ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್‌ಗೆ ಸಿಗಲಿದೆ ಮತ್ತೊಂದು ಅವಕಾಶ?

ಟೆಸ್ಟ್‌ ಸರಣಿಯಲ್ಲಿ ಮುಗ್ಗರಿಸಿದ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ವೈಟ್ ಬಾಲ್ ಸರಣಿಯಲ್ಲಿ ಆಡಲಿದೆ. ತಲಾ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಭಾರತ ಆಡಲಿದೆ. ಅದರ ನಂತರ ರೋಹಿತ್ ಶರ್ಮಾ ನೇತೃತ್ವದ ತಂಡ ವೆಸ್ಟ್ ಇಂಡೀಸ್‌ಗೆ ಹಾರಲಿದೆ. ಅಲ್ಲಿಯೂ ವೈಟ್ ಬಾಲ್ ಸರಣಿಯಲ್ಲಿ ಭಾರತ ಕಾದಾಟ ನಡೆಸಲಿದೆ.

ಜುಲೈ 22 ರಿಂದ ಆಗಸ್ಟ್ 7 ರವರೆಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಏತನ್ಮಧ್ಯೆ, ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಭಾರತದ ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಬಹುದು ಎಂಬ ವರದಿಗಳಿವೆ. ಇದನ್ನು ಕ್ರಿಕ್‌ಬಝ್ ವರದಿ ಮಾಡಿದೆ. ಹೀಗಾಗಿ ಸಂಜು ಸ್ಯಾಮ್ಸನ್‌ರಂತಹ ಕೆಲ ಆಟಗಾರರಿಗೆ ಬಂಪರ್ ಅವಕಾಶ ಸಿಗಲಿದೆ.

ವಿಂಡೀಸ್ ಪ್ರವಾಸಕ್ಕೆ ಸದ್ಯದಲ್ಲೇ ತಂಡ ಪ್ರಕಟ

ವಿಂಡೀಸ್ ಪ್ರವಾಸಕ್ಕೆ ಸದ್ಯದಲ್ಲೇ ತಂಡ ಪ್ರಕಟ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ನಂತರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತೀಯ ತಂಡವನ್ನು ಪ್ರಕಟಿಸಬಹುದು. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಈ ಸರಣಿಯಲ್ಲಿನ ಪ್ರದರ್ಶನವನ್ನು ಮೌಲ್ಯಮಾಪನ ಮಾಡಿ ತಂಡವನ್ನು ಆಯ್ಕೆ ಮಾಡಬಹುದು. ಚೇತನ್ ಶರ್ಮಾ ಪ್ರಸ್ತುತ ಭಾರತ ತಂಡದೊಂದಿಗೆ ಇಂಗ್ಲೆಂಡ್‌ನಲ್ಲಿದ್ದಾರೆ.

ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್ ಸೇರಿದಂತೆ ಹಿರಿಯ ಆಟಗಾರರೊಂದಿಗೆ ಮಾತನಾಡಿದ ನಂತರ ಚೇತನ್ ಶರ್ಮಾ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಲಿದ್ದಾರೆ.

ಐದು ವಿಭಿನ್ನ ನಾಯಕರು, ಪ್ರಯೋಗ ಇನ್ಮುಂದೆ ಕಡಿಮೆ!

ಐದು ವಿಭಿನ್ನ ನಾಯಕರು, ಪ್ರಯೋಗ ಇನ್ಮುಂದೆ ಕಡಿಮೆ!

ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆದ ನಂತರ ಐದಕ್ಕೂ ಹೆಚ್ಚು ವಿಭಿನ್ನ ನಾಯಕರೊಂದಿಗೆ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೇ, ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಿದ್ದರು.

ಆಯ್ಕೆದಾರರು ಇನ್ನು ಮುಂದೆ ಈ ರೀತಿಯ ನಾಯಕರ ನಿರಂತರ ಬದಲಾವಣೆಯನ್ನು ಪ್ರೋತ್ಸಾಹಿಸುವ ಸಾಧ್ಯತೆಯಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರೋಹಿತ್ ಗೆ ವಿಶ್ರಾಂತಿ ನೀಡುವ ಸಾಧ್ಯತೆ ಕಡಿಮೆ. ರೋಹಿತ್ ಅನುಪಸ್ಥಿತಿಯಲ್ಲಿ, ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧದ ಕೊನೆಯ ಟಿ20 ಅಂತರಾಷ್ಟ್ರೀಯ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದರು.

ಟೆಸ್ಟ್ ಕ್ರಿಕೆಟ್‌ನ ಈ 3 ವಿಶ್ವದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ ರಿಷಭ್ ಪಂತ್

ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ಸಾಧ್ಯತೆ

ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ಸಾಧ್ಯತೆ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಬಹುದಾದ್ದರಿಂದ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಭಾರತ ತಂಡಕ್ಕೆ ಪ್ರವೇಶ ಪಡೆಯಬಹುದು. ರಿಷಭ್ ಪಂತ್ ಅವರಿಗೆ ವಿಶ್ರಾಂತಿ ನೀಡಿದರೆ ಸಂಜು ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ರಿಷಭ್ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಕಾರಣ ಐರ್ಲೆಂಡ್‌ನೊಂದಿಗಿನ ಟಿ20 ಸರಣಿಯನ್ನು ಕಳೆದುಕೊಂಡಾಗ, ಸಂಜು ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಯಿತು. ಮೊದಲ ಟಿ20ಯಲ್ಲಿ ಅವಕಾಶ ಸಿಗದಿದ್ದರೂ ಎರಡನೇ ಟಿ20ಯಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದರು. ಈ ಪಂದ್ಯದಲ್ಲಿ ಸಂಜು 77 ರನ್ ಗಳಿಸಿದರು. ಈ ಪಂದ್ಯದಲ್ಲಿ ಅವರು ತಮ್ಮ ವೃತ್ತಿಜೀವನದ ಮೊದಲ ಅರ್ಧಶತಕವನ್ನು ಗಳಿಸಿದರು.

ಐರ್ಲೆಂಡ್‌ನೊಂದಿಗಿನ ಸರಣಿಯ ನಂತರ, ಭಾರತವು ಇಂಗ್ಲೆಂಡ್‌ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಿತು ಮತ್ತು ಸಂಜು ಸ್ಯಾಮ್ಸನ್ ಆಡುವ ಹನ್ನೊಂದರಲ್ಲಿದ್ದರು. ಅವರು ಈ ಪಂದ್ಯವನ್ನು ಆರಂಭಿಕರಾಗಿ ಪ್ರವೇಶಿಸಿದರು. ಆದರೆ ಈ ಪೈಕಿ ಸಂಜು ಬ್ಯಾಟಿಂಗ್ ನಲ್ಲಿ ಹೆಚ್ಚು ಮಿಂಚಲು ಸಾಧ್ಯವಾಗಲಿಲ್ಲ.

ಹೀಗಾಗಿ ಮುಂಬರುವ ಇಂಗ್ಲೆಂಡ್ ಟಿ20 ಸರಣಿಯಲ್ಲಿ ಅವಕಾಶ ಸಿಗದಿದ್ದರೂ, ವಿಂಡೀಸ್ ಪ್ರವಾಸದಲ್ಲಿ ಆಡುವ ಹನ್ನೊಂದರಲ್ಲಿ ಆಡುವ ಸಾಧ್ಯತೆಯಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 5, 2022, 23:57 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X