ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್: ಎರಡು ತಾಣದಲ್ಲಿ ವಿಂಡೀಸ್ ವಿರುದ್ಧದ ಸರಣಿ ಸಾಧ್ಯತೆ!

India vs West Indies: Limited over series likely to be played in Kolkata and Ahmedabad

ಮುಂದಿನ ತಿಂಗಳು ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಕೊರೊನಾವೈರಸ್ ಕಾರಣದಿಂದಾಗಿ ಈ ಸರಣಿಯ ಮೇಲೆ ಕರಿಛಾಯೆ ಆವರಿಸಿದೆ. ಏಕದಿನ ಹಾಗೂ ಟಿ20 ಮಾದರಿಯ ಪಂದ್ಯಗಳನ್ನು ಒಳಗೊಂಡ ಸರಣಿಯಲ್ಲಿ ಎರಡು ಮಾದರಿಯಲ್ಲಿ ತಲಾ ಮೂರು ಪಂದ್ಯಗಳು ನಡೆಯಲಿದೆ. ಆರು ಪಂದ್ಯಗಳಿಗಾಗಿ ಆರು ತಾಣಗಳನ್ನು ಹೆಸರಿಸಲಾಗಿದೆ.

ಆದರೆ ಈಗ ಕೊರೊನಾವೈರಸ್‌ನ ಆತಂಕದ ಕಾರಣದಿಂದಾಗ ಒಂದು ಅಥವಾ ಎರಡು ತಾಣದಲ್ಲಿ ಈ ಸರಣಿ ನಡೆಸಲು ಬಿಸಿಸಿಐ ಚಿಂತಿಸುತ್ತಿದೆ. ಹೀಗಾಗಿ ಕೊಲ್ಕತ್ತಾ ಹಾಗೂ ಅಹ್ಮದಾಬಾದ್‌ನಲ್ಲಿ ಏಕದಿನ ಹಾಗೂ ಟಿ20 ಸರಣಿಯ ಎಲ್ಲಾ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯಿದೆ. ಬಿಸಿಸಿಐ ಮಟ್ಟದಲ್ಲಿ ಈಗ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಎಲ್ಲಾ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಶೀಘ್ರದಲ್ಇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ.

ಅಂಡರ್ 19 ವಿಶ್ವಕಪ್: ನಾಯಕ ಯಶ್ ಧುಲ್ ಸೇರಿ 6 ಭಾರತೀಯ ಆಟಗಾರರಿಗೆ ತಗುಲಿದ ಕೊವಿಡ್ಅಂಡರ್ 19 ವಿಶ್ವಕಪ್: ನಾಯಕ ಯಶ್ ಧುಲ್ ಸೇರಿ 6 ಭಾರತೀಯ ಆಟಗಾರರಿಗೆ ತಗುಲಿದ ಕೊವಿಡ್

ಬಿಸಿಸಿಐನ ಪ್ರವಾಸ, ವೇಳಾಪಟ್ಟಿ ಹಾಗೂ ತಾಂತ್ರಿಕ ಸಮಿತಿ ಮಂಗಳವಾರ ಸಬೆ ನಡೆಸಿದ್ದು ದೇಶದಲ್ಲಿನ ಕೊರೊನಾವೈರಸ್ ಪರಿಸ್ಥಿತಿಯನ್ನು ಅವಲೋಕಿಸಿದೆ. ಈ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧಧ ಸರಣಿಯನ್ನು ಹೇಗೆ ಆಯೋಸಿಸಬಹುದು ಎಂದು ಚರ್ಚೆ ನಡೆಸಿದೆ. ಈ ಸಂದರ್ಭದಲ್ಲಿ ಏಕದಿನ ಸರಣಿ ಹಾಗೂ ಟಿ20 ಸರಣಿಯನ್ನು ಎರಡು ತಾಣಗಳ್ನು ನಡೆಸಲು ನಿರ್ಧರಿಸಲಾಗಿದ್ದು ಕೊಲ್ಕತ್ತಾ ಹಾಗೂ ಅಹ್ಮದಾಬಾದ್‌ನಲ್ಲಿ ನಡೆಸುವ ಬಗ್ಗೆ ಚರ್ಚೆಗಳು ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

