ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಲವು ದಾಖಲೆಗಳನ್ನು ಸೃಷ್ಟಿಸಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜೋಡಿ

ಗುವಾಹಟಿ, ಅಕ್ಟೋಬರ್ 22: ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ ಬೃಹತ್ ಮೊತ್ತವನ್ನು ಸವಾಲೇ ಅಲ್ಲ ಎಂಬಂತೆ ಭಾರತ ಸುಲಭವಾಗಿ ತಲುಪಿತು.

323 ರನ್‌ಗಳ ದೊಡ್ಡ ಗುರಿಯನ್ನು ಭಾರತ ಕೇವಲ ಎರಡು ವಿಕೆಟ್ ಕಳೆದುಕೊಂಡು ಸಲೀಸಾಗಿ ತಲುಪಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿತು.

ಇನ್ನೊಂದು ತುದಿಯಲ್ಲಿ ರೋಹಿತ್ ನಿಂತಿದ್ದರೆ ಆಟ ಕಷ್ಟವೇ ಅಲ್ಲ: ಕೊಹ್ಲಿ ಇನ್ನೊಂದು ತುದಿಯಲ್ಲಿ ರೋಹಿತ್ ನಿಂತಿದ್ದರೆ ಆಟ ಕಷ್ಟವೇ ಅಲ್ಲ: ಕೊಹ್ಲಿ

ವೆಸ್ಟ್ ಇಂಡೀಸ್‌ನ ಶಿಮ್ರೋನ್ ಹೆಟ್ಮೇರ್ ಅವರ ಅಬ್ಬರದ ಮೂರನೇ ಏಕದಿನ ಶತಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರ ಆರ್ಭಟದ ಮುಂದೆ ಮಂಕಾಯಿತು. ವೆಸ್ಟ್ ಇಂಡೀಸ್ ಇನ್ನೂ 50 ರನ್‌ಗಳನ್ನು ಗಳಿಸಿದ್ದರೂ ಸುಲಭವಾಗಿಯೇ ಅದನ್ನು ತಲುಪುವಷ್ಟು ಸಾಮರ್ಥ್ಯ ಭಾರತಕ್ಕೆ ಇತ್ತು.

ಈ ಪಂದ್ಯದ ಕೆಲವು ಆಸಕ್ತಿಕರ ಅಂಕಿ ಅಂಶಗಳು ಇಲ್ಲಿವೆ...

ಕೊಹ್ಲಿ 2000+ ಸಾಧನೆ

ಕೊಹ್ಲಿ 2000+ ಸಾಧನೆ

42 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ 2018ರಲ್ಲಿ ಎಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಗಳಿಂದ 2,000 ರನ್ ಕಲೆಹಾಕಿದರು. ಸತತ ಮೂರು ವರ್ಷ 2000ಕ್ಕೂ ಅಧಿಕ ರನ್ ಸಾಧನೆ ಮಾಡಿದ ನಾಲ್ಕನೆಯ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾದರು. ಪ್ರಸಕ್ತ ವರ್ಷ ಅವರು ಟೆಸ್ಟ್‌ನಲ್ಲಿ 1063, ಏಕದಿನದಲ್ಲಿ 889 ಮತ್ತು ಟಿ20ಯಲ್ಲಿ 146 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ (1996,1997 & 1998), ಮ್ಯಾಥ್ಯೂ ಹೇಡನ್ (2002, 2003 & 2004) ಮತ್ತು ಜೋ ರೂಟ್ (2015, 2016 & 2017) ಈ ಸಾಧನೆ ಮಾಡಿದ್ದರು.

ಕೊಹ್ಲಿ 2016ರಲ್ಲಿ 2595 ರನ್, 2017ರಲ್ಲಿ 2818 ರನ್ ಮತ್ತು 2018ರಲ್ಲಿ 2098 ರನ್ ಗಳಿಸಿದ್ದಾರೆ.

