ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ಇಂಡೀಸ್: ಈತ ಭಾರತಕ್ಕೆ ತವರಿನಲ್ಲೇ ವಿಲನ್ ಆಗಲಿದ್ದಾನೆ ಎಂದು ಎಚ್ಚರಿಸಿದ ಸ್ಯಾಮಿ!

India vs West Indies: Kieron Pollard will trouble trouble India in their home says Darren Sammy

ಇತ್ತೀಚೆಗಷ್ಟೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಹೀನಾಯ ಸೋಲನ್ನು ಕಾಣುವುದರ ಮೂಲಕ ಮುಖಭಂಗಕ್ಕೊಳಗಾಗಿರುವ ಟೀಮ್ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳಲ್ಲಿ ಭಾಗವಹಿಸಲು ಸಜ್ಜಾಗಿದೆ. ಹೌದು, ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸವನ್ನು ಕೈಗೊಂಡು ಫೆಬ್ರವರಿ 6ರಿಂದ ಆರಂಭವಾಗಲಿರುವ ಟೀಮ್ ಇಂಡಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಹಾಗೂ ಫೆಬ್ರವರಿ 16ರಿಂದ ಆರಂಭವಾಗಲಿರುವ ಭಾರತ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯಲಿದೆ.

4 ಪಂದ್ಯಗಳಲ್ಲಿ 362 ರನ್ ಚಚ್ಚಿ ಅಬ್ಬರಿಸಿದ ಬೇಬಿ ಎಬಿಡಿಗೆ ಐಪಿಎಲ್‌ನಲ್ಲಿ ಈ ತಂಡದ ಪರ ಆಡುವಾಸೆ4 ಪಂದ್ಯಗಳಲ್ಲಿ 362 ರನ್ ಚಚ್ಚಿ ಅಬ್ಬರಿಸಿದ ಬೇಬಿ ಎಬಿಡಿಗೆ ಐಪಿಎಲ್‌ನಲ್ಲಿ ಈ ತಂಡದ ಪರ ಆಡುವಾಸೆ

ಹೀಗೆ ಇತ್ತಂಡಗಳ ನಡುವೆ ಆಯೋಜನೆಯಾಗಿರುವ ಈ ಸರಣಿಗಳು ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಬೇಕಿತ್ತು. ಆದರೆ ದೇಶದಾದ್ಯಂತ ಕೊರೋನಾವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿಯ ಎಲ್ಲಾ ಪಂದ್ಯಗಳನ್ನು ಅಹ್ಮದಾಬಾದ್ ನಗರದ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಯ ಎಲ್ಲಾ ಪಂದ್ಯಗಳನ್ನು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಸಲು ಯೋಜನೆ ಹಾಕಲಾಗಿದೆ.

ಭಾರತದ ಈ ಸ್ಟಾರ್ ಆಟಗಾರನಿಗೆ ನಾಯಕನಾಗಲು ಬೇಕಾದ ಪ್ರಮುಖ ಗುಣವೇ ಇಲ್ಲ ಎಂದ ರವಿಶಾಸ್ತ್ರಿಭಾರತದ ಈ ಸ್ಟಾರ್ ಆಟಗಾರನಿಗೆ ನಾಯಕನಾಗಲು ಬೇಕಾದ ಪ್ರಮುಖ ಗುಣವೇ ಇಲ್ಲ ಎಂದ ರವಿಶಾಸ್ತ್ರಿ

ಇನ್ನು ಇತ್ತಂಡಗಳ ನಡುವೆ ನಡೆಯಲಿರುವ ಸರಣಿಗಳಿಗೆ ಎರಡೂ ತಂಡಗಳ ಕ್ರಿಕೆಟ್ ಬೋರ್ಡ್‌ಗಳು ಈಗಾಗಲೇ ತಂಡಗಳನ್ನು ಪ್ರಕಟಿಸಿದ್ದು, ಇತ್ತಂಡಗಳ ಪೈಕಿ ಯಾವ ಆಟಗಾರರು ಉತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಮತ್ತು ತಂಡಕ್ಕೆ ಆಸರೆಯಾಗಿದ್ದಾರೆ ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಗಳು ನಡೆಯುತ್ತಿದ್ದು, ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡ್ಯಾರೆನ್ ಸ್ಯಾಮಿ ಮಾತನಾಡಿದ್ದು ಭಾರತ ನೆಲದಲ್ಲಿ ನಡೆಯಲಿರುವ ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಸರಣಿಗಳಲ್ಲಿ ಟೀಮ್ ಇಂಡಿಯಾಗೆ ವೆಸ್ಟ್ ಇಂಡೀಸ್ ತಂಡದ ಯಾವ ಆಟಗಾರ ತೊಂದರೆ ಕೊಡಲಿದ್ದಾನೆ ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಈ ಆಟಗಾರ ಟೀಮ್ ಇಂಡಿಯಾವನ್ನು ಕಾಡಲಿದ್ದಾರೆ

