ್ರೀಡಾಂಗಣದಲ್ಲಿ ನಡೆದಿತ್ತು. ಅದರಲ್ಲಿ ಕೆರಿಬಿಯನ್ನರು 9 ವಿಕೆಟ್‌ಗಳಿಂದ ಗೆಲುವು ಸಾಧಿಸಿದ್ದರು.

ಕೆ. ಶ್ರೀಕಾಂತ್ ಅವರ ಶತಕ (101) ಮತ್ತು ಮೊಹಿಂದರ್ ಅಮರನಾಥ್ ಅವರ ಅರ್ಧ ಶತಕದ (56) ನೆರವಿನಿಂದ ಭಾರತ 8 ವಿಕೆಟ್ ಕಳೆದುಕೊಂಡು 239 ರನ್ ಗಳಿಸಿತ್ತು. ಆದರೆ ಈ ಮೊತ್ತವನ್ನು ವಿಂಡೀಸ್ ಕೇವಲ 42.5 ಓವರ್‌ಗಳಲ್ಲಿ ಒಂದು ವಿಕೆಟ್ ಮಾತ್ರ ಕಳೆದುಕೊಂಡು ತಲುಪಿತ್ತು.

ಪಂದ್ಯದ ವಿವರ

ಪಂದ್ಯದ ವಿವರ

ಭಾರತ vs ವೆಸ್ಟ್ ಇಂಡೀಸ್ 5ನೇ ಏಕದಿನ
ಸ್ಥಳ: ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರ
ಸಮಯ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್

Story first published: Wednesday, October 31, 2018, 13:43 [IST]
Other articles published on Oct 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X