ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒತ್ತಡದಲ್ಲಿರುವ ಕೊಹ್ಲಿ ಪಡೆ, ವಿಂಡೀಸ್ ವಿರುದ್ಧ ಗೆಲ್ಲುವುದೇ?

By Mahesh

ಪೋರ್ಟ್ ಆಫ್ ಸ್ಪೇನ್, ಜೂನ್ 23: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಸೋಲು ಕಂಡ ಭಾರತ ತಂಡವು ಶುಕ್ರವಾರ(ಜೂನ್ 23)ದಂದು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಕೋಚ್ ಅನಿಲ್ ಕುಂಬ್ಳೆ ಅನುಪಸ್ಥಿತಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಪಡೆ ಉತ್ತಮ ಪ್ರದರ್ಶನ ನೀಡುವ ಒತ್ತಡದಲ್ಲಿದೆ.

ಭಾರತದಿಂದ ವೆಸ್ಟ್ ಇಂಡೀಸ್ ಪ್ರವಾಸ ವೇಳಾಪಟ್ಟಿ

ರೋಹಿತ್ ಶರ್ಮ ಅವರು ಈ ಪ್ರವಾಸದಿಂದ ಹೊರಗುಳಿದಿರುವುದರಿಂದ ಅಜಿಂಕ್ಯ ರಹಾನೆ ಅವರು ಆರಂಭಿಕ ಆಟಗಾರರಾಗಿ ಆಡಲಿದ್ದಾರೆ. ಏಕದಿನ ಸರಣಿಯುದ್ದಕ್ಕೂ ರಹಾನೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ ಎಂದು ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಡ್ರೆಸಿಂಗ್ ರೂಮ್ ಮಾತುಕತೆ ಹೊರಗಡೆ ಪ್ರಸಾರವಾಗುವುದು ಸರಿಯಲ್ಲ. ಕುಂಬ್ಳೆ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಹೊಸ ಮುಖಗಳಾಗಿದ್ದು, ಇಬ್ಬರಲ್ಲಿ ಯಾರಿಗೆ ಮೊದಲು ಅವಕಾಶ ಸಿಗುವುದೋ ಕಾದು ನೋಡಬೇಕಿದೆ.. ಸಂಭಾವ್ಯ ಆಡುವ ಹನ್ನೊಂದು ಮಂದಿ ತಂಡ ಮುಂದಿದೆ...ಪಂದ್ಯದ ಸಮಯ: ಸಂಜೆ 6:30, ಟೆನ್ ಸ್ಫೋಟ್ಸ್ ನಲ್ಲಿ ಪ್ರಸಾರ.

ವಿಂಡೀಸ್ ಹಾಗೂ ಭಾರತದ ಬಲಾಬಲ

ವಿಂಡೀಸ್ ಹಾಗೂ ಭಾರತದ ಬಲಾಬಲ

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮ ಮಾಡಿಕೊಂಡಿರುವ ಜಾಸನ್ ಹೋಲ್ಡರ್ ಪಡೆ ಮುಂದೆ ಚಾಂಪಿಯನ್ಸ್ ಟ್ರೋಫಿ ರನ್ನರ್ ಅಪ್ ವಿರಾಟ್ ಕೊಹ್ಲಿ ಪಡೆ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಆದರೆ, ತಂಡದ ಆತ್ಮವಿಶ್ವಾಸ ಹೆಚ್ಚಿಸಲು ಇದು ಸವಾಲಿನ ಸರಣಿಯಾಗಲಿದೆ. ವಿಂಡೀಸ್ ಬೌನ್ಸಿ ಪಿಚ್ ಗಳಲ್ಲಿ ಬ್ಯಾಟ್ಸ್ ಮನ್ ಹಾಗೂ ಬೌಲರ್ ಗಳು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಸಮಬಲದ ಹೋರಾಟಾ ನಿರೀಕ್ಷೆಯಿದೆ.

ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ

ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ಸಿಕ್ಕಿದೆ. ಹೀಗಾಗಿ ಈ ಸರಣಿಯುದ್ದಕ್ಕೂ ರಹಾನೆ ಅವರು ಓಪನರ್ ಆಗಿ ಶಿಖರ್ ಧವನ್ ಜತೆ ಕಾಣಿಸಿಕೊಳ್ಳಲಿದ್ದಾರೆ. ಮತ್ತೆ ಲಯಕ್ಕೆ ಮರಳಿ ಏಕದಿನ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ರಹಾನೆಗೆ ಇದು ಉತ್ತಮ ಅವಕಾಶ.

