ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡಿಯಾ vs ವಿಂಡೀಸ್‌: 3ನೇ ಏಕದಿನಕ್ಕೆ ಭಾರತ ತಂಡದ ಸಂಭಾವ್ಯ XI

Team india probable 11 for 3rd odi

ಟ್ರಿನಿಡಾಡ್‌, ಆಗಸ್ಟ್‌ 13: ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿರುವ ಟೀಮ್‌ ಇಂಡಿಯಾ ಇದೀಗ ಏಕದಿನ ಕ್ರಿಕೆಟ್‌ ಸರಣಿಯನ್ನು ವಶಪಡಿಸಿಕೊಳ್ಳುವ ಉತ್ತಮ ಅವಕಾಶ ಹೊಂದಿದ್ದು, ಬುಧವಾರ (ಆ.14) ನಡೆಯೊಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಫೇವರಿಟ್‌ ತಂಡವಾಗಿ ಕಣಕ್ಕಿಳಿಯಲಿದೆ.

ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಮಳೆಗೆ ಆಹುತಿಯಾಯಿತು. ಬಳಿಕ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 59 ರನ್‌ಗಳ ಜಯ ದಾಖಲಿಸಿ ಸರಣಿಯಲ್ಲಿ 1-0 ಅಂತರದ ಮೇಲುಗೈ ಪಡೆಯಿತು.

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 75ರಿಂದ 80 ಶತಕ ದಾಖಲಿಸಲಿದ್ದಾರಂತೆ!ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 75ರಿಂದ 80 ಶತಕ ದಾಖಲಿಸಲಿದ್ದಾರಂತೆ!

ಇದೀಗ ಸರಣಿ ನಿರ್ಣಾಯಕ ಎನಿಸಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧ ಗೆದ್ದರೆ ಪ್ರಶಸ್ತಿ ಎತ್ತಿ ಹಿಡಿಯಲಿದೆ. ಒಂದು ವೇಳೆ ಮಳೆಯಿಂದಾಗಿ ಈ ಪಂದ್ಯವೂ ರದ್ದಾದರೆ 1-0 ಅಂತರದಲ್ಲಿ ಸರಣಿ ಭಾರತಕ್ಕೆ ಒಲಿಯಲಿದೆ. ವೆಸ್ಟ್‌ ಇಂಡೀಸ್‌ ತಿರುಗೇಟು ನೀಡಿದರಷ್ಟೇ 1-1ರಲ್ಲಿ ಸರಣಿ ಸಮಬಲ ಕಾಣಲಿದೆ.

ODIನಲ್ಲಿ ಕಿಂಗ್‌ ಕೊಹ್ಲಿ 42ನೇ ಶತಕ, ದಾದಾ ದಾಖಲೆ ಧೂಳೀಪಟ!ODIನಲ್ಲಿ ಕಿಂಗ್‌ ಕೊಹ್ಲಿ 42ನೇ ಶತಕ, ದಾದಾ ದಾಖಲೆ ಧೂಳೀಪಟ!

ಇನ್ನು ಮೂರನೇ ಪಂದ್ಯಕ್ಕೆ ಟೀಮ್‌ ಇಂಡಿಯಾದ ಆಡುವ 11 ಆಟಗಾರರ ಪಟ್ಟಿ ಹೇಗಿರಬಹುದು ಎಂಬುದನ್ನು ಮೈಖೇಲ್‌ ಕನ್ನಡ ಇಲ್ಲಿ ವಿವರಿಸಿದೆ.

1. ರೋಹಿತ್‌ ಶರ್ಮಾ

1. ರೋಹಿತ್‌ ಶರ್ಮಾ

ಕಳೆದ ತಿಂಗಳು ಅಂತ್ಯಗೊಂಡ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಐದು ಶತಕ ಸಿಡಿಸಿದ್ದ ಟೀಮ್‌ ಇಂಡಿಯಾದ ಉಪನಾಯಕ ರೋಹಿತ್‌ ಶರ್ಮಾ, ವಿಂಡೀಸ್‌ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಕೇವಲ 18 ರನ್‌ಗಳಿಸಲಷ್ಠೇ ಶಕ್ತರಾದರು. ಇದೀಗ ಮೂರನೇ ಮತ್ತು ನಿರ್ಣಾಯಕ ಪಂದ್ಯದಲ್ಲೂ ಆರಂಭಿಕರಾಗಿ ಕಣಕ್ಕಿಳಿದು ಲಯಕ್ಕೆ ಮರಳುವುದನ್ನು ರೋಹಿತ್‌ ಎದುರು ನೋಡುತ್ತಿದ್ದಾರೆ.

