ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್ 2ನೇ ಟೆಸ್ಟ್, ದಿನ 1: ಉತ್ತಮ ರನ್ ಕಲೆ ಹಾಕಿದ ವಿಂಡೀಸ್

IND v/s WI: ಭಾರತದ ಭರ್ಜರಿ ಬೌಲಿಂಗ್ | Oneindia Kannada
India vs West Indies Live Score, 2nd Test Day 1

ಹೈದರಾಬಾದ್, ಅಕ್ಟೋಬರ್ 12: ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಕ್ಟೋಬರ್ 12ರ ಶುಕ್ರವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ ನ ಮೊದಲ ದಿನದಾಟದಲ್ಲಿ ವೆಸ್ಟ್ ಇಂಡೀಸ್ 95 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 295 ರನ್ ಪೇರಿಸಿದೆ.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44265

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಗೆ ರಾಸ್ಟನ್ ಚೇಸ್ (98 ರನ್) ಮತ್ತು ಜಾನ್ಸನ್ ಹೋಲ್ಡರ್ (52 ರನ್) ಅರ್ಥ ಶತಕದ ಬಲ ದೊರೆಯಿತು. ಭಾರತದ ವಿರುದ್ಧದ ಮೊದಲ ಟೆಸ್ಟ್ ಗೆ ಹೋಲಿಸಿದರೆ ದ್ವಿತೀಯ ಟೆಸ್ಟ್ ನಲ್ಲಿ ಇಂಡೀಸ್ ಉತ್ತಮ ಮೊತ್ತವನ್ನೇ ಕಲೆ ಹಾಕಿದೆ.

ಇನ್ನು ವಿಂಡೀಸ್ ಪರ ಶೈ ಹೋಪ್ 36, ಕೀರನ್ ಪೋವೆಲ್ 22, ಶೇನ್ ಡೌರಿಚ್ 30 ರನ್ ಸೇರಿಸಿದ್ದು, ತಂಡದ ಮೊತ್ತ ಹೆಚ್ಚುವಲ್ಲಿ ನೆರವು ನೀಡಿತು. ಭಾರತ ಪರ ಕುಲದೀಪ್ ಯಾದವ್ ಮತ್ತು ಉಮೇಶ್ ಯಾದವ್ ತಲಾ 3 ವಿಕೆಟ್, ರವಿಚಂದ್ರನ್ ಅಶ್ವಿನ್ 1 ಕೆಡವಿದರು.

ಭಾರತ ತಂಡ: ಪೃಥ್ವಿ ಶಾ, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಶಬ್ ಪಂತ್ (ವಾ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್.

ವಿಂಡೀಸ್: ಕ್ರೆಗ್ ಬ್ರಾಥ್ವೈಟ್, ಕೀರನ್ ಪೊವೆಲ್, ಶೈ ಹೋಪ್, ಶಿಮ್ರೋನ್ ಹೆಟ್ಮರ್, ಸುನಿಲ್ ಅಂಬ್ರೀಸ್, ರಾಸ್ಟನ್ ಚೇಸ್, ಶೇನ್ ಡೌರಿಚ್ (W), ಜೇಸನ್ ಹೋಲ್ಡರ್ (ಸಿ), ದೇವೇಂದ್ರ ಬಿಶೂ, ಜೋಮೆಲ್ ವಾರ್ರಿಕನ್, ಶಾನನ್ ಗೇಬ್ರಿಯಲ್.

Story first published: Friday, October 12, 2018, 17:08 [IST]
Other articles published on Oct 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X