ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್‌ಮ್ಯಾನ್ ರೋಹಿತ್!

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ರೋಹಿತ್ ಶರ್ಮಾ | Oneindia Kannada
India vs West Indies: Rohit Sharma joins Afridi and Gayle in list of six hitters

ಮುಂಬೈ, ಡಿಸೆಂಬರ್ 11: ಅಂತಾರಾಷ್ಟ್ರೀಯ ದಾಖಲೆ ವಿಚಾರದಲ್ಲಿ ರೋಹಿತ್ ಶರ್ಮಾ ಅಪರಿಚಿತ ಹೆಸರೇನಲ್ಲ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮುಡಿಗೆ ಮತ್ತೊಂದು ವಿಶ್ವದಾಖಲೆಯ ಗರಿ ಸೇರಿಕೊಂಡಿದೆ. ವೆಸ್ಟ್ ಇಂಡೀಸ್‌ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಶರ್ಮಾ ದಾಖಲೆ ನಿರ್ಮಿಸಿದ್ದಾರೆ.

ರೋಹಿತ್, ರಾಹುಲ್, ಕೊಹ್ಲಿ ಅಬ್ಬರ: ಟೀಮ್ ಇಂಡಿಯಾ ಮಡಿಲಿಗೆ ಟಿ20 ಸರಣಿರೋಹಿತ್, ರಾಹುಲ್, ಕೊಹ್ಲಿ ಅಬ್ಬರ: ಟೀಮ್ ಇಂಡಿಯಾ ಮಡಿಲಿಗೆ ಟಿ20 ಸರಣಿ

ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ (ಡಿಸೆಂಬರ್ 11) ನಡೆದ ಭಾರತ vs ವೆಸ್ಟ್ ಇಂಡೀಸ್, ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಪರ (ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ) 400+ ಸಿಕ್ಸ್‌ಗಳನ್ನು ಬಾರಿಸಿದ ಮೊದಲ ಆಟಗಾರನಾಗಿ ಶರ್ಮಾ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಐಪಿಎಲ್ 2020:ಉತ್ತಮ ಮೊತ್ತಕ್ಕೆ ಹರಾಜಾಗುವ ವೆಸ್ಟ್‌ ಇಂಡೀಸ್‌ನ 4 ಆಟಗಾರರು ಇವರು!ಐಪಿಎಲ್ 2020:ಉತ್ತಮ ಮೊತ್ತಕ್ಕೆ ಹರಾಜಾಗುವ ವೆಸ್ಟ್‌ ಇಂಡೀಸ್‌ನ 4 ಆಟಗಾರರು ಇವರು!

ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ 3ನೇ ಬ್ಯಾಟ್ಸ್‌ಮನ್ ಹೆಗ್ಗಳಿಕೆಗೂ ಶರ್ಮಾ ಪಾತ್ರರಾಗಿದ್ದಾರೆ. ಭಾರತ ಈ ಪಂದ್ಯವನ್ನು 67 ರನ್‌ಗಳಿಂದ ಗೆದ್ದಿತು ಕೂಡ.

ರೋಹಿತ್ ಸ್ಫೋಟಕ ಅರ್ಧ ಶತಕ

ರೋಹಿತ್ ಸ್ಫೋಟಕ ಅರ್ಧ ಶತಕ

ಮುಂಬೈ ಟಿ20 ಪಂದ್ಯದಲ್ಲಿ ರೋಹಿತ್ ಸ್ಫೋಟಕ ಅರ್ಧ ಶತಕ ಬಾರಿಸಿದರು. 34 ಎಸೆತಗಳಲ್ಲಿ ಶರ್ಮಾ 71 ರನ್ ಕೊಡುಗೆಯಿತ್ತರು. ಇನ್ನು ಕೆಎಲ್ ರಾಹುಲ್ (91 ರನ್/56 ಎ), ನಾಯಕ ವಿರಾಟ್ ಕೊಹ್ಲಿ (70 ರನ್‌/29 ಎ) ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿದ್ದರಿಂದ ಭಾರತ 240 ರನ್ ಮಾಡಿತ್ತು. ಭಾರತ ಈ ಪಂದ್ಯವನ್ನು 67 ರನ್‌ಗಳಿಂದ ಗೆದ್ದಿತು ಕೂಡ.

