ಭಾರತ vs ವಿಂಡೀಸ್: 100ನೇ ಟಿ20I ಆಡಲಿಳಿದ ಪೊಲಾರ್ಡ್, ವಿಂಡೀಸ್ ಪರ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ನಡೆಯುತ್ತಿದ್ದು ಟಾಸ್ ಸೋತ ಭಾರತ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡಿಸ್ ತಂಡದ ನಾಯಕ ಕಿರಾನ್ ಪೊಲಾರ್ಡ್ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಕಿರಾನ್ ಪೊಲಾರ್ಡ್ 100ನೇ ಪಂದ್ಯವನ್ನು ಇಂದು ಆಡಲು ಇಳಿದಿದ್ದಾರೆ. ಈ ಈ ಸಾಧನೆ ಮಾಡಿದ ವೆಸ್ಟ್ ಇಂಡೀಸ್‌ನ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಪೊಲಾರ್ಡ್ ತಮ್ಮದಾಗಿಸಿದ್ದಾರೆ.

ಇನ್ನು ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 9ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ ಕಿರಾನ್ ಪೊಲಾರ್ಡ್. ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಪಟ್ಟಿಯಲ್ಲಿ ಪಾಕಿಸ್ತಾನದ ಆಲ್‌ರೌಂಡರ್ ಶೋಯೆಬ್ ಮಲಿಕ್ 124 ಪಂದ್ಯಗಳನ್ನಾಡಿದ್ದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಅನುಭವಿ ಆಟಗಾರ ರೋಹಿತ್ ಶರ್ಮಾ ಪಾಕಿಸ್ತಾನದ ಆಲ್‌ರೌಂಡರ್‌ಗಿಂತ 3 ಪಂದ್ಯಗಳಷ್ಟು ಹಿಂದಿದ್ದಾರೆ.

ಡೇವಿಡ್ ವಾರ್ನರ್ ನಂತರ ಆಸ್ಟ್ರೇಲಿಯಾದ ಮತ್ತೋರ್ವನ ಜೊತೆ ಸನ್ ರೈಸರ್ಸ್ ಕಿರಿಕ್!ಡೇವಿಡ್ ವಾರ್ನರ್ ನಂತರ ಆಸ್ಟ್ರೇಲಿಯಾದ ಮತ್ತೋರ್ವನ ಜೊತೆ ಸನ್ ರೈಸರ್ಸ್ ಕಿರಿಕ್!

ಇನ್ನು ಟಿ20 ಕ್ರಿಕೆಟ್‌ನಲ್ಲಿ ದಿಗ್ಗಜ ಆಟಗಾರನೆನಿಸಿಕೊಂಡಿರುವ ವೆಸ್ಟ್ ಇಂಡೀಸ್ ಮೂಲದ ಕ್ರಿಸ್ ಗೇಲ್ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 79 ಪಂದ್ಯವನ್ನು ಮಾತ್ರವೇ ಆಡಿದ್ದಾರೆ. ಇನ್ನು ಮತ್ತೋರ್ವ ವೆಸ್ಟ್ ಇಂಡೀಸ್‌ನ ಪ್ರಮುಖ ಆಲ್‌ರೌಂಡರ್ ಆಟಗಾರ ಡ್ವೇಯ್ನ್ ಬ್ರಾವೋ 91 ಪಂದ್ಯಗಳನ್ನಾಡಿದ್ದು ಪೊಲಾರ್ಡ್ ಅವರ ನಂತರದ ಸ್ಥಾನದಲ್ಲಿದ್ದಾರೆ.

ಇನ್ನು ಕಿರಾನ್ ಪೊಲಾರ್ಡ್ ಈವರೆಗೆ ಅಂತಾರಾಷ್ಟ್ರೀಯ ಚುಟುಕು ಮಾದರಿಯಲ್ಲಿ 1561 ರನ್‌ಗಳಿಸಿದ್ದು 42 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಚುಟಕು ಮಾದರಿಯ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರೆನಿಸಿದ್ದಾರೆ.

ಇನ್ನು 100ನೇ ಪಂದ್ಯವನ್ನು ಆಡುವ ಮುನ್ನ ಕಿರಾನ್ ಪೊಲಾರ್ಡ್‌ಗೆ ವಿಶೇಷ ಗೌರವವನ್ನು ಸಲ್ಲಿಸಲಾಗಿದೆ. ತಂಡದ ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್ ನಾಯಕ ಪೊಲಾರ್ಡ್‌ಗೆ ವಿಶೇಷ ಕ್ಯಾಪ್ ನೀಡಿ ಗೌರವಿಸಿದರೆ ನಿಕೋಲಸ್ ಪೂರನ್ ನಾಯಕನಿಗೆ ಜರ್ಸಿ ನೀಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಾಮಾಜಿಕ ಜಾಲತಾಣದಲ್ಲಿ ವಿಂಡೀಸ್ ತಂಡದ ನಾಯಕನಿಗೆ ಅಭಿನಂದನೆಯನ್ನು ಸಲ್ಲಿಸಿದೆ.

ಈ ಕಾರಣದಿಂದಲೇ ನಾನು ನನ್ನ ಮಗನ ಪಂದ್ಯಗಳನ್ನು ವೀಕ್ಷಿಸುವುದಿಲ್ಲ ಎಂದ ಸಚಿನ್!ಈ ಕಾರಣದಿಂದಲೇ ನಾನು ನನ್ನ ಮಗನ ಪಂದ್ಯಗಳನ್ನು ವೀಕ್ಷಿಸುವುದಿಲ್ಲ ಎಂದ ಸಚಿನ್!

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಹಾಲ್.

ಪಾಕಿಸ್ತಾನ್ ಸ್ಟೇಡಿಯಂನಲ್ಲೂ ರಾರಾಜಿಸಿದ ವಿರಾಟ್ ಕೊಹ್ಲಿ ಪೋಸ್ಟರ್ | Oneindia Kannada

ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಕೀರಾನ್ ಪೊಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ರೋಸ್ಟನ್ ಚೇಸ್, ಅಕೇಲ್ ಹೋಸೇನ್, ರೊಮಾರಿಯೋ ಶೆಫರ್ಡ್, ಶೆಲ್ಡನ್ ಕಾಟ್ರೆಲ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, February 19, 2022, 8:59 [IST]
Other articles published on Feb 19, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X