1ನೇ ಪಂದ್ಯ ಭಾರತಕ್ಕೆ ಸುಲಭ ತುತ್ತು, ಕೊಹ್ಲಿ-ರೋಹಿತ್ ಆಟದ ಗಮ್ಮತ್ತು

ಐದನೇ ಬಾರಿ 2000+ ರನ್

ಐದನೇ ಬಾರಿ 2000+ ರನ್

ಒಟ್ಟಾರೆಯಾಗಿ ವರ್ಷವೊಂದರಲ್ಲಿ ಕೊಹ್ಲಿ ಎಲ್ಲ ಮಾದರಿಗಳಲ್ಲಿ 2000ಕ್ಕೂ ಅಧಿಕ ರನ್ ಪೇರಿಸುತ್ತಿರುವುದು ಇದು ಐದನೇ ಬಾರಿ. 2012ರಲ್ಲಿ 2186 ಮತ್ತು 2014ರಲ್ಲಿ 2586 ರನ್ ಗಳಿಸಿದ್ದರು. ಈ ಮೂಲಕ ಅವರು ಸಚಿನ್ ತೆಂಡೂಲ್ಕರ್ ಮತ್ತು ಮಹೇಲ ಜಯವರ್ಧನೆ ಅವರ ಸಾಧನೆಗಳನ್ನು ಸರಿಗಟ್ಟಿದರು. ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಮಾತ್ರ ಆರು ಬಾರಿ 2000+ ರನ್ ಗಳಿಸಿದವರಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಶ್ರೀಲಂಕಾದ ರಂಗನಾ ಹೆರಾತ್ ವಿದಾಯ

ರೋಹಿತ್ ಶರ್ಮಾ 'ನವಶತಕ'

ವಿಂಡೀಸ್ ವಿರುದ್ಧ ಶತಕ ಬಾರಿಸುವ ಮೂಲಕ ರೋಹಿತ್ ಶರ್ಮಾ 9 ಎದುರಾಳಿ ತಂಡಗಳ ವಿರುದ್ಧ ಶತಕ ಗಳಿಸಿದಂತಾಯಿತು. ಕೆರೆಬಿಯನ್ನರ ವಿರುದ್ಧ 22 ಪಂದ್ಯಗಳನ್ನು ಆಡಿರುವ ರೋಹಿತ್‌ಗೆ ಇದು ಮೊದಲ ಶತಕವಾಗಿದೆ. ಇತ್ತೀಚಿನ 10 ಅಂತಾರಾಷ್ಟ್ರೀಯ ತಂಡಗಳ ಪೈಕಿ 9 ತಂಡಗಳ ವಿರುದ್ಧ ಶತಕ ಗಳಿಸಿದವರ ಸಾಲಿನಲ್ಲಿ ತೆಂಡೂಲ್ಕರ್ ಮತ್ತು ಕೊಹ್ಲಿ ನಂತರದ ಭಾರತದ ಮೂರನೇ ಆಟಗಾರನಾಗಿ ಹಾಗೂ ಜಗತ್ತಿನ ಹತ್ತನೇ ಆಟಗಾರನಾಗಿ ಅವರು ಸ್ಥಾನ ಪಡೆದುಕೊಂಡಿದ್ದಾರೆ.

ಮಧ್ಯಮ ವೇಗಿ ಪ್ರವೀಣ್ ಕುಮಾರ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ

ಕೊಹ್ಲಿ 14ನೇ ಶತಕ

ಕೊಹ್ಲಿ 14ನೇ ಶತಕ

ನಾಯಕರಾಗಿ 50ನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಅವರದಿದು 14ನೇ ಶತಕ. ನಾಯಕತ್ವ ವಹಿಸಿಕೊಂಡ ಬಳಿಕ ಎಬಿ ಡಿವಿಲಿಯರ್ಸ್ 13 ಶತಕಗಳನ್ನು ದಾಖಲಿಸಿದ್ದರು. ಅದನ್ನು ಕೊಹ್ಲಿ ಮುರಿದಿದ್ದಾರೆ. ನಾಯಕರಾಗಿ ಅತಿ ಹೆಚ್ಚು ಶತಕ ಗಳಿಸಿದ ದಾಖಲೆ ರಿಕಿ ಪಾಂಟಿಂಗ್ (22) ಅವರ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿಯ ಐದನೇ ಶತಕ ಇದಾಗಿದೆ. ಹರ್ಷಲ್ ಗಿಬ್ಸ್, ಹಶೀಮ್ ಆಮ್ಲಾ ಮತ್ತು ಎಬಿ ಡಿವಿಲಿಯರ್ಸ್ ಕೂಡ ತಲಾ ಐದು ಶತಕಗಳನ್ನು ಕೆರೆಬಿಯನ್ನರ ವಿರುದ್ಧ ದಾಖಲಿಸಿದ್ದಾರೆ.

