ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ಸರಣಿಗೆ ಭಾರತ ತಂಡ: ಹೇಗಿರಲಿದೆ ಟೀಮ್ ಇಂಡಿಯಾ!

BCCI announces Indian cricket squad for West Indies series today | Oneindia kannada
India vs West Indies: Rohit’s workload to be discussed

ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿ ನಡೆಯುತ್ತಿದ್ದು ಈ ಸರಣಿ ಮುಗಿಯುತ್ತಿದ್ದಂತೆಯೇ ಮತ್ತೊಂದು ಸರಣಿಗೆ ಭಾರತ ಸಿದ್ಧವಾಗಬೇಕಿದೆ. ವೆಸ್ಟ್‌ಇಂಡೀಸ್ ವಿರುದ್ಧ 3 ಪಂದ್ಯಗಳ ಟಿ-ಟ್ವೆಂಟಿ ಸರಣಿ ನಡೆಯಲಿದ್ದು ನಾಳೆ ಭಾರತ ತಂಡದ ಆಯ್ಕೆ ನಡೆಯಲಿದೆ. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಈ ಸರಣಿಯಲ್ಲಿ ಆಡುತ್ತಾರೋ, ಇಲ್ವೋ ಅನ್ನೋದು ಸಧ್ಯಕ್ಕಿರುವ ಕುತೂಹಲ.

ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಮಂಡಳಿ ನಾಳೆ ಸಭೆ ಸೇರಲಿದ್ದು ವಿಂಡಿಸ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲಿದ್ದಾರೆ. ಇದು ಸಿ ಎಸ್‌ಕೆ ಪ್ರಸಾದ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕೊನೆಯ ಆಯ್ಕೆ ಮಂಡಳಿ ಸಭೆಯೂ ಹೌದು.

ರೆಡ್‌ ಬಾಲ್ vs ಪಿಂಕ್‌ ಬಾಲ್: ಎರ್ಡರ ಮಧ್ಯೆ ಅಂಥದ್ದೇನೈತೆ ಇಸೇಸ?ರೆಡ್‌ ಬಾಲ್ vs ಪಿಂಕ್‌ ಬಾಲ್: ಎರ್ಡರ ಮಧ್ಯೆ ಅಂಥದ್ದೇನೈತೆ ಇಸೇಸ?

ಗಾಯದ ಸಮಸ್ಯೆ ಸೇರಿದಂತೆ ಅನೇಕ ಪ್ರಮುಖ ಆಟಗಾರರು ವಿಶ್ರಾಂತಿಯಲ್ಲಿದ್ದಾರೆ. ಮಾಜಿ ನಾಯಕ ಧೋನಿ, ಆಲ್ರೌಂಡ್ ಹಾರ್ದಿಕ್ ಪಾಂಡ್ಯಾ, ವೇಗಿಗಳಾದ ಜಸ್ಪ್ರಿತ್ ಬೂಮ್ರಾ, ಭುವನೇಶ್ವರ್ ಕುಮಾರ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಇವರ್ಯಾರೂ ಮುಂದಿನ ಸರಣಿಯಲ್ಲೂ ಕಾಣಿಸಿಕೊಳ್ಳುವುದಿಲ್ಲ.

ರೋಹಿತ್‌ಗೆ ಸಿಗುತ್ತಾ ವಿಶ್ರಾಂತಿ?

ರೋಹಿತ್‌ಗೆ ಸಿಗುತ್ತಾ ವಿಶ್ರಾಂತಿ?

ಸತತವಾಗಿ ಕ್ರಿಕೆಟ್‌ ಆಡುತ್ತಿರುವ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಬೇಕೆಂಬ ಮಾತುಗಳು ಕೇಳಿ ಬರುತ್ತಿದೆ. ಇದು ನಾಳಿನ ಮೀಟಿಂಗ್‌ನಲ್ಲಿ ನಡೆಯುವ ಪ್ರಮುಖ ಚರ್ಚೆಯಾಗಿರಲಿದೆ. ಕಳೆದ ಒಂದು ವರ್ಷದಿಂದ ರೋಹಿತ್ ಶರ್ಮಾ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್ ಸೇರಿದಂತೆ ನಿರಂತರ 60ಪಂದ್ಯಗಳಲ್ಲಿ ಕಾಣಿಸಿಕೊಳ್ಳತ್ತಲೇ ಇದ್ದಾರೆ. ಮುಂದಿನ ಕ್ಯಾಲೆಂಡರ್ ವರ್ಷದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸುದೀರ್ಘ ಸರಣಿ ಹಾಗೂ ಟಿ-ಟ್ವೆಂಟಿ ವಿಶ್ವಕಪ್‌ಅನ್ನು ಗಮನದಲ್ಲಿಟ್ಟುಕೊಂಡು ವಿಶ್ರಾಂತಿ ನೀಡಿದರೂ ಅಚ್ಚರಿಯಿಲ್ಲ.

