ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್ ಸರಣಿಯಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ

India vs West Indies: Due to Covid-19 important changes could be made in limited over series

ಭಾರತ ದಕ್ಷಿಣ ಆಪ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ ಬಳಿಕ ತವರಿಗೆ ವಾಪಾಸಾಗಲಿದ್ದು ಮತ್ತೊಂದು ಪ್ರಮುಖ ಸರಣಿಯನ್ನು ಆಡಲಿದೆ. ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಆರು ಪಂದ್ಯಗಳ ಸೀಮಿತ ಓವರ್‌ಗಳ ಸರಣಿ ಇದಾಗಿದ್ದು ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತವನ್ನು ಎದುರಿಸಲಿದ್ದರೆ ಬಳಿಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ತಂಡ ಮುಖಾಮುಖಿಯಾಗಲಿದೆ.

ಆದರೆ ಭಾರತದಲ್ಲಿ ಈಗ ಕೊರೊನಾವೈರಸ್‌ನ ಮೂರನೇ ಅಲೆ ತೀವ್ರವಾಗಿರುವ ಕಾರಣ ಈ ಸರಣಿಯಲ್ಲಿ ಪ್ರಮುಖ ಬದಲಾವಣೆ ನಡೆಯುವ ಸಾಧ್ಯತೆಯಿದೆ. ಕೊರೊನಾವೈರಸ್‌ನ ಮುನ್ನೆಚ್ಚರಿಕಾ ಕ್ರಮವಾಗಿ ಬಿಸಿಸಿಐ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಸರಣಿಯ ಪಂದ್ಯಗಳು ನಡೆಯುವ ತಾಣದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಆದರೆ ಬಿಸಿಸಿಐ ಈ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಈ ಆರು ಪಂದ್ಯಗಳ ಸರಣಿಯಲ್ಲಿ ವಿಭಿನ್ನ ತಾಣಗಳಲ್ಲಿ ಮುಖಾಮುಖಿಯಾಗಬೇಕಿತ್ತು.

ರಾಜಗೋಪಾಲ್ ಸತೀಶ್‌ಗೆ 40 ಲಕ್ಷ ರೂಪಾಯಿ ಮ್ಯಾಚ್ ಫಿಕ್ಸಿಂಗ್‌ ಆಫರ್: ಬಿಸಿಸಿಐ, ಐಸಿಸಿಗೆ ದೂರುರಾಜಗೋಪಾಲ್ ಸತೀಶ್‌ಗೆ 40 ಲಕ್ಷ ರೂಪಾಯಿ ಮ್ಯಾಚ್ ಫಿಕ್ಸಿಂಗ್‌ ಆಫರ್: ಬಿಸಿಸಿಐ, ಐಸಿಸಿಗೆ ದೂರು

ಆರು ತಾಣಗಳಲ್ಲಿ ಸರಣಿ

ಆರು ತಾಣಗಳಲ್ಲಿ ಸರಣಿ

ಫೆಬ್ರವರಿ 6 ರಿಂದ ಆರಂಭವಾಗಲಿರುವ ಏಕದಿನ ಸರಣಿಯ ಮೊದಲ ಪಂದ್ಯ ಅಹಮದಾಬಾದ್‌ನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಎರಡನೇ ಏಕದಿನ ಪಂದ್ಯ ಫೆಬ್ರವರಿ 9 ರಂದು ಜೈಪುರದಲ್ಲಿ ಮತ್ತು ಮೂರನೇ ಏಕದಿನ ಪಂದ್ಯ ಫೆಬ್ರವರಿ 12 ರಂದು ಕೋಲ್ಕತ್ತಾದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ, ಟಿ20 ಸರಣಿಯ ಪಂದ್ಯಗಳು ಕ್ರಮವಾಗಿ ಕಟಕ್, ವಿಶಾಖಪಟ್ಟಣಂ ಮತ್ತು ತಿರುವನಂತಪುರಂನಲ್ಲಿ ನಡೆಸಲು ನಿರ್ಧಾರವನ್ನು ಮಾಡಲಾಗಿತ್ತು. ಈಗ ಈ ತಾಣಗಳು ಬದಲಾವಣೆಯಾಗುವ ಸಾಧ್ಯತೆಯಿದೆ.