ಶಿಖರ್ ಧವನ್

ಶಿಖರ್ ಧವನ್

ಚಾಂಪಿಯನ್ಸ್ ಟ್ರೋಫಿಯ ಉತ್ತಮ ಬ್ಯಾಟ್ಸ್ ಮನ್ ಎನಿಸಿಕೊಂಡು ಗೋಲ್ಡ್ ಬ್ಯಾಟ್ ಗೆದ್ದಿರುವ ಶಿಖರ್ ಧವನ್ ಅವರು ವಿಂಡೀಸ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಧವನ್ ಮೇಲೆ ಹೆಚ್ಚಿನ ಒತ್ತಡ ಇರುವುದು ಸಹಜ. ಆದರೆ, ಧವನ್ ಉತ್ತಮ ಲಯದಲ್ಲಿರುವುದರಿಂದ ತಂಡಕ್ಕೆ ಒಳ್ಳೆ ಆರಂಭ ಒದಗಿಸುವ ಸಾಧ್ಯತೆಯಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಬ್ಯಾಟ್ಸ್ ಮನ್ ಆಗಿ ಮಿಂಚುತ್ತಿರುವ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಲು ಸೂಕ್ತ ಆಯ್ಕೆಯಾಗಿದ್ದಾರೆ. ಆದರೆ, ನಾಯಕತ್ವದ ಒತ್ತಡದಿಂದ ಕೆಲವೊಮ್ಮೆ ಕಳಪೆ ರೀತಿಯಲ್ಲಿ ಔಟಾಗುತ್ತಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಪ್ರಯೋಗ ಮಾಡಿ, ಫಲಿತಾಂಶ ಕಂಡುಕೊಳ್ಳಲು ಇದು ಸೂಕ್ತ ಸರಣಿ. ಆದರೆ, ಆ ಧೈರ್ಯ ಮಾಡುವ ಮನಸ್ಸು ಕೊಹ್ಲಿಗಿದೆಯೇ ಎಂಬುದು ಪ್ರಶ್ನಾರ್ಹ.

ಯುವರಾಜ್ ಸಿಂಗ್

ಯುವರಾಜ್ ಸಿಂಗ್

ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರಿಗೆ ಇದು ಸವಾಲಿನ ಸರಣಿಯಾಗಿದ್ದು, ಈ ಸರಣಿಯಲ್ಲಿ ಉತ್ತಮವಾಗಿ ಆಡಿದರೆ ಮುಂದಿನ ಸರಣಿಗಳಿಗೆ ಆಯ್ಕೆಯಾಗಿ ವಿಶ್ವಕಪ್ ತನಕ ತಂಡದಲ್ಲಿ ಉಳಿಯಬಹುದು. ನಾಲ್ಕನೇ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ ಸೂಕ್ತ ಎನಿಸಿದರೂ, ಕ್ರಮಾಂಕ ಬದಲಾವಣೆಗೆ ಹೊಂದಿಕೊಳ್ಳಬಹುದಾದ ಜಾಣ್ಮೆ ಇವರಲ್ಲಿದೆ.

ಎಂಎಸ್ ಧೋನಿ

ಎಂಎಸ್ ಧೋನಿ

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಎಂಎಸ್ ಧೋನಿ ಅವರು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಕೆಳ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯನ್ನು ರೂಢಿಸಿಕೊಂಡಿದ್ದಾರೆ. ತಂಡದಲ್ಲಿ ಬದಲಿಯಾಗಿ ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಅವರು ಕಾಯುತ್ತಿದ್ದಾರೆ ಎಂಬ ಅರಿವಿನೊಂದಿಗೆ ಧೋನಿ ಎಚ್ಚರಿಕೆಯ ಆಟವಾಡಬೇಕಿದೆ.