ಅಗ್ನಿಪರೀಕ್ಷೆಯಲ್ಲಿ ಧವನ್ ಪಾಸಾಗ್ತಾರಾ?

ಅಗ್ನಿಪರೀಕ್ಷೆಯಲ್ಲಿ ಧವನ್ ಪಾಸಾಗ್ತಾರಾ?

ಮತ್ತೋರ್ವ ಆರಂಭಿಕ ಆಟಗಾರ ಶಿಖರ್ ಧವನ್ ಕೆಟ್ಟ ಫಾರ್ಮ್ ನಿಂದ ಬಳಲುತ್ತಿದ್ದಾರೆ. ಕಳೆದ ಹಲವು ಪಂದ್ಯಗಳಲ್ಲಿ ಶಿಖರ್ ಧವನ್ನು ರನ್ ಗಳಿಸಲು ಪರದಾಡಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಕ್ರಮವಾಗಿ 41(42 ಎಸೆತ), 31(27ಎಸೆತ) 19(16ಎಸೆತ) ಮಾತ್ರ ಗಳಿಸಲು ಶಕ್ತರಾಗಿದ್ದರು. ಹೀಗಾಗಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಬಗ್ಗೆಯೂ ಅನುಮಾನಗಳಿವೆ.

ಕ್ರಿಕೆಟ್ ನಿವೃತ್ತಿ ಬಗ್ಗೆ ಯೂ ಟರ್ನ್ ಹೊಡೆದ ಲಂಕಾ ವೇಗಿ ಲಸಿತ್ ಮಾಲಿಂಗ

ರಿಷಬ್ ಪಂತ್ ಕಥೆಯೇನು?

ರಿಷಬ್ ಪಂತ್ ಕಥೆಯೇನು?

ಇನ್ನು ಕಳೆದ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಯುವ ಕೀಪರ್ ರಿಷಬ್ ಪಂತ್ ಪ್ರದರ್ಶನ ಗಮನಾರ್ಹವಾಗಿರಲಿಲ್ಲ. ಹೀಗಾಗಿ ಹಲವು ಸಮಯಗಳಿಂದ ಅವಕಾಶಕ್ಕಾಗಿ ಕಾಯುತ್ತಿರುವ ಸಂಜು ಸ್ಯಾಮ್ಸನ್ ಈ ಸರಣಿಯಲ್ಲಿ ಅವಕಾಶವನ್ನು ಪಡೆದುಕೊಳ್ಳುತ್ತಾರೋ ಅನ್ನೋದು ನಾಳೆ ಗೊತ್ತಾಗಲಿದೆ.

ಚಾಹಲ್ ಮೋಡಿಗೆ ಎದುರಾಳಿಗಳು ನಡುಕ

ಚಾಹಲ್ ಮೋಡಿಗೆ ಎದುರಾಳಿಗಳು ನಡುಕ

ಸ್ಪಿನ್ ವಿಭಾಗದಲ್ಲಿ ಚಾಹಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ರವೀಂದ್ರ ಜಡೇಜಾ ಕಡೆಯಿಂದ ಚುಟುಕು ಕ್ರಿಕೆಟ್‌ನಲ್ಲಿ ಹೇಳಿಕೊಳ್ಳುವಂತಾ ಪ್ರದರ್ಶನ ಇತ್ತೀಚಿನ ಪಂದ್ಯಗಳಿಂದ ಬಂದಿಲ್ಲ.

ವೇಗದ ಬೌಲಿಂಗ್‌ಗೆ ಹೊಸ ಅಸ್ತ್ರ

ವೇಗದ ಬೌಲಿಂಗ್‌ಗೆ ಹೊಸ ಅಸ್ತ್ರ

ಹೊಸ ಟಿ-ಟ್ವೆಂಟಿ ಸೆನ್ಸೇಶನ್ ದೀಪಕ್ ಚಾಹರ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವುದು ಪಕ್ಕಾ. ಅನುಭವಿಗಳ ಅನುಪಸ್ಥಿತಿಯನ್ನು ಚಾಹರ್ ತುಂಬುವ ಭರವಸೆ ನೀಡಿದ್ದಾರೆ. ಆದರೆ ಖಲೀಲ್ ಅಹ್ಮದ್ ಎಕಾನಮಿ ರೇಟ್ ತಂಡಕ್ಕೆ ಹಿನ್ನೆಡೆಯಾಗಿದೆ.

Story first published: Wednesday, November 20, 2019, 18:59 [IST]
Other articles published on Nov 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X