2. ಶಿಖರ್‌ ಧವನ್‌

2. ಶಿಖರ್‌ ಧವನ್‌

ಗಾಯದ ಸಮಸ್ಯೆಯಿಂದ ಚೇತರಿಸಿದ ಬಳಿಕ ಶಿಖರ್‌ ಧವನ್‌ ತಮ್ಮ ಎಂದಿನ ಲಯ ಕಂಡುಕೊಳ್ಳಲು ತಿಣುಕಾಡುತ್ತಿದ್ದಾರೆ. ಟಿ20 ಸರಣಿಯಲ್ಲೂ ವಿಂಡೀಸ್‌ ಎದುರು ಧವನ್‌ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು. ಇದೀಗ ಎರಡನೇ ಏಕದಿನ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ 3ನೇ ಒಡಿಐನಲ್ಲಿ ರನ್‌ ಗಳಿಕೆಯ ಸೂತ್ರ ಕಂಡುಕೊಳ್ಳುವು ಧವನ್‌ ಲೆಕ್ಕಾಚಾರವಾಗಿದೆ.

3. ವಿರಾಟ್‌ ಕೊಹ್ಲಿ

3. ವಿರಾಟ್‌ ಕೊಹ್ಲಿ

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅದ್ಭತ ಲಯದಲ್ಲಿದ್ದಾರೆ. ಟಿ20 ಸರಣಿಯಲ್ಲೂ ಭಾರತದ ಪರ ಗರಿಷ್ಠ ರನ್‌ ಸ್ಕೋರರ್‌ ಎನಿಸಿದ ವಿರಾಟ್‌, ಇದೀಗ ಒಡಿಐನಲ್ಲೂ ಶತಕದೊಂದಿಗೆ ಭರ್ಜರಿ ಆರಂಭ ಪಡೆದಿದ್ದಾರೆ. 125 ಎಸೆತಗಳಲ್ಲಿ 120 ರನ್‌ ಚೆಚ್ಚಿದ ವಿರಾಟ್‌ ವೃತ್ತಿ ಬದುಕಿನ 42ನೇ ಒಡಿಐ ಶತಕದ ಸಂಭ್ರಮ ಆಚರಿಸಿದರು. ಅಷ್ಟೇ ಅಲ್ಲದೆ ಹಲವು ವಿಶ್ವ ದಾಖಲೆಗಳನ್ನು ನುಚ್ಚು ನೂರು ಮಾಡಿದರು. ಅಂತಿಮ ಒಡಿಐನಲ್ಲೂ ಶತಕ ಬಾರಿಸಿ, ಟೆಸ್ಟ್‌ ಸರಣಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವತ್ತ ವಿರಾಟ್‌ ತಮ್ಮ ಚಿತ್ತ ನೆಲೆಸಿದ್ದಾರೆ.

4. ಶ್ರೇಯಸ್‌ ಅಯ್ಯರ್‌

4. ಶ್ರೇಯಸ್‌ ಅಯ್ಯರ್‌

ಭಾರತ ತಂಡಕ್ಕೆ ಹಲವು ವರ್ಷಗಳಿಂದ ಕಾಡುತ್ತಿರುವ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಸಮಸ್ಯೆಗೆ ಶ್ರೇಯಸ್‌ ಅಯ್ಯರ್‌ ಹೊಸ ಪರಿಹಾರದಂತೆ ಕಂಗೊಳಿಸುತ್ತಿದ್ದಾರೆ. ದ್ವಿತೀಯ ಒಡಿಐ ಪಂದ್ಯದಲ್ಲ ಮಿಂಚಿದ ಶ್ರೇಯಸ್‌, ನಾಯಕ ವಿರಾಟ್‌ ಜೊತೆಗೂಡಿ ಶತಕದ ಜೊತೆಯಾಟವಾಡುವ ಮೂಲಕ 71 ರನ್‌ಗಳ ಅತ್ಯಮೂಲ್ಯ ಕಾಣಿಕೆ ನೀಡಿದ್ದರು. ಈ ಮೂಲಕ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್‌ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇನ್ನು ಅಗತ್ಯಕ್ಕ ತಕ್ಕಂತೆ ಶ್ರೇಯಸ್‌ ಮತ್ತು ರಿಷಭ್‌ ಪಂತ್‌ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