ಕೇದಾರ್ ಜಾಧವ್

ಕೇದಾರ್ ಜಾಧವ್

ವಿರಾಟ್ ಕೊಹ್ಲಿ ನಂತರ ಮೂರನೇ ಕ್ರಮಾಂಕದಲ್ಲಿ ಆಡಬಲ್ಲ ಸಮರ್ಥ ಬ್ಯಾಟ್ಸ್ ಮನ್ ಆಗಿರುವ ಕೇದಾರ್ ಜಾಧವ್ ಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ಆರನೇ ಕ್ರಮಾಂಕದಲ್ಲಿ ಪಿಂಚ್ ಹಿಟ್ಟರ್ ರೀತಿ ಆಡುವುದು ಇವರ ಸಹಜ ಆಟವಲ್ಲ. ಇನ್ನಿಂಗ್ಸ್ ಕಟ್ಟಿ ಬೆಳೆಸುವ ಸಾಮರ್ಥ್ಯವುಳ್ಳ ಕೇದಾರ್ ರನ್ನು ಸರಿಯಾಗಿ ಬಳಸಿಕೊಳ್ಳುವುದು ಬಿಡುವುದು ಕೊಹ್ಲಿ ಕೈಲಿದೆ.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಬ್ಯಾಟ್ಸ್ ಮನ್ ಆಗಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ್ ಅವರು ಬೌಲಿಂಗ್ ನಲ್ಲಿ ಇನ್ನಷ್ಟು ಮೊನಚು ಪಡೆಯಬೇಕಿದೆ. ಆಲ್ ರೌಂಡರ್ ಎಂಬ ಕಾರಣಕ್ಕೆ ತಂಡದಲ್ಲಿರುವ ಹಾರ್ದಿಕ್ ಅವರು ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಈ ಸರಣಿಯಲ್ಲೂ ಮುಂದುವರೆಸುವ ನಿರೀಕ್ಷೆ ಇದೆ.

ರವೀಂದ್ರ ಜಡೇಜ

ರವೀಂದ್ರ ಜಡೇಜ

ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಹೇಳಿಕೊಳ್ಳುವಂಥ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ರವೀಂದ್ರ ಜಡೇಜ ಅವರು ಮೊದಲ ಪಂದ್ಯಕ್ಕೆ ಆಯ್ಕೆಯಾದರೆ ಅವರ ಅದೃಷ್ಟ. ಮುಂದಿನ ಪಂದ್ಯಗಳಿಗೆ ಆಯ್ಕೆಯಾಗುವುದು ಅವರ ಪ್ರದರ್ಶನ ಮೇಲೆ ಅವಲಂಬಿಸಿದೆ.

ಆರ್ ಅಶ್ವಿನ್

ಆರ್ ಅಶ್ವಿನ್

ವೆಸ್ಟ್ ಇಂಡೀಸ್ ಪಿಚ್ ಗಳಲ್ಲಿ ಆರ್ ಅಶ್ವಿನ್ ಅವರ ಸ್ಪಿನ್ ಜಾದೂ ನಡೆಯುವುದೇ? ಕುತೂಹಲದಿಂದ ಕಾದುನೋಡಬೇಕಿದೆ. ಅಶ್ವಿನ್ ಕೂಡಾ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ.

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ಭಾರತದ ಪ್ರಮುಖ ವೇಗಿಯಾಗಿರುವ ಭುವನೇಶ್ವರ್ ಕುಮಾರ್ ಅವರು ಈ ಸರಣಿಯಲ್ಲಿ ಮಹತ್ವದ ಪಾತ್ರವಹಿಸಬೇಕಿದೆ. ಜಸ್ ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಭುವಿ ಅವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ.

ಉಮೇಶ್ ಯಾದವ್

ಉಮೇಶ್ ಯಾದವ್

ಮೊದಲ ಪಂದ್ಯಕ್ಕೆ ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್ ಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಬೂಮ್ರಾ ಅನುಪಸ್ಥಿತಿಯಲ್ಲಿ ಯಾದವ್ ಅವರ ಮೇಲೆ ಹೆಚ್ಚಿನ ನಿರೀಕ್ಷಿಯಿದೆ.

ಭಾರತ ವಿರುದ್ಧ ವೆಸ್ಟ್ ಇಂಡೀಸ್

ಭಾರತ ವಿರುದ್ಧ ವೆಸ್ಟ್ ಇಂಡೀಸ್

ಭಾರತ : ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಯುವರಾಜ್ ಸಿಂಗ್, ಎಂಎಸ್ ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಉಮೇಶ್ ಯಾದವ್.

ವೆಸ್ಟ್‌ಇಂಡೀಸ್ : ಜಾಸನ್ ಹೋಲ್ಡರ್(ನಾಯಕ), ಜೋನಾಥನ್ ಕಾರ್ಟೆರ್, ಮಿಗ್ಯುಲ್ ಕಮಿನ್ಸ್ , ಅಲ್ಝಾರಿ ಜೋಸೆಫ್, ಜಾಸನ್ ಮುಹಮ್ಮದ್, ಕೀರನ್ ಪೊಲಾರ್ಡ್, ಕೆಸ್ರಿಕ್ ವಿಲಿಯಮ್ಸ್, ದೇವೇಂದ್ರ ಬಿಶೂ, ರೋಸ್ಟನ್ ಚೇಸ್, ಶಾಯ್ ಹೊಪೆ(ವಿಕೆಟ್ ಕೀಪರ್), ಎವಿನ್ ಲೂವಿಸ್, ಆಶ್ಲೇ ನರ್ಸ್, ರಾವ್‌ಮಾನ್ ಪೊವೆಲ್.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X