400ಕ್ಕೆ 1 ಸಿಕ್ಸ್‌ ಬೇಕಿತ್ತು

400ಕ್ಕೆ 1 ಸಿಕ್ಸ್‌ ಬೇಕಿತ್ತು

ವಾಂಖೆಡೆ ಪಂದ್ಯಕ್ಕೂ ಮುನ್ನ ಅಂತಾರಾಷ್ಟ್ರೀಯ 400 ಸಿಕ್ಸರ್‌ಗಳನ್ನು ಪೂರೈಸಲು ರೋಹಿತ್ ಶರ್ಮಾಗೆ ಕೇವಲ 1 ಸಿಕ್ಸರ್‌ನ ಅವಶ್ಯಕತೆಯಿತ್ತು. ಆರಂಭಿಕ ಎರಡು ಪಂದ್ಯಗಳಲ್ಲಿ ರೋಹಿತ್ ಸಿಕ್ಸ್‌ ರಹಿತ 8, 15 ರನ್‌ ಗಳಿಸಿ ಅವಕಾಶ ಕಳೆದುಕೊಂಡಿದ್ದರು. ಆದರೆ ಅಂತಿಮ ಪಂದ್ಯದಲ್ಲಿ ಶರ್ಮಾ ಬ್ಯಾಟಿಂದ 6 ಬೌಂಡರಿ, 5 ಸಿಕ್ಸರ್‌ಗಳು ಸಿಡಿದಿದ್ದವು.

ನಂ.1 ಸ್ಥಾನದಲ್ಲಿ ಗೇಲ್

ನಂ.1 ಸ್ಥಾನದಲ್ಲಿ ಗೇಲ್

ಅಂತಾರಾಷ್ಟ್ರೀಯ ಅತ್ಯಧಿಕ ಸಿಕ್ಸ್‌ ದಾಖಲೆ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್‌ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಗೇಲ್ ಹೆಸರಿನಲ್ಲಿ 534 ಸಿಕ್ಸ್‌ಗಳಿವೆ. ಇನ್ನು ಇದೇ ದಾಖಲೆಯಲ್ಲಿ ದ್ವಿತೀಯ ಸ್ಥಾನದಲ್ಲಿ ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ (476 ಸಿಕ್ಸ್‌ಗಳು) ಇದ್ದಾರೆ. ಶರ್ಮಾ ಒಟ್ಟಿಗೆ 404 ಸಿಕ್ಸರ್‌ಗಳನ್ನು ಬಾರಿಸಿದಂತಾಗಿದೆ. ಈ ಮೂವರೇ ವಿಶ್ವದಲ್ಲಿ ಅಂತಾರಾಷ್ಟ್ರೀಯ 400+ ಸಿಕ್ಸರ್‌ಗಳನ್ನು ಬಾರಿಸಿದವರು.

ಎರಡರಲ್ಲಿ ಎಂಎಸ್ ಧೋನಿ

ಎರಡರಲ್ಲಿ ಎಂಎಸ್ ಧೋನಿ

ಇನ್ನು ಭಾರತದವರಲ್ಲಿ ಅತ್ಯಧಿಕ ಅಂತಾರಾಷ್ಟ್ರೀಯ ಸಿಕ್ಸರ್ ಬಾರಿಸಿದವರಲ್ಲಿ ಮಾಜಿ ನಾಯಕ ಎಂಎಸ್ ಧೋನಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಧೋನಿ 359 ಸಿಕ್ಸ್‌ ದಾಖಲೆ ಹೊಂದಿದ್ದಾರೆ. ಉಳಿದಂತೆ ಸಚಿನ್ ತೆಂಡೂಲ್ಕರ್ 264 ಸಿಕ್ಸ್‌ಗಳು, ಯುವರಾಜ್ ಸಿಂಗ್ 251 ಸಿಕ್ಸ್‌ಗಳು, ಸೌರವ್ ಗಂಗೂಲಿ 247 ಸಿಕ್ಸ್‌ಗಳನ್ನು ಬಾರಿಸಿದ್ದಾರೆ.

ಕೊಹ್ಲಿ-ರೋಹಿತ್ ಸೇಮ್ ಟು ಸೇಮ್ ರನ್!

ಕೊಹ್ಲಿ-ರೋಹಿತ್ ಸೇಮ್ ಟು ಸೇಮ್ ರನ್!

ಅಚ್ಚರಿಯ ಸಂಗತಿಯೆಂದರೆ ವಿಂಡೀಸ್ ವಿರುದ್ಧದ ಟಿ20 ಪಂದ್ಯದ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರ ಟಿ20ಐ ರನ್‌ ಕೂಡ ಒಂದೇ ರೀತಿಯಾಗಿದೆ. ರೋಹಿತ್ 96 ಇನ್ನಿಂಗ್ಸ್‌ಗಳಲ್ಲಿ 2,633 ರನ್ ಗಳಿಸಿದ್ದರೆ, ಕೊಹ್ಲಿ 70 ಇನ್ನಿಂಗ್ಸ್‌ಗಳಲ್ಲಿ 2,633 ರನ್ ಮಾಡಿದ್ದಾರೆ.

Story first published: Wednesday, December 11, 2019, 23:29 [IST]
Other articles published on Dec 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X