 5. ರಿಷಭ್‌ ಪಂತ್‌

5. ರಿಷಭ್‌ ಪಂತ್‌

ಪ್ರತಿಭಾನ್ವಿತ ಎಡಗೈ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಟಿ20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದರು. ಆದರೆ, ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಮತ್ತದೇ ಚಾಳಿ ಮುಂದುವರಿಸಿ ಅನಗತ್ಯ ಹೊಡೆತಗಳಿಗೆ ಮುಂದಾಗಿ ವಿಕೆಟ್‌ ಕೈಚೆಲ್ಲುತ್ತಿದ್ದಾರೆ. ಪಂತ್‌ ಕ್ರೀಸ್‌ನಲ್ಲಿ ಇದ್ದರೆ ಟೀಮ್‌ ಇಂಡಿಯಾದ ಸ್ಕೋರ್‌ ಬೋರ್ಡ್‌ನಲ್ಲಿ ರನ್‌ ಏರಿಕೆಯಾಗುವುದಂತೂ ಖಂಡಿತ. ಹೀಗಾಗಿ ಪಂತ್‌ ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟಿಂಗ್‌ ಮಾಡುವ ಅನಿವಾರ್ಯತೆ ಇದೆ. 5ನೇ ಕ್ರಮಾಂಕದಲ್ಲಿ ಪಂತ್‌ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬಲವಾಗಿದ್ದಾರೆ.

6. ಕೇದಾರ್‌ ಜಾಧವ್‌

6. ಕೇದಾರ್‌ ಜಾಧವ್‌

ತಂಡದ ಮಧ್ಯಮ ಕ್ರಮಮಾಖದಲ್ಲಿ ಅನುಭವಿ ಆಲ್‌ರೌಂಡರ್‌ ಕೇದಾರ್‌ ಜಾಧವ್‌ ಅವರ ಪಾತ್ರ ಮಹತ್ವದ್ದಾಗಿದೆ. ತಂಡ ಆರಂಭಿಕ ಆಘಾತ ಅನುಭವಿಸಿದರೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತಂದುಕೊಡಬಲ್ಲ ಆಟಗಾರ ಜಾಧವ್‌. ಈ ಹಿಂದೆಯೂ ಹಲವು ಪಂದ್ಯಗಳಲ್ಲಿ ಜಾಧವ್‌ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ಜೊತೆಗೆ ತಮ್ಮ ರೌಂಡರ್‌ ಆರ್ಮ್‌ ಸ್ಪಿನ್‌ ಬೌಲಿಂಗ್ ಮೂಲಕವೂ ತಂಡಕ್ಕೆ ನೆರವಾಗಬಲ್ಲರು.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

7. ಬ್ಯಾಟಿಂಗ್‌ , ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಮೂರರಲ್ಲೂ ತಂಡಕ್ಕೆ ಯಾವುದೇ ಸಂದರ್ಭದಲ್ಲಿ ಮೇಲುಗೈ ಒದಗಿಸಬಲ್ಲ ಪರ್ಫೆಕ್ಟ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ. ಜಡೇಜಾ ಅವರ 3ಡಿ ಪ್ರದರ್ಶಕ್ಕೆ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಇಡೀ ವಿಶ್ವವೇ ಸಾಕ್ಷಿಯಾಗಿತ್ತು. ತಂಡದ ಅತ್ಯಂತ ಮೌಲ್ಯಯುತ ಆಟಗಾರ ಜಡೇಜಾ ಎಂದರೆ ತಪ್ಪಾಗಲಾರದು.

8. ಭುವನೇಶ್ವರ್‌ ಕುಮಾರ್‌

8. ಭುವನೇಶ್ವರ್‌ ಕುಮಾರ್‌

ಹೊಸ ಚೆಂಡಿನಲ್ಲಿ ಸ್ವಿಂಗ್‌ ತರಬಲ್ಲ ಹಾಗೂ ಚೆಂಡು ಹಳೆಯದಾದ ಬಳಿಕ ಬೌಲಿಂಗ್‌ ಗತಿಯಲ್ಲಿ ಬದಲಾವಣೆಗಳನ್ನು ತಂದು ಅಂತಿಮ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಬ್ಬಿಣದ ಕಡಲೆಯಾಗುವ ಭುವನೇಶ್ವರ್‌ ಕುಮಾರ್‌, ಟೀಮ್‌ ಇಂಡಿಯಾದ ಬೌಲಿಂಗ್‌ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ. ಮೊದಲ ಒಡಿಐ ಪಂದ್ಯದಲ್ಲೂ ಭುವಿ 4 ವಿಕೆಟ್‌ ಪಡೆದು ಮ್ಯಾಚ್‌ ವಿನ್ನರ್‌ ಎನಿಸಿದ್ದರು.

