ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಸಾಧನೆಯನ್ನು ಹೊಗಳಿದ ಆಡಂ ಗಿಲ್ ಕ್ರಿಸ್ಟ್

By Mahesh

ಆಂಟಿಗುವಾ, ಜುಲೈ 05 : ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಡಂ ಗಿಲ್ ಕ್ರಿಸ್ಟ್ ಅವರು ತಮ್ಮ ದಾಖಲೆ ಮುರಿದ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಾಡಿ ಹೊಗಳಿದ್ದಾರೆ.

ಧೋನಿ 'ಸ್ಲೋ ಫಿಫ್ಟಿ' ದಾಖಲೆಧೋನಿ 'ಸ್ಲೋ ಫಿಫ್ಟಿ' ದಾಖಲೆ

ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 114 ಎಸೆತಗಳಲ್ಲಿ 54ರನ್ ಗಳಿಸಿದ ಧೋನಿ ಅವರು ತಮ್ಮ ವೃತ್ತಿ ಬದುಕಿನ ಅತ್ಯಂತ ನಿಧಾನಗತಿಯ ಅರ್ಧಶತಕ ಬಾರಿಸಿದ್ದರು. ಆದರೆ, ಟೀಂ ಇಂಡಿಯಾ, ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿತ್ತು.

ಆದರೆ, ಈ ಅರ್ಧಶತಕದ ಮೂಲಕ ಗಿಲ್ ಕ್ರಿಸ್ಟ್ ದಾಖಲೆಯನ್ನು ಧೋನಿ ಅವರು ಮುರಿದಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ 64ನೇ ಏಕದಿನ ಕ್ರಿಕೆಟ್ ಅರ್ಧಶತಕ ಬಾರಿಸಿದ ಧೋನಿ ಅವರು ಹಾಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗಳ ಪೈಕಿ ಅತ್ಯಧಿಕ ರನ್ ಗಳಿಸಿರುವ ಆಟಗಾರ ಎನಿಸಿಕೊಂಡರು.

ಸಾರ್ವಕಾಲಿಕ ರನ್ ಗಳಿಕೆ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಡಂ ಗಿಲ್ ಕ್ರಿಸ್ಟ್ ರನ್ನು ಹಿಂದಿಕ್ಕಿದರು. ಈ ಸಾಧನೆ ಕಂಡು ಗಿಲ್ ಕ್ರಿಸ್ಟ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಧೋನಿ ಜತೆಗಿನ ಹಳೆ ಫೋಟೊವೊಂದನ್ನು ಹಂಚಿಕೊಂಡು ಶುಭ ಹಾರೈಸಿದ್ದಾರೆ.

ರನ್ ಗಳಿಕೆಯಲ್ಲಿ ಮುಂದೆ

ರನ್ ಗಳಿಕೆಯಲ್ಲಿ ಮುಂದೆ

ಏಕದಿನ ಕ್ರಿಕೆಟ್ ನಲ್ಲಿ ಆಡಂ ಗಿಲ್ ಕ್ರಿಸ್ಟ್ ಅವರು 9410ರನ್ ಗಳಿಸಿದ್ದಾರೆ. ಎಂಎಸ್ ಧೋನಿ ಅವರು ಈಗ 9496ರನ್ ಗಳಿಸಿ, ಅತ್ಯಧಿಕ ರನ್ ಗಳಿಕೆ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾದ ಮಾಜಿ ಆಟಗಾರ ಕುಮಾರ್ ಸಂಗಕ್ಕಾರ ಅವರಿದ್ದು, 13,341ರನ್ ಗಳಿಸಿದ್ದಾರೆ.

ಧೋನಿ ಹೊಗಳಿದ ಗಿಲ್ ಕ್ರಿಸ್ಟ್

ಆಡಂ ಗಿಲ್ ಕಿಸ್ಟ್ ಅವರು ಧೋನಿ ಅವರ ಸಾಧನೆಯನ್ನು ಹೊಗಳಿದ್ದಾರೆ. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ಹಾಗೂ ಕಿಂಗ್ಸ್ ಎಲೆವನ್ ಪಂಜಾಬ್ ಪರ ಗಿಲ್ ಕ್ರಿಸ್ಟ್ ಅವರು ಟಾಸ್ ಗಾಗಿ ಮೈದಾನದಲ್ಲಿ ನಿಂತಿರುವ ಹಳೆ ಚಿತ್ರವನ್ನು ಗಿಲ್ ಕ್ರಿಸ್ಟ್ ಅವರು ಇನ್ ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡು,Congrats on passing me young fella. Was always a matter of time ಎಂದಿದ್ದಾರೆ.