ಕೊಹ್ಲಿ-ರೋಹಿತ್ ಜೋಡಿ ದಾಖಲೆ

ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿಯ ಐದನೇ ದ್ವಿಶತಕ ಜೊತೆಯಾಟ ಇದು. ಏಕದಿನ ಕ್ರಿಕೆಟ್‌ನಲ್ಲಿ ಇದೊಂದು ದಾಖಲೆ. ಆದರೆ, ಚೇಸಿಂಗ್‌ನಲ್ಲಿ ಈ ಇಬ್ಬರೂ ದ್ವಿಶತಕದ ಜೊತೆಯಾಟ ನೀಡಿದ್ದು ಇದೇ ಮೊದಲು. ಏಕದಿನದಲ್ಲಿ ಕೊಹ್ಲಿ ದ್ವಿಶತಕದ ಜೊತೆಯಾಟದಲ್ಲಿ ಸೇರಿಕೊಂಡಿದ್ದು ಇದು 13ನೇ ನಿದರ್ಶನ. ರೋಹಿತ್ ಶರ್ಮಾ ಏಳು ಬಾರಿ ದ್ವಿಶತಕ ಜೊತೆಯಾಟ ನೀಡಿದ್ದಾರೆ. ರಿಕಿ ಪಾಂಟಿಂಗ್, ಹಶೀಮ್ ಆಮ್ಲಾ ಮತ್ತು ಉಪುಲ್ ತರಂಗ ಕೂಡ ತಲಾ ಏಳು ಬಾರಿ ದ್ವಿಶತಕ ಜೊತೆಯಾಟ ನೀಡಿದ್ದಾರೆ.

ಇಬ್ಬರ ಶತಕದ ಸಾಧನೆ

ಇಬ್ಬರ ಶತಕದ ಸಾಧನೆ

ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಏಕದಿನ ಪಂದ್ಯವೊಂದರಲ್ಲಿ ಶತಕ ಗಳಿಸಿದ್ದು ಇದು ನಾಲ್ಕನೆಯ ಸಲ. ಹಶೀಮ್ ಆಮ್ಲಾ ಮತ್ತು ಎಬಿ ಡಿವಿಲಿಯರ್ಸ್ ಐದು ಬಾರಿ ಈ ಸಾಧನೆ ಮಾಡಿದ್ದಾರೆ. ಆಮ್ಲಾ-ಕ್ವಿಂಟನ್ ಡಿ ಕಾಕ್ ಮತ್ತು ಸಚಿನ್ ತೆಂಡೂಲ್ಕರ್-ಸೌರವ್ ಗಂಗೂಲಿ ಕೂಡ ನಾಲ್ಕು ಬಾರಿ ಈ ಸಾಧನೆ ಮಾಡಿದ್ದಾರೆ.

ಹೆಟ್ಮೇರ್ ವೇಗದ ಶತಕ

ಹೆಟ್ಮೇರ್ ವೇಗದ ಶತಕ

ಶಿಮ್ರೋನ್ ಹೆಟ್ಮೇರ್ ಭಾರತದ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿದ ಎರಡನೆಯ ವಿಂಡೀಸ್ ಆಟಗಾರ ಎನಿಸಿಕೊಂಡರು. 1979ರ ವಿಶ್ವಕಪ್‌ನಲ್ಲಿ ಎಡ್ಜ್ ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಗಾರ್ಡನ್ ಗ್ರೀನಿಡ್ಜ್ ಭಾರತದ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ 106 ರನ್ ಗಳಿಸಿದ್ದರು.