ಏಕದಿನ ಸರಣಿಯನ್ನು ಒಂದು ತಾಣದಲ್ಲಿ ಆಯೋಜಿಸಿದರೆ ಟಿ20 ಸರಣಿಯನ್ನು ಮತ್ತೊಂದು ತಾಣದಲ್ಲಿ ಆಯೋಜಿಸುವ ಯೋಜನೆ ಮಾಡಲಾಗಿದೆ. ಈ ಪ್ರಸ್ತಾಪವನ್ನು ಸಮಿತಿ ಬಿಸಿಸಿಐಗೆ ಕಳುಹಿಸಿದ್ದು ಈ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಫೆಬ್ರವರಿ 6 ರಿಂದ ಆರಂಭವಾಗಲಿರುವ ಏಕದಿನ ಸರಣಿಯ ಮೊದಲ ಪಂದ್ಯ ಅಹಮದಾಬಾದ್‌ನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಎರಡನೇ ಏಕದಿನ ಪಂದ್ಯ ಫೆಬ್ರವರಿ 9 ರಂದು ಜೈಪುರದಲ್ಲಿ ಮತ್ತು ಮೂರನೇ ಏಕದಿನ ಪಂದ್ಯ ಫೆಬ್ರವರಿ 12 ರಂದು ಕೋಲ್ಕತ್ತಾದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ, ಟಿ20 ಸರಣಿಯ ಪಂದ್ಯಗಳು ಕ್ರಮವಾಗಿ ಕಟಕ್, ವಿಶಾಖಪಟ್ಟಣಂ ಮತ್ತು ತಿರುವನಂತಪುರಂನಲ್ಲಿ ನಡೆಸಲು ನಿರ್ಧಾರವನ್ನು ಮಾಡಲಾಗಿತ್ತು. ಈಗ ಈ ತಾಣಗಳು ಬದಲಾವಣೆಯಾಗುವ ಅನಿವಾರ್ಯತೆಯಿದೆ.

ಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿ

KL Rahul ಬಗ್ಗೆ ಅವರ ತಾಯಿ ಏನ್ ಹೇಳಿದ್ರು ಗೊತ್ತಾ! | Oneindia Kannada

ಇನ್ನು ಫಿಟ್‌ನೆಸ್ ಕಾರಣದಿಂದಾಗಿ ದಕ್ಷಿಣ ಆಪ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿರುವ ಭಾರತದ ಸೀಮಿತ ಓವರ್‌ಗಳ ತಂಡದ ನಾಯಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ವೇಳೆಗೆ ಆಡಲು ಸಂಪೂರ್ಣವಾಗಿ ಸಮರ್ಥರಾಗಲಿದ್ದಾರೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಪುನರಾಗಮನದ ನಿರೀಕ್ಷೆಯಿದೆ. ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು ರೋಹಿತ್ ಶರ್ಮಾ ಬೆಂಗಳೂರಿನ ಎನ್‌ಸಿಎನಲ್ಲಿ ಅದ್ಭುತವಾಗಿ ಚೇತರಿಕೆ ಕಾಣುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅವರು ಲಭ್ಯವಾಗುವ ಸಾಧ್ಯತೆಯಿದೆ. ಈ ಸರಣಿಗೆ ಕನಿಷ್ಠ ಮೂರು ವಾರಗಳ ಅಂತರವಿರುವುದರಿಂದ ಆ ವೇಳೆಗೆ ರೋಹಿತ್ ಸಂಪೂರ್ಣವಾಗಿ ಫಿಟ್ ಆಗಿರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.

Story first published: Thursday, January 20, 2022, 14:04 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X