ಸರಣಿಗೆ ಕೋವಿಡ್ ಕಂಟಕ

ಸರಣಿಗೆ ಕೋವಿಡ್ ಕಂಟಕ

ಟೈಮ್ಸ್ ನೌ ವಾಹಿನಿ ಮೂಲಗಳನ್ನು ಉಲ್ಲೇಖಿಸಿ ಮಾಡಿರುವ ವರದಿಯ ಪ್ರಕಾರ ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ ಸೀಮಿತ ಓವರ್‌ಗಳ ಸರಣಿ ನಡೆಯುವುದು ಅನುಮಾನ ಎನ್ನಲಾಗಿದೆ. ಭಾರತದಲ್ಲಿ ಕೊರೊನಾವೈರಸ್‌ನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಈ ಸರಣಿಗೆ ಅಡ್ಡಿಯಾಗಬಹುದು ಎಂದು ವರದಿಯಲ್ಲಿ ಹೇಳಿದೆ.

ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತಾ ಬಿಸಿಸಿಐ

ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತಾ ಬಿಸಿಸಿಐ

ಇನ್ನು ವೆಸ್ಟ್ ಇಮಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯನ್ನು ಮುಂದುವರಿಸಲು ಬಿಸಿಸಿಐ ಮತ್ತೊಂದು ಪ್ರಮುಖ ಆಯ್ಕೆಯನ್ನು ಮುಂದಿಟ್ಟುಕೊಂಡಿದೆ ಎನ್ನಲಾಗಿದೆ. ಈಗಾಗಲೇ ಸರಣಿಯ ಆರು ಪಂದ್ಯಗಳನ್ನು ಆಯೋಜಿಸಲು ನಿಗದಿಪಡಿಸಿರುವ ಆರು ತಾಣಗಳ ಬದಲಾಗಿ ಒಂದೇ ತಾಣದಲ್ಲಿ 6 ಪಂದ್ಯಗಳನ್ನು ನಡೆಸುವ ಚಿಂತನೆಯಲ್ಲಿ ಬಿಸಿಸಿಐ ಇದೆ ಎನ್ನಲಾಗಿದೆ. ಆದರೆ ಈ ಸರಣಿಯ ತಾಣಗಳ ಬದಲಾವಣೆ ಬಗ್ಗೆ ಬಿಸಿಸಿಐ ಈವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಆಗಮಿಸಲು ಇನ್ನು ಕೆಲ ದಿನಗಳ ಸಮಯವಿರುವ ಕಾರಣ ಕಾದು ನೋಡುವ ತಂತ್ರಕ್ಕೆ ಬಿಸಿಸಿಐ ಮೊರೆ ಹೋಗಿದೆ ಎನ್ನಲಾಗಿದೆ.

ವಿಂಡೀಸ್ ಸರಣಿಗೆ ಸಿದ್ಧವಾಗಲಿದ್ದಾರೆ ರೋಹಿತ್

ವಿಂಡೀಸ್ ಸರಣಿಗೆ ಸಿದ್ಧವಾಗಲಿದ್ದಾರೆ ರೋಹಿತ್

ಇನ್ನು ಫಿಟ್‌ನೆಸ್ ಕಾರಣದಿಂದಾಗಿ ದಕ್ಷಿಣ ಆಪ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿರುವ ಭಾರತದ ಸೀಮಿತ ಓವರ್‌ಗಳ ತಂಡದ ನಾಯಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ವೇಳೆಗೆ ಆಡಲು ಸಂಪೂರ್ಣವಾಗಿ ಸಮರ್ಥರಾಗಲಿದ್ದಾರೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಪುನರಾಗಮನದ ನಿರೀಕ್ಷೆಯಿದೆ. ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು ರೋಹಿತ್ ಶರ್ಮಾ ಬೆಂಗಳೂರಿನ ಎನ್‌ಸಿಎನಲ್ಲಿ ಅದ್ಭುತವಾಗಿ ಚೇತರಿಕೆ ಕಾಣುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅವರು ಲಭ್ಯವಾಗುವ ಸಾಧ್ಯತೆಯಿದೆ. ಈ ಸರಣಿಗೆ ಕನಿಷ್ಠ ಮೂರು ವಾರಗಳ ಅಂತರವಿರುವುದರಿಂದ ಆ ವೇಳೆಗೆ ರೋಹಿತ್ ಸಂಪೂರ್ಣವಾಗಿ ಫಿಟ್ ಆಗಿರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.

Story first published: Tuesday, January 18, 2022, 18:29 [IST]
Other articles published on Jan 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X