ಭಾರತದ ವಿರುದ್ಧ ಹೆಟ್ಮೇರ್ ಐದನೇ ವೇಗದ ಶತಕ ಬಾರಿಸಿದರು. 74 ಎಸೆತಗಳಲ್ಲಿ ಅವರು ಮೂರಂಕಿ ತಲುಪಿದರು. ಈ ಹಿಂದೆ ವಿವಿಯನ್ ರಿಚರ್ಡ್ಸ್ 72 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ದಾಖಲೆಯ ಜತೆಯಾಟ

ದಾಖಲೆಯ ಜತೆಯಾಟ

ಭಾರತದ ಚೇಸಿಂಗ್ ವೇಳೆ ಯಾವುದೇ ವಿಕೆಟ್‌ಗೆ ದೊರೆತ ಅತ್ಯಧಿಕ ರನ್ ಜತೆಯಾಟವಿದು. ಶ್ರೀಲಂಕಾದ ವಿರುದ್ಧ ಕೋಲ್ಕತಾದಲ್ಲಿ ಕೊಹ್ಲಿ ಮತ್ತು ಗೌತಮ್ ಗಂಭೀರ್ 224 ರನ್‌ಗಳನ್ನು ಚೇಸಿಂಗ್ ವೇಳೆ ಕಲೆಹಾಕಿದ್ದರು.

ವೆಸ್ಟ್ ಇಂಡೀಸ್ ವಿರುದ್ಧ ಯಾವುದೇ ವಿಕೆಟ್‌ಗೆ ಅತಿ ದೊಡ್ಡ ಜೊತೆಯಾಟವಿದು. 2002ರಲ್ಲಿ ರಾಜ್‌ಕೋಟ್ ಏಕದಿನ ಪಂದ್ಯದಲ್ಲಿ ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ 196 ರನ್‌ಗಳನ್ನು ಸೇರಿಸಿದ್ದರು. ಅಲ್ಲದೆ, ವೆಸ್ಟ್ ಇಂಡೀಸ್ ವಿರುದ್ಧ ಯಾವುದೇ ತಂಡ ಗಳಿಸಿದ ಅತ್ಯಧಿಕ ಎರಡನೆಯ ವಿಕೆಟ್ ಜತೆಯಾಟ ಇದು. ಬಾಂಗ್ಲಾದೇಶದ ತಮಿಮ್ ಇಕ್ಬಾಲ್ ಮತ್ತು ಶಕೀಬ್ ಅಲ್ ಹಸನ್ 207 ರನ್ ಜತೆಯಾಟ ನೀಡಿದ್ದರು.

ಶರ್ಮಾ ಸತತ ಶತಕದ ದಾಖಲೆ

ಶರ್ಮಾ ಸತತ ಶತಕದ ದಾಖಲೆ

ರೋಹಿತ್ ಶರ್ಮಾ ಕಳೆದ ಎಲ್ಲ 9 ಸರಣಿಗಳಲ್ಲಿಯೂ ಶತಕ ಗಳಿಸಿದ ಸಾಧನೆ ಮಾಡಿದ್ದಾರೆ. ಕಳೆದ ವರ್ಷದ ಚಾಂಪಿಯನ್ಸ್ ಟ್ರೋಫಿಯಿಂದ 36 ಏಕದಿನ ಪಂದ್ಯಗಳಲ್ಲಿ 71.96ರ ಸರಾಸರಿಯಲ್ಲಿ 2086 ರನ್‌ಗಳನ್ನು ಬಾರಿಸಿದ್ದು, ಇದರಲ್ಲಿ 10 ಶತಕಗಳಿವೆ.

ವಿರೇಂದ್ರ ಸೆಹ್ವಾಗ್ ದಾಖಲಿಸಿದ 219 ರನ್ ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ರನ್ ಎಂದರೆ ರೋಹಿತ್ ಶರ್ಮಾ ಅವರ 152*.

ಆರು ಬಾರಿ 150+

ಆರು ಬಾರಿ 150+

ಆರು ಬಾರಿ ಏಕ ದಿನ ಪಂದ್ಯಗಳಲ್ಲಿ 150ರ ಗಡಿ ದಾಟಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಐದು ಬಾರಿ ಈ ಸಾಧನೆ ಮಾಡಿದ್ದಾರೆ. ಅದನ್ನು ಡೇವಿಡ್ ವಾರ್ನರ್ ಕಳೆದ ವರ್ಷ ಸರಿಗಟ್ಟಿದ್ದರು.

Story first published: Monday, October 22, 2018, 16:40 [IST]
Other articles published on Oct 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X