ಈ ಆಟಗಾರ ಟೀಮ್ ಇಂಡಿಯಾವನ್ನು ಕಾಡಲಿದ್ದಾರೆ

ಭಾರತ ಪ್ರವಾಸವನ್ನು ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿರುವ ಕೀರನ್ ಪೊಲಾರ್ಡ್ ಟೀಮ್ ಇಂಡಿಯಾಗೆ ತವರಿನಲ್ಲಿಯೇ ಕಾಡಲಿದ್ದಾರೆ ಎಂದು ಡ್ಯಾರೆನ್ ಸ್ಯಾಮಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕೀರನ್ ಪೊಲಾರ್ಡ್ ಭಾರತದ ನೆಲದಲ್ಲಿ ಹಲವಾರು ವರ್ಷಗಳಿಂದ ಆಟವನ್ನು ಆಡುತ್ತಿದ್ದು ಭಾರತದ ಸ್ಥಿತಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ, ಹೀಗಾಗಿ ಭಾರತದ ನೆಲದಲ್ಲಿ ಯಾವ ರೀತಿಯ ಆಟವನ್ನು ಆಡಬೇಕು ಎಂಬುದನ್ನು ತಿಳಿದಿರುವ ಅವರು ತಮ್ಮ ಅನುಭವವನ್ನು ಬಳಸಿ ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾವನ್ನು ಕಾಡಲಿದ್ದಾರೆ ಎಂದಿದ್ದಾರೆ.

ವಿಂಡೀಸ್ ತಂಡದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಸ್ಯಾಮಿ

ವಿಂಡೀಸ್ ತಂಡದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಸ್ಯಾಮಿ

ಇನ್ನೂ ಮುಂದುವರಿದು ಮಾತನಾಡಿರುವ ಡ್ಯಾರೆನ್ ಸಾಮಿ ವೆಸ್ಟ್ ಇಂಡೀಸ್ ತಂಡ ಇತ್ತೀಚೆಗಿನ ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದು ಅದೇ ರೀತಿಯ ಪ್ರದರ್ಶನವನ್ನು ಭಾರತದ ನೆಲದಲ್ಲಿಯೂ ಕೂಡ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಏಕದಿನ ಸರಣಿಗೆ ಪ್ರಕಟವಾಗಿರುವ ತಂಡಗಳ ಪಟ್ಟಿ

ಏಕದಿನ ಸರಣಿಗೆ ಪ್ರಕಟವಾಗಿರುವ ತಂಡಗಳ ಪಟ್ಟಿ

ಫೆಬ್ರವರಿ 6ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಪ್ರಕಟಿಸಲಾಗಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ಪಟ್ಟಿ ಈ ಕೆಳಕಂಡಂತಿದೆ.


ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್, ರಿಷಬ್ ಪಂತ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋರಾಜ್ ಯಾದವ್ , ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್.

ವೆಸ್ಟ್ ಇಂಡೀಸ್‌ ತಂಡ: ಕೀರಾನ್ ಪೊಲಾರ್ಡ್ (ನಾಯಕ), ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಬ್ರಾಂಡನ್ ಕಿಂಗ್, ಫ್ಯಾಬಿಯನ್ ಅಲೆನ್, ಎನ್ಕ್ರುಮಾ ಬೋನರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ನಿಕೋಲಸ್ ಪೂರನ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್, ಹೇಡನ್ ವಾಲ್ಶ್

AB De ರೀತಿಯಲ್ಲೇ ಆಡುವ Brevis ಯಾರು ? | Oneindia Kannada

Story first published: Saturday, January 29, 2022, 13:09 [IST]
Other articles published on Jan 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X