9. ಕುಲ್ದೀಪ್‌ ಯಾದವ್‌

9. ಕುಲ್ದೀಪ್‌ ಯಾದವ್‌

ಎಡಗೈ ಬೌಲರ್‌ ಚೈನಾಮನ್‌ ಶೈಲಿಯ ಕುಲ್ದೀಪ್‌ ಯಾದವ್‌, ಭಾರತ ತಂಡದ ಬೌಲಿಂಗ್‌ ವಿಭಾದಲ್ಲಿರುವ ವಿಶೇಷ ಅಸ್ತ್ರ. ಕುಲ್ದೀಪ್‌ ಅವರ ಸ್ಪಿನ್‌ ಬೌಲಿಂಗ್‌ ಅದರಲ್ಲೂ ದೂಸ್ರಾ ಎಸೆತಗಳ ಎದುರು ರನ್‌ ಗಳಿಸುವುದು ಅಷ್ಟು ಸುಲಭವಲ್ಲ. ಕೊಂಚ ಏಕಾಗ್ರತೆ ಕಳೆದುಕೊಂಡರೂ ಬ್ಯಾಟ್ಸ್‌ಮನ್‌ಗಳ ದಾಂಡೆಗರಿಸುವಲ್ಲಿ ಕುಲ್ದೀಪ್‌ ನಿಸ್ಸೀಮರು. ಮೊದಲ ಏಕದಿನ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಕ್ಲೀನ್‌ ಬೌಲ್ಡ್‌ ಆದದ್ದು ಇದಕ್ಕೆ ಉತ್ತಮ ಉದಾಹರಣೆ.

 10. ಮೊಹಮ್ಮದ್‌ ಶಮಿ

10. ಮೊಹಮ್ಮದ್‌ ಶಮಿ

ವೃತ್ತಿ ಬದುಕಿನ ಶ್ರೇಷ್ಠ ಲಯದಲ್ಲಿರುವ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ. ದ್ವಿತೀಯ ಏಕದಿನದಲ್ಲಿ ಎರಡು ವಿಕೆಟ್‌ ಪಡೆದಿರುವ ಶಮಿ, ಇದಕ್ಕೂ ಮುನ್ನ ವಿಶ್ವಕಪ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದು ಮಿಂಚಿದ್ದರು. ನಿಖರತೆಯೊಂದಿಗೆ ಉತ್ತಮ ವೇಗ ಶಮಿ ಅವರ ಬಲವಾಗಿದೆ.

 11. ಖಲೀಲ್‌ ಅಹ್ಮದ್‌ / ನವದೀಪ್‌ ಸೈನಿ

11. ಖಲೀಲ್‌ ಅಹ್ಮದ್‌ / ನವದೀಪ್‌ ಸೈನಿ

ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 13 ಓವರ್‌ಗಳನ್ನು ಬೌಲ್‌ ಮಾಡಿತ್ತು, ಬಳಿಕ ಎರಡನೇ ಏಕದಿನದಲ್ಲೂ ತಂಡದ ಬೌಲಿಂಗ್‌ ವಿಭಾಗದಲ್ಲಿ ಎಡಗೈ ವೇಗಿ ಖಲೀಲ್‌ ಅಹ್ಮದ್‌ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ನೀಡಿಲ್ಲ. ಹೀಗಾಗಿ ಅಂತಿಮ ಒಡಿಐನಲ್ಲಿ ಖಲೀಲ್‌ ಬದಲಿಗೆ ಯುವ ವೇಗಿ ನವದೀಪ್‌ ಸೈನಿಗೆ ಒಂದು ಅವಕಾಶ ನೀಡಿದರೆ ಅಚ್ಚರಿಯೇನಿಲ್ಲ.

Story first published: Tuesday, August 13, 2019, 17:32 [IST]
Other articles published on Aug 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X