ವಿಕೆಟ್ ಕೀಪರ್ ಆಗಿ ಧೋನಿ

ವಿಕೆಟ್ ಕೀಪರ್ ಆಗಿ ಧೋನಿ

ವಿಕೆಟ್ ಕೀಪರ್ ಆಗಿ ಧೋನಿ ಅವರು 97 ವಿಕೆಟ್ ಪಡೆದಿದ್ದಾರೆ. ಸಂಗಕ್ಕಾರ 99 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಗಳಿಸಿದ ವಿಕೆಟ್ ಕೀಪರ್ ಎಂಬ ದಾಖಲೆ ಹೊಂದಿದ್ದಾರೆ.

ಭಾರತದ ಪರ ಅತ್ಯಧಿಕ ರನ್ ಗಳಿಕೆ ಪಟ್ಟಿಯಲ್ಲಿ ಧೋನಿ ಅವರು ಈಗ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಮೊಹಮ್ಮದ್ ಅಜರುದ್ದೀನ್ ಅವರ 9378ರನ್ ಗಡಿ ದಾಟಿರುವ ಧೋನಿ ಅವರು ಯಶಸ್ವಿ ಬ್ಯಾಟ್ಸ್ ಮನ್ ಆಗಿ ಕೂಡಾ ಮಿಂಚುತ್ತಿದ್ದಾರೆ.

ಏಕದಿನ ದಾಖಲೆಗಳು

ಏಕದಿನ ದಾಖಲೆಗಳು

ಭಾರತದ ಪರ ಏಕದಿನ ಕ್ರಿಕೆಟ್‌ ನಲ್ಲಿ ಅತಿ ನಿಧಾನವಾಗಿ ಅರ್ಧಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಕುಖ್ಯಾತಿಗೆ ಧೋನಿ ಒಳಗಾಗಿದ್ದಾರೆ. ಮೊದಲ ಸ್ಥಾನದಲ್ಲಿ ಶಡಗೋಪನ್ ರಮೇಶ್‌ ಇದ್ದಾರೆ.108 ಎಸೆತಗಳಲ್ಲಿ 46.30 ಸ್ಟ್ರೈಕ್ ರೇಟ್ ನಂತೆ ಅರ್ಧಶತಕ ಬಾರಿಸಿದ ಧೋನಿ ಕೊನೆಗೆ 114 ಎಸೆತಗಳಲ್ಲಿ 54ರನ್ ಗಳಿಸಿದ್ದರು.ಶಡಗೋಪನ್ ರಮೇಶ್‌ ಅವರು 117 ಎಸೆತಗಳಲ್ಲಿ ಹಾಗೂ ಸೌರವ್ ಗಂಗೂಲಿ 105 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.

ಸಿಕ್ಸರ್ ದಾಖಲೆ

ಸಿಕ್ಸರ್ ದಾಖಲೆ

ಇತ್ತೀಚೆಗೆ 200 ಸಿಕ್ಸರ್ ಸಿಡಿಸಿದ ಧೋನಿ ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟರ್ ಎನಿಸಿಕೊಂಡರು. 35 ವರ್ಷ ವಯಸ್ಸಿನ ಧೋನಿ ಅವರು ಒಟ್ಟಾರೆ 322 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಶಹೀದ್ ಅಫ್ರಿದಿ ಅಗ್ರಸ್ಥಾನದಲ್ಲಿದ್ದು, 476 ಸಿಕ್ಸ್ ಸಿಡಿಸಿದ್ದಾರೆ. ಮಿಕ್ಕಂತೆ ಕ್ರಿಸ್ ಗೇಲ್ 434*, ಬ್ರೆಂಡನ್ ಮೆಕಲಮ್ 398, ಸನತ್ ಜಯಸೂರ್ಯ 352ಸಿಕ್ಸ್ ಬಾರಿಸಿ, ಧೋನಿಗಿಂತ ಮುಂದಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X