ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ವಿಂಡೀಸ್: ಟೆಸ್ಟ್‌ನಲ್ಲಿ ಇತ್ತಂಡಗಳ ಕುತೂಹಲಕಾರಿ ಅಂಕಿ-ಅಂಶಗಳು

Important facts before India vs West Indies test series
India Vs West Indies: Major stats and records between the two teams in Tests

ಆ್ಯಂಟಿಗುವಾ, ಆಗಸ್ಟ್ 20: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಆಗಸ್ಟ್ 22ರಿಂದ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ ಭಾಗವಾಗಿ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಆರಂಭಿಕ ಟೆಸ್ಟ್ ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.

3ನೇ ಆ್ಯಷಸ್ ಟೆಸ್ಟ್‌ನಿಂದ ಆಸೀಸ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಹೊರಕ್ಕೆ3ನೇ ಆ್ಯಷಸ್ ಟೆಸ್ಟ್‌ನಿಂದ ಆಸೀಸ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಹೊರಕ್ಕೆ

1948/49ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ತಂಡ, ಐದು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ 4ನೇ ಟೆಸ್ಟ್ ಜಯದೊಂದಿಗೆ ಸರಣಿಯನ್ನು 1-0ಯಿಂದ ಜಯಿಸಿತ್ತು. ಭಾರತ ಐದು ಪಂದ್ಯಗಳ ಟೆಸ್ಟ್‌ಗಾಗಿ ವಿಂಡೀಸ್‌ಗೆ ಪ್ರವಾಸ ಕೈಗೊಂಡಿದ್ದು 1952/53ರಲ್ಲಿ. ಇದರಲ್ಲೂ ವಿಂಡೀಸ್ 1-0ಯ ಸರಣಿ ಗೆಲುವು ದಾಖಲಿಸಿತ್ತು.

ಪೂಜಾರ, ರಹಾನೆ, ವಿಹಾರಿ ಆಟದ ಸೊಬಗು: ವಿಂಡೀಸ್ ಅಭ್ಯಾಸ ಪಂದ್ಯ ಡ್ರಾಪೂಜಾರ, ರಹಾನೆ, ವಿಹಾರಿ ಆಟದ ಸೊಬಗು: ವಿಂಡೀಸ್ ಅಭ್ಯಾಸ ಪಂದ್ಯ ಡ್ರಾ

ಈ ಬಾರಿ ವಿರಾಟ್ ಕೊಹ್ಲಿ ಬಳಗ ವಿಂಡೀಸ್ ಸರಣಿಯನ್ನು ಗೆದ್ದುಕೊಳ್ಳುವುದು ಬಹುತೇಕ ಖಚಿತ. ಇತ್ತಂಡಗಳ ಟೆಸ್ಟ್ ಸರಣಿ ಅನೇಕ ವಿಚಾರಕ್ಕೆ ವಿಶೇಷವೂ ಅನ್ನಿಸಿದೆ.

ಭಾರತದ ಮೊದಲ ಗೆಲುವು

ಭಾರತದ ಮೊದಲ ಗೆಲುವು

ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತ ಕ್ರಿಕೆಟ್ ತಂಡ ಮೊದಲ ಟೆಸ್ಟ್ ಸರಣಿ ಗೆದ್ದಿದ್ದು 1970/71ರ ಪ್ರವಾಸದ ವೇಳೆ. ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0ಯ ಅಂತರದಿಂದ ಗೆದ್ದಿತ್ತು. ಪೋರ್ಟ್ ಆಫ್ ಸ್ಟೇನ್‌ನಲ್ಲಿ ನಡೆದಿದ್ದ ಪಂದ್ಯವನ್ನು ಭಾರತ 7 ವಿಕೆಟ್‌ನಿಂದ ಜಯಿಸಿತ್ತು. ಈ ಟೆಸ್ಟ್ ಸರಣಿಯಲ್ಲಿ ಸುನಿಲ್ ಗವಾಸ್ಕರ್ ಪಾದಾರ್ಪಣೆ ಮಾಡಿದ್ದರು.

ಮತ್ತೆ ಭಾರತ ಜಯಭೇರಿ

ಮತ್ತೆ ಭಾರತ ಜಯಭೇರಿ

ಆ ಬಳಿಕ 2006ರಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ನಾಯಕತ್ವದಲ್ಲೂ ಭಾರತ, ಕೆರಿಬಿಯನ್ ನೆಲದಲ್ಲಿ 1-0ಯಿಂದ ಟೆಸ್ಟ್ ಸರಣಿ ಗೆದ್ದಿತ್ತು. ಅದಾಗಿ 2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ವಿಂಡೀಸ್ ಪ್ರವಾಸ ಸರಣಿಯಲ್ಲಿ 1-0ಯ ಜಯಭೇರಿ, 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2-0ಯಿಂದ ಸರಣಿ ಗೆದ್ದಿತ್ತು.

ಗವಾಸ್ಕರ್ ಹೆಸರಲ್ಲಿ ದಾಖಲೆ

ಗವಾಸ್ಕರ್ ಹೆಸರಲ್ಲಿ ದಾಖಲೆ

ಭಾರತ-ವಿಂಡೀಸ್ ಟೆಸ್ಟ್ ಸರಣಿಗಳಲ್ಲಿ ಅತ್ಯಧಿಕ ರನ್ ದಾಖಲೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೆಸರಿನಲ್ಲಿದೆ. ಗವಾಸ್ಕರ್ ವೆಸ್ಟ್ ಇಂಡೀಸ್ ವಿರುದ್ಧ 27 ಟೆಸ್ಟ್ ನಲ್ಲಿ 65.45 ಸರಾಸರಿಯಲ್ಲಿ 2749 ರನ್ ಗಳಿಸಿದ್ದಾರೆ. ಇದರಲ್ಲಿ 13 ಶತಕಗಳು ಮತ್ತು 7 ಅರ್ಧಶತಕಗಳೂ ಸೇರಿವೆ.

ದ್ರಾವಿಡ್‌ಗೆ ದ್ವಿತೀಯ ಸ್ಥಾನ

ದ್ರಾವಿಡ್‌ಗೆ ದ್ವಿತೀಯ ಸ್ಥಾನ

ಇತ್ತಂಡಗಳ ಟೆಸ್ಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ದ್ವಿತೀಯ ಭಾರತೀಯನಾಗಿ 'ಗ್ರೇಟ್‌ ವಾಲ್' ಖ್ಯಾತಿಯ ದ್ರಾವಿಡ್ ಗುರುತಿಸಿಕೊಂಡಿದ್ದಾರೆ. ದ್ರಾವಿಡ್ 23 ಪಂದ್ಯಗಳಲ್ಲಿ 1978 ರನ್ ಸಾಧನೆ ಹೊಂದಿದ್ದಾರೆ. ಇದರಲ್ಲಿ 5 ಶತಕ, 13 ಅರ್ಧಶತಕಗಳು ಸೇರಿವೆ. ಇತ್ತಂಡಗಳ ಟೆಸ್ಟ್‌ನಲ್ಲಿ ಅತ್ಯಧಿಕ ವಿಕೆಟ್ ದಾಖಲೆ ಮಾಜಿ ನಾಯಕ ಕಪಿಲ್ ದೇವ್ ಹೆಸರಿನಲ್ಲಿದೆ. ದೇವ್, 25 ಪಂದ್ಯಗಳಲ್ಲಿ 89 ವಿಕೆಟ್ ಪಡೆದಿದ್ದಾರೆ.

Story first published: Wednesday, August 21, 2019, 11:11 [IST]
Other articles published on Aug 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X